ಪಟ್ರೆ ಲವ್ಸ್ ಪದ್ಮ ಚಿತ್ರದಲ್ಲಿ ಅತ್ಯುತ್ತಮ ಅಭಿನಯದ ಮೂಲಕ ಮನೆ ಮಾತಾಗಿದ್ದು, ಆಕ್ಷನ್ ಮೂಲಕ ಹೆಣ್ಣು ಮಕ್ಕಳ ನಿದ್ದೆ ಕೆಡಿಸಿದ್ದ ಚೋರ ಅಜಿತ್ ಇದೇ ಸೆಪ್ಟೆಂಬರ್ನಲ್ಲಿ ಗುಬ್ಬಿ ಜತೆ ಬರಲಿದ್ದಾರೆ.
ಹದಿಹರೆಯದ ಹುಡುಗಿಯರ ಇನ್ನಷ್ಟು ನಿದ್ದೆ ಕೆಡಿಸುವ ಇನ್ನೊಂದು ಚಿತ್ರವಂತೆ ಈ ಗುಬ್ಬಿ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಚಿತ್ರದ ದ್ವನಿ ಸುರುಳಿ ಬಿಡುಗಡೆ ಆಗಿದ್ದು, ಹಾಡುಗಳನ್ನು ಕೇಳಿದ ಜನ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಖುಶಿಯಲ್ಲಿ ಚಿತ್ರಮಂದಿರಕ್ಕೂ ಬಂದು ವೀಕ್ಷಿಸಬಹುದು ಎನ್ನುವ ಆಸೆ ಚಿತ್ರತಂಡದ್ದು.
ಹಾಡಂತೂ ಅತ್ಯುತ್ತಮ ಎನ್ನುವಂತಿದೆ. ಹಿಟ್ ಕೂಡ ಆಗಿದೆ. ಇಂದಿಗೂ ನಾನಾ ಸಂಗೀತ ಮಳಿಗೆಗಳಲ್ಲಿ ಇದರ ಮಾರಾಟ ಭರದಿಂದಲೇ ಸಾಗಿದೆ. ಇದೇ ನಿರೀಕ್ಷೆಯಲ್ಲಿ ಚಿತ್ರದ ಯಶಸ್ಸು ಸಹ ನಿರೀಕ್ಷಿಸಲಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಗುಬ್ಬಿಗೆ ಒಂದು ಅರ್ಥವನ್ನು ಇದೀಗ ಘೋಷಿಸಲಾಗಿದೆ. ಅದೇನೆಂದರೆ ಇಂಗ್ಲೀಷಿನಲ್ಲಿ ಇದನ್ನು ಬಿಡಿಸಿ ಬರೆದಾಗ 'ಜಿಯುಬಿಬಿಐ' ಆಗುತ್ತೆ. ಹೀಗಾಗಿ ಇಲ್ಲಿ ಜಿ ಅಂದರೆ ಗೌತಮ್, ಯು ಅಂದರೆ ಉಮೇಶ್, ಬಿ ಅಂದರೆ ಬದ್ರಿ, ಬಿ ಅಂದರೆ ಬಾಲು ಹಾಗೂ ಇ ಅಂದರೆ ಇಂದ್ರೇಶ್. ಈ ಐವರು ಚಿತ್ರದ ನಾಯಕರು. ಇವರ ಹೆಸರಿನ ಮೊದಲ ಅಕ್ಷರ ಜೋಡಿಸಿ ಚಿತ್ರದ ಹೆಸರು ಸಿದ್ಧಪಡಿಸಲಾಗಿದೆ. ಒಟ್ಟಾರೆ ಚಿತ್ರ ತಂಡ ಬಿಡುಗಡೆಯ ದಿನವನ್ನೇ ಎದುರು ನೋಡುತ್ತಿದೆ. ಆ ನಂತರ ಪ್ರೇಕ್ಷಕರ ಪ್ರತಿಕ್ರಿಯೆಯನ್ನೂ ಕಾತರದಿಂದ ನಿರೀಕ್ಷಿಸುತ್ತಿದೆ.