ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮುದ್ದುಮುಖದ ನಟಿ ಮೀನಾ ಈಗ ತುಂಬು ಗರ್ಭಿಣಿ (Meena | Hendtheer Darbar | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡದಲ್ಲೂ ಅಭಿನಯಿಸಿ ಹೆಸರು ಮಾಡಿ ಇಂದು ದಾಂಪತ್ಯ ಜೀವನವನ್ನು ಬೆಂಗಳೂರಲ್ಲೇ ಕಳೆಯುತ್ತಿರುವ ನಟಿ ಮೀನಾಗೆ ವಿವಾಹವಾಗಿ ವರ್ಷ ಕಳೆದಿದೆ ಅಷ್ಟೇ. ಆ ಸಿಹಿ ಸುದ್ದಿಯನ್ನೇ ಮೆಲುಕು ಹಾಕುತ್ತಿರುವವರಿಗೆ ಇದರ ಬೆನ್ನಲ್ಲೇ ಇನ್ನೊಂದು ಸಿಹಿ ಸುದ್ದಿ ಕೇಳಿ ಬಂದಿದೆ ಅದೇನೆಂದರೆ ಮೀನಾ ಈಗ ಗರ್ಭಿಣಿ.

ಇತ್ತೀಚೆಗೆ ಬಿಡುಗಡೆಯಾಗಿರುವ ಹೆಂಡ್ತೀರ್ ದರ್ಬಾರ್ ಹೊರತುಪಡಿಸಿದರೆ ಅವರು ಇನ್ನಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಕಾರಣ ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯಲು ಇವರು ಇಷ್ಟಪಡುತ್ತಾರಂತೆ. ಮದುವೆ ನಂತರ ಒಪ್ಪಿಕೊಂಡ ಮೊದಲ ಹಾಗೂ ಸದ್ಯ ಕೊನೆಯ ಚಿತ್ರ ಈ ಹೆಡ್ತೀರ್ ದರ್ಬಾರ್. ಇನ್ನು ಮಗು ಆಗಿ ಕೆಲ ಸಮಯಗಳ ಕಾಲ ಚಿತ್ರರಂಗದತ್ತ ಬರುವ ಮಾತು ಆಡಲೂ ಸಾಧ್ಯವಿಲ್ಲ.

ಅಂತೂ ತಾಯಿಯಾಗುತ್ತಿರುವ ವಿಷಯ ಗಾಂಧಿನಗರದ ಮೂಲೆ ಮೂಲೆಯಲ್ಲಿ ಗುಲ್ಲಾಗಿದೆ. ಆದರೆ ಮೀನಾ ಈ ಬಗ್ಗೆ ಏನನ್ನೂ ಹೇಳಿಲ್ಲ. ಅದ್ಯಾಕೆ ಸುಮ್ಮನಿದ್ದಾರೋ ಅಂತ ಜನ ಆಡಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲಿ ಸಾಕಷ್ಟು ಉತ್ತಮ ಚಿತ್ರದಲ್ಲಿ ಅಭಿನಯಿಸಿ ಸಾಕಷ್ಟು ದೊಡ್ಡ ಅಭಿಮಾನಿ ಬಳಗ ಹೊಂದಿರುವ ಇವರು ಈಗ ತಾಯಿಯಾಗುತ್ತಿರುವ ಸುದ್ದಿಯೂ ಅಭಿಮಾನಿಗಳಲ್ಲಿ ಅಪಾರ ಸಂತಸ ಮೂಡಿದೆ. ಮುಂದೆ ಮಗು ಹುಟ್ಟಿದಾಗಲೂ ಹಬ್ಬ ಆಚರಿಸುವಲ್ಲಿ ಸಂಶಯವಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೀನಾ, ಹೆಂಡ್ತೀರ್ ದರ್ಬಾರ್, ಕನ್ನಡ ಸಿನೆಮಾ