ಪೂಜಾಗಾಂಧಿ ಏಡ್ಸ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಅಯ್ಯೋ ಇದೇನು ದುರಂತ ಅಂತ ಅಂದುಕೊಳ್ಳಬೇಡಿ. ಏಡ್ಸ್ ಜಾಗೃತಿ ಕುರಿತ ಜಾಹೀರಾತಿಗೆ ಪೂಜಾಗಾಂಧಿ ಅವರೀಗ ರಾಯಭಾರಿಯಾಗಿದ್ದಾರೆ. ಇದರಿಂದ ಈ ಬಗ್ಗೆ ಸದ್ಯ ಅವರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಹಾಲಾಯಿತು, ಚಪ್ಪಲಿಯಾಯಿತು, ತುಪ್ಪವೂ ಆಯಿತು. ಈಗ ಏಡ್ಸ್ ಎಂಬ ಮಹಾಮಾರಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅವರು ಮುಂದಾಗಿದ್ದಾರೆ. ಜಾಹೀರಾತಿನಲ್ಲಿ ಎಚ್ಐವಿ ಮತ್ತು ಏಡ್ಸ್ ಕುರಿತಂತೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಹಾಗೂ ಸೋಂಕಿನ ವಿವರವನ್ನು ಜನರಿಗೆ ಮನದಟ್ಟು ಮಾಡುವ ಕಾರ್ಯವನ್ನು ಇವರು ಮಾಡಲಿದ್ದಾರೆ.
'ಹಲೋ ನಾನು ಪೂಜಾ ಗಾಂಧಿ ಮಾತನಾಡುತ್ತಿದ್ದೇನೆ. ನಿಮಗೆ ಏಡ್ಸ್ ಸೋಂಕು ಇದೆಯಾ ಅಂತ ಪರೀಕ್ಷಿಸಿಕೊಂಡಿದ್ದೀರಾ? ಇಲ್ಲವೇ ಹಾಗಿದ್ದರೆ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡಿ. ಏಡ್ಸ್‌ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ' ಎಂದು ಅವರು ಪ್ರಚಾರ ಆರಂಭಿಸಿದ್ದಾರೆ.
ಇವರ ದ್ವನಿ ಮುದ್ರಿತ ರಿಂಗ್ ಟೋನ್‌ಗಳನ್ನು ಸಹ ಹರಿಬಿಡಲಾಗಿದ್ದು, ಏರ್ಟೆಲ್ ಹಾಗೂ ರಿಲಯನ್ಸ್ ಗ್ರಾಹಕರು ಇದರ ಲಾಭ ಪಡೆಯಬಹುದಾಗಿದೆ. ಈಗಾಗಲೇ ಇವರ ಹಾದಿಯಲ್ಲಿ ನಟ ಉಪೇಂದ್ರ, ನಟಿ ರಮ್ಯಾ, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸಹ ಕಾಣಿಸಿಕೊಂಡಿದ್ದಾರೆ.