ರವಿಚಂದ್ರನ್ ಜೊತೆ ಹೂವಾಗಿ ಅರಳಿದ ನಮಿತಾ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಹಣಕಾಸಿನ ಮುಗ್ಗಟ್ಟಿನಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ನಿರ್ದೇಶಕ ಸಾಯಿ ಪ್ರಕಾಶ್ ಅವರ ಮತ್ತೊಂದು ಚಿತ್ರಕ್ಕೆ ನಮಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಆಶ್ಚರ್ಯವೆಂದರೂ ಸತ್ಯ.
ಹೇಳಿ ಕೇಳಿ, ಕೌಟುಂಬಿಕ, ಅಣ್ಣ ತಂಗಿಯ ಸೆಂಟಿಮೆಂಟಿನ ಚಿತ್ರಗಳನ್ನೇ ಬಹುತೇಕ ನೀಡಿರುವ ಸಾಯಿಪ್ರಕಾಶ್ಗೂ ಈ ಸೆಕ್ಸೀ ನಮಿತಾಗೂ ಹೇಗಪ್ಪಾ ಸರಿಹೊಂದೀತು ಅಂತ ಲೆಕ್ಕಾಚಾರ ಹಾಕಬೇಡಿ. ಈ ಬಾರಿ ಸಾಯಿ ಪ್ರಕಾಶ್ ಸೆಂಟಿಮೆಂಟಿಂದ ಹೊರ ಬಂದಿದ್ದಾರೆ. ಒಂದು ಕೈಯಲ್ಲಿ ಶ್ರುತಿ- ರಾಮ್ ಕುಮಾರ್ ಜೋಡಿಯ ಶ್ರೀ ನಾಗಶಕ್ತಿ ಎಂಬ ಧಾರ್ಮಿಕ ಚಿತ್ರ ನಿರ್ದೇಶಿಸಲು ಹೊರಟಿರುವ ಸಾಯಿ ಪ್ರಕಾಶ್ ಅದಾದ ತಕ್ಷಣ ಭಗವಾನ್ ಎಂಎಲ್ಎ ಎಂಬ ಚಿತ್ರ ನಿರ್ದೇಶಿಸಲಿದ್ದಾರೆ. ಈ ಭಗವಾನ್ಗೆ ನಮಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಅಂದಹಾಗೆ, ಈ ಭಗವಾನ್ ಎಂಎಲ್ಎ ಚಿತ್ರ ತೆಲುಗಿನ ಆಪರೇಷನ್ ದುರ್ಯೋಧನ ಎಂಬ ಚಿತ್ರದ ರಿಮೇಕ್. ಈಗಾಗಲೇ ಉಲ್ಲಾಸ ಉತ್ಸಾಹ ಚಿತ್ರ ನಿರ್ಮಿಸಿದ್ದ ಬಿ.ಪಿ. ತ್ಯಾಗರಾಜ್ ಅವರ ಹೊಸ ಚಿತ್ರ ಇದು. ಈ ಚಿತ್ರದಲ್ಲಿ ನಮಿತಾಗೆ ನಾಯಕರಾಗಿ ಸಾಯಿಕುಮಾರ್ ಬಣ್ಣ ಹಚ್ಚಲಿದ್ದಾರೆ.
ನಾನು ಬದುಕಿನ ಆಸೆಯನ್ನೇ ಕಳೆದುಕೊಂಡ ಸಂದರ್ಭದಲ್ಲಿ ಧೈರ್ಯ ತುಂಬಿದ ಆರ್ಥಿಕ ಸಹಕಾರ ನೀಡಿದ ಆತ್ಮೀಯರಿಗಾಗಿ ಈ ಚಿತ್ರಗಳನ್ನು ಮಾಡುತ್ತಿದ್ದೇನೆ. ಈ ರೂಪದಲ್ಲಿ ಋಣ ತೀರಿಸಲು ಯತ್ನಿಸುತ್ತೇನೆ ಎಂದಿದ್ದಾರೆ.