ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರಶಸ್ತಿ ಅಭಿಮಾನಿಗಳಿಗೆ ಅರ್ಪಿತ; ವಿಷ್ಣು ನೆನೆದ ಅಂಬಿ (Ambareesh | 57th idea filmfare awards | Vishnuvardhan | The lifetime achievement award)
ಕನ್ನಡ ಚಲನಚಿತ್ರರಂಗದ ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪಡೆದ ಅಂಬರೀಷ್ ತನ್ನ ಪ್ರಶಸ್ತಿಯನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಮೊನ್ನೆ ಶನಿವಾರ ನಡೆದ ದಕ್ಷಿಣ ಭಾರತ ಫಿಲಂಫೇರ್ ಚಲನಚಿತ್ರೋತ್ಸವ ಸಮಾರಂಭದಲ್ಲಿ ಜೀವಮಾನ ಸಾಧನೆಗೆ ಪ್ರಶಸ್ತಿ ಪಡೆದ ಸಂದರ್ಭ ಈ ಮಂಡ್ಯದ ಗಂಡು ತಮ್ಮ ಪ್ರಶಸ್ತಿಗೆ ನಿಜವಾಗಿ ಅಭಿಮಾನಿಗಳಿಗೆ ಸಲ್ಲತಕ್ಕದ್ದು ಎಂಬ ಅಭಿಮಾನದ ಮಾತುಗಳನ್ನಾಗಿ ಸಂತಸದಲ್ಲಿ ಕಣ್ತುಂಬಿಕೊಂಡರು.
ಖ್ಯಾತ ಪಿಟೀಲು ವಾದಕ ಮೈಸೂರು ಟಿ.ಚೌಡಯ್ಯ ಅವರ ಮೊಮ್ಮಗನಾದ ಅಂಬರೀಷ್ ಕನ್ನಡದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಹಿರಿಯರಾಗಿರುವ ಅಂಬಿ ಪ್ರಶಸ್ತಿ ಪಡೆದುದು ಸಹಜವಾಗಿಯೇ ಕನ್ನಡಿಗರಿಗೆ, ಅವರ ಅಭಿಮಾನಿಗಳಿಗೆ ಹರ್ಷ ತಂದಿದೆ.
ಪ್ರಶಸ್ತಿ ಸ್ವೀಕರಿಸಿದ ಸಂದರ್ಭ ತನ್ನ ಅಭಿಮಾನಿಗಳನ್ನು ನೆನೆಸಿಕೊಂಡ ಸಂದರ್ಭ ಅಂಬಿ ತನ್ನ ಕುಚುಕೂ ಗೆಳೆಯ ವಿಷ್ಣುವರ್ಧನರನ್ನು ನೆನಪಿಸಿಕೊಳ್ಳಲು ಮರೆಯಲಿಲ್ಲ. ಆತನ ಸಾವಿನ ಬಗ್ಗೆ ವಿಷಾದದಿಂದ ಮಾತನಾಡಿದ ಅಂಬಿ, ಈಗ ವಿಷ್ಣು ಇರಬೇಕಿತ್ತು ಎಂದರು.
ನಾನು ಜಾಗತೀಕರಣದ ವಿರೋಧಿಯಲ್ಲ. ಆದರೆ ಆದಷ್ಟು ನಮ್ಮ ನೆಲದ ನಟಿಯರಿಗೇ ಅವಕಾಶ ನೀಡಬೇಕು ಎಂದೂ ಇದೇ ಸಂದರ್ಭ ಅಂಬಿ ಹೇಳಿದರು. ರಂಗನಾಯಕಿ ನನ್ನ ಸಿನಿಮಾ ಜೀವನಕ್ಕೆ ಬ್ರೇಕ್ ನೀಡಿದ ಚಿತ್ರ. ಇಂಥ ಸಂದರ್ಭದಲ್ಲಿ ನನ್ನ ಮೇಲೆ ನಂಬಿಕೆಯಿಟ್ಟು ಉತ್ತಮ ಪಾತ್ರಗಳನ್ನು ನೀಡಿದ ಪುಟ್ಟಣ್ಣ ಕಣಗಾಲರನ್ನು ಮರೆಯಲಾರೆ. ಪುಟ್ಟಣ್ಣ ಕಣಗಾಲರಂಥ ನಿರ್ದೇಶಕರ ಚಿತ್ರಗಳ ಮೂಲಕ ನನಗೊಂದು ಐಡೆಂಟಿಟಿ ದೊರೆಯಿತು ಎಂದರು.