ಬಹು ನಿರೀಕ್ಷೆ ಹುಟ್ಟಿಸಿದ್ದ ಹಾಗೂ ಭಾರೀ ಮೆಚ್ಚುಗೆ ಮೂಡಿಸಿದ್ದ 'ಮತ್ತೆ ಮುಂಗಾರು' ಚಿತ್ರ ನಿರೀಕ್ಷಿತ ಪ್ರೇಕ್ಷಕ ವರ್ಗವನ್ನು ಸೆಳೆಯುವಲ್ಲಿ ಮಾತ್ರ ವಿಫಲವಾಗಿದೆ. ಒಂದು ಉತ್ತಮ ಚಿತ್ರ ಆ ಮೂಲಕ ನಿರೀಕ್ಷಿತ ಯಶಸ್ಸು ಕಾಣದೆ, ಚಿತ್ರತಂಡಕ್ಕೆ ಬೇಸರ ಮೂಡಿಸಿದೆ. ಸಾಕಷ್ಟು ಹಣ ಹೂಡಿ, ಉತ್ತಮ ಕಥೆಗೆ ಬೆಲೆ ಕೊಟ್ಟು, ಪಹೊಸ ಹೊಸ ಪ್ರಯೋಗಕ್ಕೆ ಮಣೆ ಹಾಗಿ ಚಿತ್ರ ನಿರ್ಮಿಸಿದ್ದ ಇ.ಕೃಷ್ಣಪ್ಪನವರ ಪ್ರಯತ್ನಕ್ಕೆ ಪ್ರೇಕ್ಷಕ ಮೂತಿ ತಿರುವಿದ್ದಾನೆ.
ಹಾಗಂತ ಚಿತ್ರ ಫ್ಲಾಪ್ ಅಂತ ಹೇಳಲಾಗದು. ನಿರೀಕ್ಷಿತ ಯಶಸ್ಸು ಕಂಡಿಲ್ಲ ಅಷ್ಟೆ. ನಿರ್ಮಾಪಕ ಇ. ಕೃಷ್ಣಪ್ಪ ಅವರ ಹಿಂದಿನ ಎರಡು ಅದ್ದೂರಿ ಯಶಸ್ಸಿನ ಚಿತ್ರಕ್ಕೆ ಹೋಲಿಸಿದರೆ ಇದಕ್ಕೆ ಪ್ರೇಕ್ಷಕ ಪ್ರಭುವಿನಿಂದ ಸಪ್ಪೆಯಾದ ಪ್ರತಿಕ್ರಿಯೆ ಬಂದಿದೆ.
ನಿರ್ದೇಶಕ ದ್ವಾರ್ಕಿ ನಿಜಕ್ಕೂ ಸಾಹಸ ಪಟ್ಟ ಚಿತ್ರ ನಿರ್ದೇಶಿಸಿದ್ದಾರೆ. ಶ್ರಮಕ್ಕೆ ಇಲ್ಲಿ ಬೆಲೆಯೇ ಇಲ್ಲದಂತೆ ಆಗಿದೆ. ಪ್ರತಿ ಫ್ರೇಮ್‌ನಲ್ಲೂ ಸಹಜತೆಯನ್ನು ಲೀಲಾಜಾಲವಾಗಿ ತೆರೆಯ ಮೇಲೆ ಹರಿಸಿ ಬಿಟ್ಟಿರುವ ಇವರು ನಿಜಕ್ಕೂ ಒಬ್ಬ ಸಾಹಸಿ ನಿರ್ದೇಶಕ ಅನ್ನಲು ಅಡ್ಡಿ ಇಲ್ಲ.
ಮಾಧ್ಯಮಗಳಿಂದ ಅತ್ಯಂತ ಪ್ರಶಂಸೆಗೆ ಒಳಗಾಗಿದ್ದ ಈ ಚಿತ್ರವನ್ನು ಜನ ಏಕೆ ತಿರಸ್ಕರಿಸಿದರು ಅನ್ನುವುದು ಇದುವರೆಗೂ ಅರ್ಥವಾಗುತ್ತಿಲ್ಲ. ಒಂದೇ ವಾರ ನಾಲ್ಕು ಚಿತ್ರ ತೆರೆಗೆ ಬಂದಿದ್ದು, ಅದರಲ್ಲಿ ಶಿವರಾಜ್ಕುಮಾರ್ ಅಭಿನಯದ ಚೆಲುವೆಯೇ ನಿನ್ನ ನೋಡಲು ಸಹ ಇರುವುದು ಈ ಚಿತ್ರದ ಸೋಲಿಕೆ ಕಾರಣ ಇರಬಹುದೆಂದು ಕೆಲ ವಿಮರ್ಶಕರು ಅಭಿಪ್ರಾಯ ಪಡುತ್ತಿದ್ದಾರೆ. ಒಟ್ಟಾರೆ ಉತ್ತಮ ಚಿತ್ರ ನೀಡಿದರೂ ಪ್ರೇಕ್ಷಕನ ಅವಜ್ಞೆ ಮಾತ್ರ ಯಾಕೆ ಎಂದು ತಿಳಿಯೋದು ಸುಲಭ ಅಲ್ಲ ಬಿಡಿ.