ದುನಿಯಾ ವಿಜಯ್ ಅಭಿನಯದ ವೀರಬಾಹು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ನಗರದ ಹಲವು ಭಾಗದಲ್ಲಿ, ರಾಜ್ಯದ ಕೆಲವೆಡೆ ಚಿತ್ರ ತಂಡ ಬೀಡು ಬಿಟ್ಟಿದ್ದು, ಸದ್ಯ ಚಿತ್ರತಂಡ ಮೇಲುಕೋಟೆಯಲ್ಲಿ ವಿರಾಮವಿಲ್ಲದೇ ಚಿತ್ರೀಕರಣ ನಡೆಸಲಾಗುತ್ತಿದೆ.
ಸಂದೇಶ್ ಕಂಬೈನ್ಸ್ ಲಾಂಛನದಡಿ ನಿರ್ಮಾಪಕ ಸಂದೇಶ್ ನಾಗರಾಜ್ ಅತಿ ಮಹತ್ವಾಕಾಂಕ್ಷೆಯಿಂದ ನಿರ್ಮಿಸುತ್ತಿರುವ ಚಿತ್ರ ವೀರಬಾಹು. ನಿಸರ್ಗದ ರಮಣೀಯ ದೃಶ್ಯಗಳುಳ್ಳ ಈ ಮೇಲುಕೋಟೆ ಈ ಚಿತ್ರದಲ್ಲಿ ನಾಯಕಿಯ ತವರೂರು. ಹೀಗಾಗಿ ನಾಯಕಿಯ ತವರಿನ ದೃಶ್ಯಗಳು ಹಾಗೂ ಮದುವೆಯ ಸಂದರ್ಭದ ದೃಶ್ಯಗಳನ್ನು ಸೆರೆಹಿಡಿಯಲಾಯಿತು.
ಒಟ್ಟಾರೆ ಇಡೀ ಚಿತ್ರ ತಂಡ ಇದೀಗ ಗಂಭೀರವಾಗಿ ಮೇಲುಕೋಟೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಇನ್ನೂ ಕೆಲ ದಿನಗಳ ಶೂಟಿಂಗ್ ಬಾಕಿ ಇದೆ ಎಂದು ಚಿತ್ರದ ನಿರ್ದೇಶಕ ಎಸ್. ಮಹೇಂದರ್ ತಿಳಿಸಿದರು.
ಚಿತ್ರದಲ್ಲಿ ವಿಜಯ್, ನಿಧಿ ಸುಬ್ಬಯ್ಯ, ಎ.ಟಿ.ರಘು, ರಂಗಾಯಣ ರಘು, ಅವಿನಾಶ್, ಧರ್ಮ, ವಿನಯಾ ಪ್ರಸಾದ್, ಕಿಶೋರಿ ಬಲ್ಲಾಳ್, ಅಚ್ಯುತ್ ಕುಮಾರ್, ರೇಖಾ ಕುಮಾರಿ ಮುಂತಾದವರು ಇದ್ದಾರೆ. ಇವರೆಲ್ಲಾ ಸದ್ಯ ಚಿತ್ರೀಕರಣ ತಾಣದಲ್ಲಿದ್ದು, ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಚಿತ್ರ ತಂಡ ಆಗಸ್ಟ್ 15ರ ನಂತರ ಮುತ್ತತ್ತಿ ಹಾಗೂ ಮೇಕೆದಾಟಿನಲ್ಲಿ ಚಿತ್ರೀಕರಣ ನಡೆಸಲಿದೆ. ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದು, ಅನಂತ್ ಅರಸ್ ಛಾಯಾಗ್ರಹಣವಿದೆ. ದೀಪು ಕುಮಾರ್ ಸಂಕಲನ, ಪ್ರಸಾದ್ ಸಹ ನಿರ್ದೇಶನ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ವಿಜಯಕುಮಾರ್ ನಿರ್ಮಾಣ ನಿರ್ವಹಣೆ ಇದೆ.