ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಂದಿತಾ ದಾಸ್ ಈಗ ಗಂಡು ಮಗುವಿನ ನಾಯಕಿ (Nanditha Das | Subodh | Deveeri)
ಸುದ್ದಿ/ಗಾಸಿಪ್
Bookmark and Share Feedback Print
 
IFM
ದೇವೀರಿ ಚಿತ್ರ ನೋಡಿದವರಿಗೆಲ್ಲಾ ನಾಯಕಿ ನಂದಿತಾ ದಾಸ್ ಗೊತ್ತಿಲ್ಲದವರಿಲ್ಲ. ಅಗಾಧ ಪ್ರತಿಭೆಯಿರುವ ಈ ಕೃಷ್ಣ ಸುಂದರಿ ಇದೀಗ ಗಂಡು ಮಗುವಿನ ತಾಯಿಯಾಗಿದ್ದಾರೆ.

ತಮ್ಮ 41ನೇ ವಯಸ್ಸಿನಲ್ಲಿ ಅಮ್ಮನಾಗಿರುವ ನಂದಿತಾ ಕಳೆದ ವಾರ ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ.

IFM
ಜನವರಿ 2010ರಂದು ಉದ್ಯಮಿ ಸುಭೋದ್ ಮಸ್ಕರ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ನಂದಿತಾಗೆ ವರ್ಷದೊಳಗೆ ಬೋನಸ್ ಲಭಿಸಿದೆ. 2002ರಲ್ಲಿ ತಮ್ಮ ಬಾಲ್ಯದ ಗೆಳೆಯ ಸೌಮ್ಯ ಸೇನ್ ಅವರನ್ನು ವಿವಾಹವಾಗಿದ್ದರೂ, ದಾಂಪತ್ಯ ಬದುಕಿನಲ್ಲಿ ಶ್ರುತಿ ಮಿಡಿಯಲಿಲ್ಲ. ಹೀಗಾಗಿ ಇವರ ವೈವಾಹಿಕ ಬದುಕು ಹಳಿ ತಪ್ಪಿ 2009ರಲ್ಲಿ ವಿಚ್ಛೇದನ ಪಡೆದಿದ್ದರು.

ಇದೇ ಸಂದರ್ಭ, ನಟಿ ಸಹನಾ ಗೋಸ್ವಾಮಿ ಅವರ ಮೂಲಕ ಪರಿಚಯವಾಗಿದ್ದ ಸುಬೋಧ್ ಜೊತಗಿನ ಒಡನಾಟ ಪ್ರೀತಿಯಾಗಿ ಮಾರ್ಪಟ್ಟಿದ್ದು, ಪ್ರೀತಿ ಬಹುಬೇಗ ಹೆಮ್ಮರವಾಗಿ ಸರಳವಾಗಿ ಮದುವೆಯೂ ಆಗಿದ್ದರು. ಇದೀಗ ತಾಯಿಯೂ ಆಗಿದ್ದಾರೆ.

ಸುಬೋಧ್ ಹಾಗೂ ನಂದಿತಾ ಮನೆಯಲ್ಲೀಗ ಹಬ್ಬದ ವಾತಾವರಣ ಕಂಡು ಬರುತ್ತಿದೆ. ನಾವು ಯಾವತ್ತೂ ಗಂಡು ಮಗು ಬೇಕೆಂದು ದೇವರಲ್ಲಿ ಬೇಡಿಕೊಂಡಿರಲಿಲ್ಲ. ಆರೋಗ್ಯವಂತ ಮಗು ಹುಟ್ಟಿದರೆ ಸಾಕೆಂದು ಅಂದುಕೊಂಡಿದ್ದೆವು. ಈಗ ನಾವಂದುಕೊಂಡಂತೆಯೇ ಆಗಿದೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುತ್ತಾರೆ ಸುಭೋದ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಂದಿತಾ ದಾಸ್, ಸುಬೋಧ್, ದೇವೀರಿ