ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕುಶಾಲನಗರದ ಕಾಟೇಜಲ್ಲಿ ರಮ್ಯ, ಚಿರಂಜೀವಿ ಪ್ರಣಯಗಾನ! (Kushal Nagar chakli Hole | Chiranjeevi Sarja | Dhandam Dhashagunam | Ramya)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ರಮ್ಯಾ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ದಂಡಂ ದಶಗುಣಂ ಚಿತ್ರದ ಹಾಡಿನ ಚಿತ್ರೀಕರಣ ಕುಶಾಲ ನಗರದಲ್ಲಿ ಭರದಿಂದ ಸಾಗಿದೆ. ಕುಶಾಲ ನಗರದ ಸಮೀಪ ಇರುವ ಚಕ್ಲಿ ಹೊಳೆ ಸಮೀಪ ಚಿತ್ರದ ಪ್ರಣಯ ಗೀತೆಯೊಂದರ ಶೂಟಿಂಗ್ ನಡೆಯುತ್ತಿದೆ. ರೊಮ್ಯಾಂಟಿಕ್ ಜಾಗದಲ್ಲಿ ಬೆಡ್ ರೂಂನ ಸರಸ ಸಲ್ಲಾಪಗಳ ರೊಮ್ಯಾಂಟಿಕ್ ಹಾಡಿಗಾಗಿ ಅಲ್ಲಿ ಆಕ್ಷನ್, ಕಟ್ ನಿರಂತರವಾಗಿ ಸಾಗಿತ್ತು.

ಚಿತ್ರದ ಒಂದೇ ಒಂದು ಹಾಡಿಗಾಗಿ 60 ಲಕ್ಷ ರೂಪಾಯಿ ವೆಚ್ಚ ಮಾಡಿ ಚಕ್ಲಿ ಹೊಳೆ ತೀರದಲ್ಲೇ ಕಾಟೇಜ್ ಒಂದನ್ನು ನಿರ್ಮಿಸಿ ಅಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಯಿತು. ಚಿನ್ನಿ ಪ್ರಕಾಶ್ ನೃತ್ಯ ನಿರ್ದೇಶನದಲ್ಲಿ ನಡೆಯುತ್ತಿದ್ದ ಹಾಡಿಗೆ ಅವರು ತಮಗೆ ಬೇಕಾದ ರೀತಿ ಕ್ಯಾಂಡಲ್ ಬೆಳಕಿನ ಗಮ್ಮತ್ತಿನಲ್ಲಿ ರೋಮಾಂಚಕ ದೃಶ್ಯಗಳನ್ನು ಸೃಷ್ಟಿಸಿದರು. ಈ ಹಾಡಿನ ಚಿತ್ರೀಕರಣದಲ್ಲಿ ಚಿತ್ರದ ನಾಯಕ ಚಿರು ಹಾಗೂ ನಾಯಕಿ ರಮ್ಯಾ ಪಾಲ್ಗೊಂಡರು.

ಈ ಹಾಡಿಗೆ ಹರಿಕೃಷ್ಣ ಸಂಗೀತ ನಿರ್ದೇಶನ ನೀಡುವ ಈ ಹಾಡಿಗೆ ಸಾಕಷ್ಟು ಬೆವರಿಳಿಸಿಕೊಂಡ ನಂತರ, ಹಾಡಿನ ದೃಶ್ಯವನ್ನು ಮಾನಿಟರ್‌ನಲ್ಲಿ ನೋಡಿ ಆನಂದಿಸಿದರು ಚಿರು ಹಾಗೂ ರಮ್ಯಾ.

ಕೆಂಪು ಸೀರೆಯ ಮೇಲೆ ಮಾಂಗಲ್ಯ ಸರ ರಾರಾಜಿಸುತ್ತಿದ್ದ ರಮ್ಯಾ ಪಕ್ಕಾ ಗೃಹಿಣಿಯಂತೆ ಗೋಚರಿಸುತ್ತಿದ್ದರು. ಬೇರೆಲ್ಲಾ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಕೊಂಚ ಸ್ಲಿಂ ಆಗಿ ಕಾಣುತ್ತಿದ್ದರು ಎನ್ನುವುದು ಇನ್ನೊಂದು ವಿಶೇಷ. ಚಿತ್ರಕ್ಕೆ ಈ ಹಾಡು ಅತ್ಯಂತ ಮಹತ್ವದ್ದಾಗಿದ್ದು, ಸಾಕಷ್ಟು ಮುತುವರ್ಜಿಯಿಂದ ಸಿದ್ಧಪಡಿಸಿದ್ದಾಗಿ ನಿರ್ಮಾಪಕ ಗಣೇಶ್ ಹೇಳುತ್ತಾರೆ.

ಈ ಹಾಡಿಗಾಗಿ ಕ್ಯಾಂಡಲ್ ಬೆಳಕಿನಲ್ಲೇ ಪ್ರಣಯ ಗೀತೆ ಹಾಡಿಸಿದ್ದೇವೆ. ನಿಜಕ್ಕೂ ಚಿತ್ರ ವೀಕ್ಷಿಸಿದಾಗ ಇದರ ಮಹತ್ವ ಅರಿವಾಗಲಿದೆ ಎನ್ನುತ್ತಾರೆ. ಮನೋಹರ್ ಚಿತ್ರಕ್ಕೆ ಛಾಯಾಗ್ರಾಹಕರು. ರೊಮ್ಯಾಂಟಿಕ್ ಹಾಡಿನ ದೃಶ್ಯ ಶೂಟ್ ಮಾಡೋದು ಬಹಳ ಕಷ್ಟ. ಆದರೂ ಮನೋಹರ್ ಇದರಲ್ಲಿ ಗೆದ್ದಿದ್ದಾರೆ ಎನ್ನುತ್ತಾರೆ ಚಿನ್ನಿ ಪ್ರಕಾಶ್.

ರಮ್ಯ, ಚಿರಂಜೀವಿ ಜೋಡಿಯ ರಸಮಯ ಸನ್ನಿವೇಶಗಳಿಗೆ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕುಶಾಲನಗರ ಚಕ್ಲಿ ಹೊಳೆ, ರಮ್ಯ, ಚಿರಂಜೀವಿ ಸರ್ಜಾ, ದಂಡಂ ದಶಗುಣಂ