ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡಕ್ಕೊಂದು ಸೆಳೆತವಿದೆ: ಸೋನು ನಿಗಂ ಕನ್ನಡಾಭಿಮಾನ (Sonu Nigam | Bollywood | Mungaru Male)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಸೋನು ನಿಗಮ್ ಬಗ್ಗೆ ಪ್ರತೇಕವಾಗಿ ಹೇಳುವ ಅಗತ್ಯ ಇಲ್ಲ. ಆದರೂ ಇವರು ಬಾಲಿವುಡ್ ಗಾಯಕ ಎಂದೇ ಜನಪ್ರಿಯರಾದವರು. ಆದರೆ ಇತ್ತೀಚೆಗೆ ಅವರೊಂದು ಸತ್ಯವನ್ನು ಹೊರಗೆಡವಿದ್ದಾರೆ. ಅದೇನೆಂದರೆ ಅವರ ಜನಪ್ರಿಯತೆ ಮುಂಬೈಗಿಂತ ಬೆಂಗಳೂರಲ್ಲೇ ಹೆಚ್ಚಿದೆಯಂತೆ.

ತಮ್ಮ ಮಧುರ ಗಾಯನಕ್ಕೆ ಕನ್ನಡಿಗರು ಹಾಗೂ ಗಾಂಧಿನಗರ ತೋರಿಸಿದ ಅಕ್ಕರೆ, ಪ್ರೀತಿ, ಪ್ರೋತ್ಸಾಹಕ್ಕೆ ಇವರು ಮನದುಂಬಿ ಮಾತನಾಡಿದ್ದಾರೆ. ಇಲ್ಲಿನವರ ಪ್ರೀತಿ ನನ್ನನ್ನು ಆಗಾಗ ಇತ್ತ ಬರುವಂತೆ ಮಾಡುತ್ತದೆ ಎಂದು ಮನಬಿಚ್ಚಿ ಹೇಳಿದ್ದಾರೆ.

ಇಲ್ಲಿ ಹಾಡಿದ್ದರಿಂದ ತಮಗೆ ಒಳ್ಳೆಯ ಹೆಸರು, ಕೀರ್ತಿ ಲಭಿಸಿದೆ. ಮುಂಗಾರು ಮಳೆಯ ಒಂದೆರಡು ಹಾಡು ಅವರಿಗೆ ಇಂದಿಗೂ ಬಲು ಇಷ್ಟವಂತೆ. ಆಗಾಗ ಒಬ್ಬನೇ ಇರುವಾಗ 'ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ...', 'ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು...' ಹಾಡನ್ನು ಗುನುಗುವುದಾಗಿ ಹೇಳಿಕೊಳ್ಳುತ್ತಾರೆ. ನಾನಾ ಭಾಷೆಗಳಲ್ಲಿ ಸಾಕಷ್ಟು ಹಾಡನ್ನು ಹಾಡಿದ್ದೇನೆ. ಆದರೆ ಈ ಹಾಡು ನನಗೆ ಹುಚ್ಚು ಹಿಡಿಸಿದೆ ಎನ್ನುತ್ತಾರೆ.

ಕನ್ನಡ ಭಾಷೆಯಲ್ಲಿ ಏನೋ ಒಂದು ಸೆಳೆತವಿದೆ. ಆ ಭಾಷೆಗೆ ವಿಶಿಷ್ಟ ಸೊಗಡಿದೆ. ನನಗೆ ಈ ಭಾಷೆ ತಿಳಿದಿಲ್ಲದಿಲ್ಲದಿದ್ದರೂ ಹಲವು ಸಂಗೀತ ನಿರ್ದೇಶಕರು ನನಗೆ ಗೀತೆಯನ್ನು ಅರ್ಥೈಸಿ ಭಾವಪೂರ್ಣವಾಗಿ ಹಾಡಲು ತಿಳಿಸಿಕೊಟ್ಟಿದ್ದಾರೆ. ಇದರಿಂದ ಕನ್ನಡಕ್ಕೆ ಬಂದ ಮೇಲೆ ನಾನು ಸಾಕಷ್ಟು ಹೊಸ ಟ್ಯೂನ್‌ಗಳನ್ನು ಕಲಿತಿದ್ದೇನೆ. ಈಗ ನನಗೆ ಕನ್ನಡದಲ್ಲಿ ಬೇಕಾದಷ್ಟು ಅವಕಾಶಗಳಿವೆ. ಅಂದೊಮ್ಮೆ ನಾನೂ ಕೂಡಾ ಅವಕಾಶಗಳೇ ಇಲ್ಲದೆ ಸಾಕಷ್ಟು ಕಷ್ಟಪಟ್ಟಿದ್ದೇನೆ. ಆಗ ಕನ್ನಡದಲ್ಲಿ ನನಗೆ ಅವಕಾಶ ಸಿಕ್ಕು ಈಗ ಬೆಂಗಳೂರು ನನ್ನ ಎರಡನೇ ಮನೆಯೇ ಆಗಿದೆ ಎಂದು ಸೋನು ಕನ್ನಡದ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಾರೆ ಸೋನು.

ತಮ್ಮ ಹಾಡಲ್ಲಿ ಕೆಲ ಭಾಷಾ ಪ್ರಯೋಗದ ದೋಷ ಇರುವ ಬಗ್ಗೆ ಗಮನ ಸೆಳೆದಾಗ, ಹೌದು, ಇದು ನನಗೂ ಅರಿವಾಗಿದೆ. ಆದರೆ ಇದಕ್ಕೆ ಕಾರಣ ನಾನು ತಪ್ಪಿದಲ್ಲಿ ಯಾರೂ ಅದನ್ನು ಹೀಗಲ್ಲಾ ಹಾಗೆ ಅಂತ ತಿದ್ದಿ ಹೇಳುವುದಿಲ್ಲ. ಆ ಅಳುಕು ಇರಿಸಿಕೊಂಡರೆ ನನಗೇ ತೊಂದರೆ ಅಂತ ಎಲ್ಲರಿಗೂ ಸಿಕ್ಕ ಸಿಕ್ಕಲ್ಲಿ ತಪ್ಪಿದ್ದರೆ ತಿಳಿಸಿ ಅನ್ನುತ್ತೇನೆ. ಹೇಳಿದರೆ ಖಂಡಿತಾ ತಿದ್ದಿಕೊಳ್ಳುತ್ತೇನೆ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೋನು ನಿಗಂ, ಬಾಲಿವುಡ್, ಮುಂಗಾರು ಮಳೆ