ಕನ್ನಡದಲ್ಲಿ ನೈವೇದ್ಯ ನೋಡುವ ಆಸೆ ಇದೆಯೇ? ಹಾಗಾದರೆ ನೀವು ಕೆಲ ದಿನ ಕಾಯಬೇಕು. ಇದೇನು ಕನ್ನಡ, ನೈವೇದ್ಯ ಅಂತೆಲ್ಲಾ ಅನ್ನುತ್ತಿದ್ದೇವೆ ಅಂದು ಕೊಂಡಿರಾ? ಹೌದು, ಮಲಯಾಳಂನ ಜನಪ್ರಿಯ ಚಿತ್ರ ನೈವೇದ್ಯಂ ಕನ್ನಡಕ್ಕೆ ರಿಮೇಕ್ ಆಗಿ ಬರುತ್ತಿದೆ. ಇದನ್ನು ಓಮರ್ ಷರೀಫ್ ನಿರ್ಮಿಸುತ್ತಿದ್ದಾರೆ.
ವಿಜಯ್ ರಾಘವೇಂದ್ರ ಚಿತ್ರದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ನಾಯಕಿಯ ಆಯ್ಕೆ ಇದುವರೆಗೂ ಆಗಿಲ್ಲ. ಹೊಸ ಮುಖ ಪರಿಚಯಿಸುವ ಆಶಯವನ್ನು ಹೊಂದಲಾಗಿದೆ. ಚಿತ್ರಕ್ಕೆ ಸಾಕಷ್ಟು ಹೆಸರುಗಳು ಕೇಳಿ ಬರುತ್ತಿದ್ದು, ಒಂದು ವಾರದಲ್ಲಿ ಎಲ್ಲವೂ ಅಂತಿಮವಾಗಲಿದೆಯಂತೆ. ತಂತ್ರಜ್ಞರ ಆಯ್ಕೆಯೂ ಜತೆ ಜೊತೆಗೆ ನಡೆಯುತ್ತಿದೆ.
ಇನ್ನು ಮಲಯಾಳಂನಲ್ಲಿ ನೈವೇದ್ಯಂನ ಮೂಲ ಕಥೆಗೆ ಧಕ್ಕೆ ಆಗದ ರೀತಿ ಇದನ್ನು ಸಿದ್ಧಪಡಿಸಲಾಗಿದೆ. ಬಿ.ಎ. ಮಧು ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದು, ಇಲ್ಲಿನ ಸ್ಥಳೀಯತೆಯ ಸ್ಪರ್ಷ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ, ಈ ಚಿತ್ರ ಹಾಡನ್ನೇ ನಂಬಿಕೊಂಡಿದ್ದು, ಚಿತ್ರಕ್ಕೆ ಉತ್ತಮ ಹಾಡುಗಳನ್ನು ರಚಿಸುವ ಕಾರ್ಯ ಜಾರಿಯಲ್ಲಿದೆ. ಬಹುತೇಕ ಸಂಗೀತವನ್ನು ಮಲಯಾಳಂನ ನೈವೇದ್ಯಂಗೆ ಸಂಗೀತ ನೀಡಿರುವ ಜಯಚಂದ್ರನ್ ಅವರ ಟ್ಯೂನ್‌ಗಳನ್ನೇ ಬಳಸಲು ನಿರ್ಧರಿಸಲಾಗಿದೆ. ನವೆಂಬರ್ ತಿಂಗಳು ಚಿತ್ರ ಮೈಸೂರಿನಲ್ಲಿ ಸೆಟ್ಟೇರುವ ನಿರೀಕ್ಷೆ ಇದೆ.