ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೋಡಿ ಮಾಡಿದ ಪುನೀತ್‌ರ ಜಾಕಿಯ ಹಾಡು (Jackie | Puneet | Duniya Suri | Yogaraj Bhat)
ಸುದ್ದಿ/ಗಾಸಿಪ್
Bookmark and Share Feedback Print
 
PR
ಪುನಿತ್ ಅಭಿನಯದ ಚಿತ್ರ ಗೆಲ್ಲಲು ಏನು ಕಾರಣ ಅಭಿನಯ? ಆಕ್ಷನ್? ಗಿಮಿಕ್? ಅದ್ದೂರಿತನ? ಅಥವಾ ಹಾಡು? ಉತ್ತಮ ಕಥೆ? ಎನ್ನುವ ಪ್ರಶ್ನೆಗೆ ಆಗಾಗ ಒಂದೊಂದು ಉತ್ತರ ಸಿಗುತ್ತದೆ. ಕೆಲವೊಮ್ಮೆ ಈ ಎಲ್ಲವೂ ಜಯಕ್ಕೆ ಕಾರಣವಾಗಿರಬಹುದು. ಈಗ ಸದ್ಯಕ್ಕೆ ಜಾಕಿ ಚಿತ್ರದ ಬಗ್ಗೆ ಸದ್ಯಕ್ಕೆ ಸಿಕ್ಕಿರುವ ಉತ್ತರ 'ಹಾಡು'!

ಹೌದು. ಯೋಗರಾಜ ಭಟ್ಟರು ಚಿತ್ರಕ್ಕಾಗಿಯೇ ವಿಶೇಷ ಹಾಡು ರಚಿಸಿ ಕೊಟ್ಟಿದ್ದರಿಂದ ಪುನಿತ್ ರಾಜ್‌ಕುಮಾರ್ ಅಭಿನಯದ ಹೊಸ ಚಿತ್ರ 'ಜಾಕಿ'ಗೆ ಹಾಡೇ ಜೀವಾಳವಂತೆ. ಬರೊಬ್ಬರಿ ಐದು ಹಾಡುಗಳನ್ನು ಭಟ್ಟರು ಬರೆದುಕೊಟ್ಟಿದ್ದು, ಎಲ್ಲವೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿದೆಯಂತೆ. ಒಟ್ಟಾರೆ ಚಿತ್ರಕ್ಕೆ ಹಾಡೇ ಜೀವನ ಅನ್ನುತ್ತಾರೆ ಪುನಿತ್ ಅಣ್ಣ ಹಾಗೂ ನಟ ರಾಘವೇಂದ್ರ ರಾಜ್ ಕುಮಾರ್.

PR
ರಾಜ್‌ಕುಮಾರ್ ಕುಟುಂಬದ ಹೋಂ ಬ್ಯಾನರ್ ಅಡಿ ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಮೇಲೆ ಕುಟುಂಬ ಅಪಾರವಾದ ನಿರೀಕ್ಷೆ ಹೊಂದಿದೆ. ಚಿತ್ರದ ಹಾಡು ತುಂಬಾ ಭಿನ್ನವಾಗಿದೆ. ಸೂಪರ್ ಡ್ಯೂಪರ್ ಹಿಟ್ ಆಗುವಲ್ಲಿ ಯಾವ ಸಂಶಯವೂ ಇಲ್ಲ ಎನ್ನುತ್ತಾರೆ ನಿರ್ದೇಶಕ ಸೂರಿ.

ಹಾಡಿನ ಚಿತ್ರೀಕರಣದಲ್ಲಿ ಇಡೀ ಚಿತ್ರೀಕರಣ ಯುನಿಟ್, ಚಿತ್ರ ತಂಡ ಸಕ್ರಿಯವಾಗಿರುತ್ತದೆ. ಪ್ರತಿಯೊಬ್ಬರಿಗೂ ಕೈತುಂಬಾ ಕೆಲಸ ಇರುತ್ತದೆ. ನಮ್ಮ ಯೂನಿಟ್‌ನಲ್ಲಿ ಸಹ ಇರುವ 150 ಮಂದಿ ಹಾಡಿನ ಸಂದರ್ಭದಲ್ಲಿ ತುಂಬಾ ಬ್ಯುಸಿ ಆಗಿ ಬಿಟ್ಟಿದ್ದರು. ಒಟ್ಟಾರೆ ಈ ಚಿತ್ರಕ್ಕೆ ಹಾಡು ಪ್ಲಸ್ ಪಾಯಿಂಟ್ ಅನ್ನುವುದು ಅವರ ಮಾತು. ಒಟ್ಟಾರೆ ಜಾಕಿ ಹಾಡು ಬಿಡುಗಡೆ ಆದ ವಾರದಲ್ಲೇ ಎಲ್ಲರ ಅಚ್ಚುಮೆಚ್ಚಾಗಿದೆ. ಈಗಲೇ ಚಿತ್ರದ ಹಾಡು ಎಲ್ಲೆಡೆ ರಿಂಗಿಣಿಸುತ್ತಿದೆ. ಮುಂದೆ ಚಿತ್ರವನ್ನೂ ಜನ ನೋಡಿ ಆನಂದಿಸುವಂತಾದರೆ ಚಿತ್ರತಂಡ ಪಟ್ಟ ಶ್ರಮ ಸಾರ್ಥಕವಾದಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಕಿ, ಪುನೀತ್ ರಾಜ್ ಕುಮಾರ್, ದುನಿಯಾ ಸೂರಿ, ಯೋಗರಾಜ ಭಟ್