ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಪ್ರಕಾಶ್ ರೈ (Prakash Rai | Prakash Raj | Kannada Cinema | Pony Verma | Nanu Nanna Kanasu)
ಸುದ್ದಿ/ಗಾಸಿಪ್
Bookmark and Share Feedback Print
 
PR
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ, ಮೇಲಾಗಿ ಕನ್ನಡಿಗ ಪ್ರಕಾಶ್ ರೈ ಎರಡನೇ ಮದುವೆಯಾಗಿದ್ದಾರೆ. ಬಾಲಿವುಡ್ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಜೊತೆ ಮಂಗಳವಾರ (ಆ.24) ಪ್ರಕಾಶ್ ಹಸೆಮಣೆಯೇರಿದರು. ಮೊದಲ ಪತ್ನಿ ಲಲಿತಾ ಕುಮಾರಿ (ನಟಿ ಡಿಸ್ಕೋ ಶಾಂತಿಯ ಸಹೋದರಿ) ಜೊತೆಗೆ ಕೆಲ ತಿಂಗಳುಗಳ ಹಿಂದೆ ವಿಚ್ಛೇದನ ಪಡೆದಿದ್ದ ಪ್ರಕಾಶ್ ರೈ ಕಳೆದೆರಡು ವರ್ಷಗಳಿಂದ ಪೊನಿ ವರ್ಮಾರ ಗೆಳೆಯರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಮದುವೆಯೂ ಆಗಿದ್ದಾರೆ.

ಮುಂಬೈಯಲ್ಲಿ ಹಿಂದೂ ಸಂಪ್ರದಾಯ ಬದ್ಧವಾಗಿ ಈ ಮದುವೆ ನಡೆಯಿತು. ಕನ್ನಡಿಗರಾದರೂ ಪಂಜಾಬಿ ಪದ್ಧತಿಯಲ್ಲೇ ಮದುವೆಯಾದ ಪ್ರಕಾಶ್ ರೈ, ಸದ್ಯದಲ್ಲೇ ತಾಯಿಯ ಇಚ್ಛೆಯಂತೆ ಚರ್ಚ್‌ನಲ್ಲೂ ವಿವಾಹವಾಗಲಿದ್ದಾರೆ ಎನ್ನುವ ಮಾಹಿತಿಗಳೂ ಇವೆ. ಜೊತೆಗೆ ಸದ್ಯದಲ್ಲೇ ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್ ಗೆಳೆಯರಿಗಾಗಿ ಪ್ರಕಾಶ್ ರೈ ದಂಪತಿ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ಗಳಲ್ಲೂ ಔತಣಕೂಟವನ್ನು ನಡೆಸಲಿದ್ದಾರೆ.

ಈ ನೂತನ ಮದುವೆಯ ನಂತರ ಮುಂಬೈಯಲ್ಲೇ ನೆಲೆಸಲು ತೀರ್ಮಾನಿಸಿರುವ ಪ್ರಕಾಶ್ ರೈ, ಇತ್ತೀಚೆಗಷ್ಟೇ ಮುಂಬೈನ ಜುಹುನಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ. ಹೊಸ ದಾಂಪತ್ಯಕ್ಕೆ ಕಾಲಿಟ್ಟಿರುವ ಈ ನವಜೋಡಿ ಕುಲು ಹಾಗೂ ಮನಾಲಿಯ ಚಳಿಯಲ್ಲಿ ಮಧುಚಂದ್ರ ಆಚರಿಸಲು ತೆರಳಲಿದ್ದಾರೆ.

ಪ್ರಕಾಶ್ ರೈ ಅವರ ನೂತನ ದಾಂಪತ್ಯ ಜೀವನಕ್ಕೆ ಶುಭ ಹಾರೈಕೆಗಳು. ಪ್ರಕಾಶ್ ರೈ ಮದುವೆಯ ಔತಣಕೂಟದ ಇನ್ನಷ್ಟು ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ...
 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಕಾಶ್ ರೈ, ಪೋನಿ ವರ್ಮಾ, ಕನ್ನಡ ಸಿನೆಮಾ, ನಾನು ನನ್ನ ಕನಸು