ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಶಿಷ್ಟ ಗೆಟಪ್ಪಿನಲ್ಲಿ ಸಂಗೊಳ್ಳಿ ರಾಯಣ್ಣನಾಗಲಿರುವ ದರ್ಶನ್ (Kranthiveera Sangolli Rayanna | Darshan | Rakshita)
ಸುದ್ದಿ/ಗಾಸಿಪ್
Bookmark and Share Feedback Print
 
PR
ವಿಭಿನ್ನ ಗೆಟಪ್ ಮೂಲಕ ಕಾಣಿಸಿಕೊಳ್ಳುವ ಕಾರ್ಯಕ್ಕೆ ಇತ್ತೀಚೆಗೆ ಕನ್ನಡದ ನಟರೆಲ್ಲಾ ಇಳಿದಿದ್ದಾರೆ. ಇವರ ಸಾಲಿಗೆ ಈಗ ನಮ್ಮ ಹೊಡೆಬಡಿ ನಾಯಕ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರ್ಪಡೆ ಆಗಿದ್ದಾರೆ. ಅವರೀಗ ಪೌರಾಣಿಕ ಪಾತ್ರದತ್ತ ಒಲವು ತೋರಿಸಿದ್ದು 'ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ' ಚಿತ್ರದ ಮೂಲಕ ತೆರೆಗೆ ಬರಲು ಸಜ್ಜಾಗುತ್ತಿದ್ದಾರೆ. ಹಾಗಾಗಿ ವಿಶಿಷ್ಟವಾಗಿ ಹುರಿ ಮೀಸೆ ಬಿಟ್ಟು ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ ದರ್ಶನ್

ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸಿನಿ ಕಂಬೈನ್ಸ್ ಅಡಿ ಸಾವಿತ್ರಿಬಾಯಿ ಬಾಲಕೃಷ್ಣ ಅಪ್ಪುಗೋಳ ಅವರ ಆಶೀರ್ವಾದದೊಂದಿಗೆ ಚಿತ್ರ ತೆರೆಗೆ ಬರುತ್ತಿದೆ. 'ಆನ್ ಎಪಿಕ್ ಸ್ಟೋರಿ ಆಫ್ ಎ ವಾರಿಯರ್' ಎಂಬ ವಿಶಿಷ್ಟ ಅಡಿ ಶೀರ್ಷಿಕೆಯೊಂದಿಗೆ ಚಿತ್ರದ ಕ್ಯಾಂಪೇನ್ ಈಗಾಗಲೇ ಆರಂಭವಾಗಿದೆ.

ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಆನಂದ್ ಬಿ. ಅಪ್ಪುಗೋಳ ಚಿತ್ರದ ನಿರ್ಮಾಪಕರು. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಇದು ಒಂದು ಭಿನ್ನ ಇಮೇಜ್ ನೀಡಲಿದೆ ಎಂದೇ ಗಾಂಧಿನಗರದ ತುಂಬಾ ಲೆಕ್ಕಾಚಾರ ಹಾಕಲಾಗುತ್ತಿದೆ. ಮುಖದ ಮೇಲೆ ಮೀಸೆ ಇಲ್ಲದೇ ಮಚ್ಚು, ಲಾಂಗ್ ಜಳಪಿಸುತ್ತಾ, ಹಾಸ್ಯ ಕಲಾವಿದರಾದ ಸಾಧು ಕೋಕಿಲಾ, ಬುಲೆಟ್ ಪ್ರಕಾಶ್ ಜತೆ ಅಡ್ಡಾಡುತ್ತಿದ್ದ, ಒಂದು ಕಾಲದಲ್ಲಿ ಕೊಂಚ ಸಣ್ಣಗಿದ್ದ ರಕ್ಷಿತಾ ಜತೆ ಲಗೋರಿ ಆಡುತ್ತಾ ಇದ್ದ ನಾಯಕ ಇಂದು ಮುಖದ ತುಂಬಾ ಮೀಸೆ, ಕೈಲಿ ಮಚ್ಚಿನ ಬದಲು ಖಡ್ಗ ಹಿಡಿದು ನಿಂತಿದ್ದಾರೆ.

ಕೊನೆಗೂ ಸಂಗೊಳ್ಳಿ ರಾಯಣ್ಣನ ಸಾಧನೆಯನ್ನು ಅಲ್ಲಿ ಇಲ್ಲಿ ಕೇಳಿ ತಿಳಿದಿದ್ದ ನಾಗರಿಕರಿಗೆ ಈಗ ಚಲನಚಿತ್ರದ ರೂಪದಲ್ಲಿ ನೋಡುವ ಸುವರ್ಣಾವಕಾಶ ದೊರಕಿದ್ದು ನಿಜಕ್ಕೂ ಸುಕೃತ. ಜೊತೆಗೆ ದರ್ಶನ್ ಅಬಿಮಾನಿಗಳಿಗೂ ಸುಗ್ಗಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ದರ್ಶನ್, ರಕ್ಷಿತಾ