ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮೇಶ್, ರವಿಚಂದ್ರನ್, ವಿಜಯ ರಾಘವೇಂದ್ರ 'ಹ್ಯಾಪಿ ಹಸ್ಬೆಂಡ್‌'ಗಳು! (Ramesh | Ravichandran | Vijay Raghavendra | Happy Husband)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟ ರಮೇಶ್ ಮತ್ತೊಂದು ಕೌಟುಂಬಿಕ ಹಾಗೂ ಹಾಸ್ಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ಪತ್ನಿಯ ಅನುಮಾನಕ್ಕೆ ಗುರಿಯಾಗುವ ಪತಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಪತ್ನಿ ಪೀಡಕನ ಪಾತ್ರದಲ್ಲಿ ಸಾಥ್ ನೀಡುತ್ತಿದ್ದಾರೆ.

ವಿಶೇಷ ಅಂದರೆ, ಉತ್ತಮವಾಗಿ ಡ್ರೆಸ್ ಮಾಡಿಕೊಂಡರೂ ಪತ್ನಿಗೆ ಪತಿಯ ಮೇಲೆ ಅನುಮಾನ. ಇದೇನ್ರಿ, ಆಫೀಸ್‌ಗೆ ಹೋಗ್ತಾ ಇದ್ದೀರಾ ಅಥವಾ ಯಾವುದಾದ್ರೂ ಹುಡುಗೀನ ಹುಡುಕಿ ಹೋಗ್ತಾ ಇದ್ದೀರಾ ಅಂತಾಳೆ. ಆಗ ರಮೇಶ್ ಸ್ಥಿತಿ ಏನಾಗಬೇಡ? ಕೂದಲು ಕೆದರಿ, ಟೈ ಎಳೆದುಕೊಂಡು, ಕೋಟ್ ಬಟನ್ ಬಿಚ್ಚಿ ಹೊರಡಲು ಅಣಿಯಾಗುತ್ತಾರೆ.

ಅತಿಯಾಗಿ ಪ್ರೀತಿಸುವ ಪತ್ನಿ ಅತ್ಯಂತ ಅನುಮಾನದ ಪಿಶಾಚಿಯಾದರೆ ಏನಾಗುತ್ತದೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ. ಅನುಮಾನಿಸುವ ಪತ್ನಿಯಾಗಿ ಎದ್ದೇಳು ಮಂಜುನಾಥ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಯಜ್ಞಾ ಶೆಟ್ಟಿ ನಟಿಸುತ್ತಿದ್ದಾರೆ. ಅಲ್ಲಿ ಅಳುಮುಂಜಿಯಾಗಿದ್ದ ಇವರಿಗೆ ಈ ಚಿತ್ರದಲ್ಲಿ ಗ್ಲಾಮರ್ ಗೃಹಿಣಿ ಪಾತ್ರ ಇದೆಯಂತೆ. ಕೊಂಚ ಮೇಕಪ್ ಸಹ ಜಾಸ್ತಿ. ಒಟ್ಟಾರೆ ಈ ಚಿತ್ರ ನಿಜಕ್ಕೂ ತಮ್ಮ ಪಾಲಿಗೆ ಒಂದು ಬದಲಾವಣೆಯಾಗಿ ಸಿಕ್ಕಿದೆ. ಇದುವರೆಗೂ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತಮಗೆ ಹೊಸ ಹಾಗೂ ಭಿನ್ನ ಪಾತ್ರ ಸಿಕ್ಕಿದೆ ಎನ್ನುತ್ತಾರೆ.

ರವಿಚಂದ್ರನ್ ಸಹ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ಪೀಡಕನ ಪಾತ್ರದಲ್ಲಿ ನಟಿಸುವ ಇವರು ರಮೇಶ್ ಅವರನ್ನೂ ಹಾದಿ ತಪ್ಪಿಸಲು ಯತ್ನಿಸುತ್ತಾರೆ. ಈ ಚಿತ್ರದಲ್ಲಿ ರವಿ, ರಮೇಶ್ ಜತೆ ವಿಜಯ್ ರಾಘವೇಂದ್ರ ಸಹ ಬರಲಿದ್ದಾರಂತೆ. ರಮೇಶ್ ರವಿಚಂದ್ರನ್ ಜೋಡಿ ಈ ಹಿಂದೆ ಯಾರೇ ನೀನು ಚೆಲುವೆ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇನ್ನೂ ಒಂದೆರಡು ಚಿತ್ರಗಳಲ್ಲಿ ಇಬ್ಬರೂ ಅತಿಥಿ ಪಾತ್ರದಲ್ಲಿ ಜತೆಯಾಗಿ ನಟಿಸಿದ್ದರು. ಹೀಗಾಗಿ ಈ ಇಬ್ಬರ ಕಾಂಬಿನೇಷನನ್ನು ಜನ ಇಷ್ಟಪಡುತ್ತಾರೆ ಎಂಬ ನಂಬುಕೆ ರಮೇಶ್ ಅವರದ್ದು.

ಚಿತ್ರದಲ್ಲಿ ರಮೇಶ್, ರವಿಚಂದ್ರನ್ ಹಾಗೂ ವಿಜಯ್ ರಾಘವೇಂದ್ರ ಅವರಿಗೆ ಜೋಡಿಯಾಗಿ ಯಜ್ಞಾಶೆಟ್ಟಿ, ರಾಗಿಣಿ ಹಾಗೂ ಮೋನಿಕಾ ನಟಿಸುತ್ತಿದ್ದಾರೆ. ಕೆ. ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂದಹಾಗೆ, ಈ ಚಿತ್ರ ಹಿಂದಿಯ ನೋ ಎಂಟ್ರಿ ಹಾಗೂ ತಮಿಳಿನ ಚಾರ್ಲಿ ಚಾಪ್ಲಿನ್ ಚಿತ್ರದ ರಿಮೇಕ್. ಕನ್ನಡದಲ್ಲಿ ಇದಕ್ಕೆ 'ಹ್ಯಾಪಿ ಹಸ್ಬಂಡ್ಸ್' ಅಂತ ಇರಿಸಲಾಗಿದೆಯಂತೆ.

ಇನ್ನಷ್ಟು ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮೇಶ್, ರವಿಚಂದ್ರನ್, ವಿಜಯ ರಾಘವೇಂದ್ರ, ಹ್ಯಾಪಿ ಹಸ್ಬೆಂಡ್