ಸಂಗೀತ ನಿರ್ದೇಶಕ ಮಣಿಕಾಂತ್ ಖದ್ರಿ ಇತ್ತೀಚಿನ ದಿನಗಳಲ್ಲಿ ಬಹು ಚಾಲ್ತಿಯಲ್ಲಿರುವ ಹೆಸರಾಗಿ ಕಂಗೊಳಿಸುತ್ತಿದ್ದಾರೆ. ಇವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರಗಳ ಹಾಡುಗಳೆಲ್ಲಾ ಹಿಟ್ ಆಗುತ್ತಿವೆ.
ಸವಾರಿಯಿಂದ ಚಿತ್ರ ಸಂಗೀತ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿರಿಸಿದ ಇವರು, ಇದಕ್ಕೂ ಮುನ್ನ ಸಾಕಷ್ಟು ಸಂಗೀತ ನಿರ್ದೇಶಕರ ಕೈಕೆಳಗೆ ದುಡಿದು ಅನುಭವ ಪಡೆದಿದ್ದರು. ಇವರಿಗೆ ಮೊದಲ ಚಿತ್ರ ಸವಾರಿ ಅತ್ಯಂತ ಯಶಸ್ಸು ತಂದುಕೊಟ್ಟಿತು. 'ಮರಳಿ ಮರೆಯಾದೆ...' ಹಾಡು ಇಂದಿಗೂ ಹಲವರ ಬಾಯಲ್ಲಿ ಆಗಾಗ ಲಾಸ್ಯವಾಡುತ್ತಾ ಇರುವುದನ್ನು ಕೇಳಿದ್ದೇವೆ. ಅಷ್ಟರ ಮಟ್ಟಿಗೆ ಅವರು ತಮ್ಮ ಮೊದಲ ಚಿತ್ರದಲ್ಲೇ ಛಾಪು ಮೂಡಿಸಿಕೊಂಡಿದ್ದಾರೆ.
ಪೃಥ್ವಿ ಚಿತ್ರಕ್ಕೆ ಇವರು ನೀಡಿದ ಡಿಫರಂಟ್ ಮ್ಯೂಸಿಕ್ ಸಾಕಷ್ಟು ಜನರ ಹುಬ್ಬೇರುವಂತೆ ಮಾಡಿತ್ತು. ಇದು ಇವರಿಗೆ ಸಾಕಷ್ಟು ಹೊಸ ಅವಕಾಶವನ್ನೂ ತಂದು ಕೊಟ್ಟಿದ್ದು ಸುಳ್ಳಲ್ಲ. ಈ ಚಿತ್ರದಿಂದ ತಾವು ಸಾಕಷ್ಟು ಹೊಸ ವಿಷಯವನ್ನು ಕಲಿತಿದ್ದಾಗಿ ಇವರು ಹೇಳಿಕೊಳ್ಳುತ್ತಾರೆ. ಪುನಿತ್ ಸಿನಿಮಾಗಳೇ ಹಾಗೆ, ಯಾವತ್ತೂ ಡಿಫರಂಟ್ ಟ್ಯೂನ್ ಗಳನ್ನು ಬಳಸುತ್ತಾರೆ. ಪೃಥ್ವಿಯಲ್ಲಿ ಅದನ್ನು ನೀಡುವಲ್ಲಿ ನಾನು ಸಾಕಷ್ಟು ಯಶ ಕಂಡಿದ್ದೆನೆ. ರಾಜ್ಯಕ್ಕೆ ಬರುವ ಮುನ್ನ ಮಲಯಾಳಂನಲ್ಲಿ ಸಾಕಷ್ಟು ತರಬೇತಿ ಪಡೆದುಕೊಂಡಿದ್ದೆ. ಇದರಿಂದ ರಾಜ್ಯಕ್ಕೆ ಬಂದು ಕನ್ನಡ ಚಿತ್ರರಂಗಕ್ಕೆ ದುಡಿಯಲು ಅನುಕೂಲವಾಯಿತು ಎನ್ನುತ್ತಾರೆ.
ಸದ್ಯ ಎರಡು ಪ್ರಾಜೆಕ್ಟುಗಳಲ್ಲಿ ಬ್ಯುಸಿ ಆಗಿದ್ದೇನೆ. ಈ ನಡುವೆ ಮದುವೆ ಮನೆ ಚಿತ್ರಕ್ಕೂ ಸಹಿ ಮಾಡಿದ್ದೇನೆ. ಸಿಂಗಲ್ ಆಡಿಯೋ ಮಾಡುವ ಆಸೆಯೂ ಇದೆ ಎನ್ನುತ್ತಾರೆ.