ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಣ್ಣದ ಕೊಡೆ: ಬಣ್ಣದ ಛತ್ರಿಯ ಕಲರ್‌ಫುಲ್ ಸಿನೆಮಾ (Bannada Kode | Krishna Belthangadi | Baby Suhasini)
ಸುದ್ದಿ/ಗಾಸಿಪ್
Bookmark and Share Feedback Print
 
ಪುಟಾಣಿ ಹುಡುಗಿಯೊಬ್ಬಳು ಬಣ್ಣದ ಛತ್ರಿಗೆ ಅಸೆ ಪಡುತ್ತಾಳೆ. ಆದರೆ ಅದನ್ನು ಕೊಡಿಸಲು ಯತ್ನಿಸುವ ತಾಯಿಗೆ ಮಗುವಿನ ಕುಡುಕ ತಂದೆಯೇ ಪ್ರತಿ ಬಾರಿಯೂ ಅಡ್ಡ ಬರುತ್ತಾನೆ.

ಇದೇನು ವಿಚಿತ್ರವಾಗಿದೆ ಅಂದಿರಾ? ಹೌದು. ಈ ಎಳೆ ಇಟ್ಟುಕೊಂಡು ಕನ್ನಡದಲ್ಲಿ ಚಿತ್ರವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಬಣ್ಣದ ಕೊಡೆ ಅಂತ ಹೆಸರಿಡಲಾಗಿದೆ. ಬೇಬಿ ಸುಹಾಸಿನಿ ಈ ಚಿತ್ರದಲ್ಲಿ ನಟಿಸಲಿದ್ದು, ಈ ಚಿತ್ರದಲ್ಲಿ ಮುಂಬೈ ಮೂಲದ ನಟಿ ಮೋಹಿನಿ ಹಾಗೂ ಯತಿರಾಜ್ ನಾಯಕರಾಗಿ ನಟಿಸುತ್ತಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ಸಹನಟನಾಗಿ, ಪೋಷಕ ನಟನಾಗಿ ನಟಿಸಿದ್ದ ಇವರು ಈ ಮೂಲಕ ಭಡ್ತಿ ಪಡೆದಿದ್ದಾರೆ.

ಬಡತನವನ್ನೇ ಜೀವಾಳವಾಗಿಸಿ ಈ ಚಿತ್ರ ಹೆಣೆಯಲಾಗಿದೆ. ಹೀಗಾಗಿ ಚಿತ್ರದಲ್ಲಿ ಮಾತು ಕಡಿಮೆ ಇದೆ. ಸಂಭಾಷಣೆಗೆ ಇಲ್ಲಿ ಹೆಚ್ಚು ಅವಕಾಶ ಇಲ್ಲ. ಅಭಿನಯಕ್ಕೆ ಹೆಚ್ಚಿನ ಪೋಷಣೆ ನೀಡಲಾಗಿದೆ. ಅಭಿನಯವೇ ಇಲ್ಲಿ ಎಲ್ಲವನ್ನೂ ಹೇಳಿ ಬಿಡುತ್ತದೆ. ಹಾಗಂತ ಇದು ಕಲಾತ್ಮಕ ಚಿತ್ರ ಅಂದುಕೊಳ್ಳಬೇಡಿ. ಅಲ್ಲದೇ ಇದು ಪೂರ್ಣ ಕಮರ್ಷಿಯಲ್ ಚಿತ್ರವೂ ಅಲ್ಲ. ಎರಡನ್ನೂ ಒಳಗೊಂಡು ವಿಭಿನ್ನ ಶೈಲಿಯ ಚಿತ್ರವಾಗಿದೆ.

ಹೆಣ್ಣು ಮಗುವಿನ ಆಸೆ, ತಾಯಿಯ ಅಸಹಾಯಕತೆ, ತಂದೆಯ ದೌರ್ಜನ್ಯಕ್ಕೆ ಈ ಚಿತ್ರ ಸಾಕ್ಷಿಯಾಗಿದೆ. ಚಿತ್ರದಲ್ಲಿ ಪ್ರತಿಯೊಬ್ಬರದ್ದೂ ಚಾಲೆಂಜಿಂಗ್ ರೋಲ್ ಅಂತೆ. ಪಾತ್ರದಲ್ಲಿ ಅಭಿನಯಕ್ಕೆ ವಿಫುಲ ಅವಕಾಶ ಸಿಕ್ಕಿದೆ. ಬಹು ದಿನದಿಂದ ಉತ್ತಮ ಚಿತ್ರಕ್ಕಾಗಿ ನೀರೀಕ್ಷೆ ಇಟ್ಟುಕೊಂಡಿದ್ದೆ, ಕೊಂಚ ತಡವಾಗಿಯಾದರೂ ಈ ಚಿತ್ರದ ಮೂಲಕ ಅವಕಾಶ ಕೂಡಿ ಬಂದಿದ್ದು ಸಂತಸ ನೀಡಿದೆ ಎನ್ನುತ್ತಾರೆ ಯತಿರಾಜ್.

ಇಡೀ ಚಿತ್ರ ಬೇಬಿ ಸುಹಾಸಿನಿ ಸುತ್ತ ಸುತ್ತುತ್ತದೆ. ಪಾತ್ರಗಳೂ ಇವಳನ್ನೇ ಕೇಂದ್ರವಾಗಿಟ್ಟುಕೊಂಡು ಹೆಣೆಯಲಾಗಿದೆ. ಸೆ.2ರಿಂದ ಚಿತ್ರೀಕರಣ ಆರಂಭವಾಗಲಿದೆ. ನಿರಂತರ 18 ದಿನ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ 3 ಹಾಡುಗಳಿದ್ದು, ಒಂದು ಹಾಡನ್ನು ಅದ್ದೂರಿಯಾಗಿ ಚಿತ್ರಿಸಲು ನಿರ್ದೇಶಕ ಕೃಷ್ಣ ಬೆಳ್ತಂಗಡಿ ನಿರ್ಧರಿಸಿದ್ದಾರೆ. ಇದಕ್ಕಾಗಿ 300 ಮಕ್ಕಳು ಹಾಗೂ ಬಣ್ಣದ ಛತ್ರಿ ಬಳಸಲಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಣ್ಣದ ಕೊಡೆ, ಕೃಷ್ಣ ಬೆಳ್ತಂಗಡಿ, ಬೇಬಿ ಸುಹಾಸಿನಿ