ದಿನೇಶ್ ಬಾಬು ಅವರ ನಿರ್ದೇಶನ 'ಎರಡನೇ ಮದುವೆ' ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ನಾನಾ ಭಾಗದಲ್ಲಿ ಹಾಗೂ ವಿದೇಶದಲ್ಲೂ ಸೂಪರ್ ಹಿಟ್ ಅಗಿದೆಯಂತೆ.
ಸಾಲು ಸಾಲು ಸೋಲಿನ ನಡುವೆ ತೆರೆಕಂಡ ಅತ್ಯಂತ ಕಡಿಮೆ ಬಜೆಟ್‌ನ ಈ ಚಿತ್ರ ನಿಜಕ್ಕೂ ಗಾಂಧಿನಗರದಲ್ಲಿ ಮಾತ್ರವಲ್ಲ, ಎಲ್ಲೆಡೆ ಕ್ರಾಂತಿ ಮೂಡಿಸಿದೆ. ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.
ಇತ್ತೀಚೆಗೆ ಕನ್ನಡ ಸಿನಿಮಾಗಳು ರಾಜ್ಯದಲ್ಲೇ ಓಡುತ್ತಿಲ್ಲ. ಹೀಗಿರುವಾಗ ವಿದೇಶದಲ್ಲಿ ಚಿತ್ರ ಓಡುತ್ತಿದೆ ಎನ್ನುವುದು ಸಣ್ಣ ವಿಷಯವಲ್ಲ. ಸದ್ಯ ಚಿತ್ರ ಅಮೆರಿಕಾ, ಕೆನಡಾ, ಇಂಗ್ಲೆಂಡ್ ಜತೆ ಮುಂಬಯಿ, ಚೆನ್ನೈ, ದಿಲ್ಲಿ, ಪಶ್ಚಿಮ ಬಂಗಾಳಗಳಲ್ಲಿ ಓಡುತ್ತಿದೆ.
ಕೆಲ ವರ್ಷ ಹಿಂದೆ ಇದೇ ರೀತಿ ಮುಂಗಾರು ಮಳೆ ಯಶಸ್ವಿಯಾಗಿತ್ತು. ಅಲ್ಲಿಯೂ ಅನಂತನಾಗ್ ಇದ್ದರು. ಅವರೇ ಚಿತ್ರದಲ್ಲಿ ಎಲ್ಲಾ ರಸಿಕರನ್ನು ಮೋಡಿ ಮಾಡಿದ್ದರು. ಇಲ್ಲಿಯೂ ಅವರಿಂದಲೇ ಚಿತ್ರ ಓಡುತ್ತಿದೆ ಎನ್ನಬಹುದು. ಕ್ಯಾಲಿಫೋರ್ನಿಯಾದಲ್ಲಿ ಶೋ ನೋಡಿದ ಕನ್ನಡಿಗರು ಎಂಜಾಯ್ ಮಾಡಿದ್ದಾರೆ. ಈ ಬಗ್ಗೆ ಅನಂತನಾಗ್ ಅವರೇ ಮೆಚ್ಚುಗೆ ಮಾತನ್ನಾಡಿದ್ದಾರೆ.
ಒಟ್ಟಾರೆ ಎರಡನೇ ಮದುವೆ ಚಿತ್ರದ ನಿಚ್ಚಳ ಗೆಲುವು ನಿರ್ಮಾಪಕರಿಂದ ಹಿಡಿದು, ಇಡೀ ಉದ್ಯಮದಲ್ಲಿ ಮತ್ತೊಮ್ಮೆ ಚೇತರಿಕೆ ತಂದಿದೆ ಅನ್ನುವುದು ಸುಳ್ಳಲ್ಲ.