ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸ್ಯಾಂಡಲ್‌ವುಡ್ಡಿಗೆ ಕೆ. ಮಂಜು ಸ್ಟುಡಿಯೋ ಕೊಡುಗೆ (Kannada Cinema | K.Manju | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಿರ್ಮಾಪಕ ಕೆ. ಮಂಜು ಕನ್ನಡ ಚಿತ್ರರಂಗಕ್ಕೆ ಒಂದು ಅದ್ಬುತ ಕೊಡುಗೆ ನೀಡಲು ಮುಂದಾಗಿದ್ದಾರೆ. ಆದರೆ ಈ ಚಿತ್ರದ ಮೂಲಕ ಅಲ್ಲ, ಸ್ಟುಡಿಯೊ ಮೂಲಕ. ಇದೇನು ಸ್ಟುಡಿಯೊ ಮೂಲಕ ಇವರು ಏನನ್ನು ನೀಡಲು ಹೊರಟಿದ್ದಾರೆ ಅಂತ ಕೇಳಿದಿರಾ? ಹೌದು, ಇವರು ಈಗ ಬನ್ನೇರುಘಟ್ಟ ರಸ್ತೆಯಲ್ಲಿ ಸುಮಾರು 8 ಎಕರೆ ಜಾಗದಲ್ಲಿ ಬೃಹತ್ ಸ್ಟುಡಿಯೊ ನಿರ್ಮಿಸಲು ಉದ್ದೇಶಿಸಿದ್ದಾರಂತೆ. ಇದಕ್ಕೆ ತಮ್ಮ ಗೆಳೆಯರೊಬ್ಬರ ಸಹಾಯವನ್ನು ಪಡೆದಿರುವ ಮಂಜು ಈ ಕಾರ್ಯಕ್ರದಲ್ಲಿ ಈಗ ಸಕ್ರಿಯರಾಗಿದ್ದಾರೆ.

ಈ ಸ್ನೇಹಿತರ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಈ ಸ್ಟುಡಿಯೋಗೆ ಜಾಗವನ್ನು ಗೆಳೆಯ ನೀಡಿದ್ದು ನಿರ್ಮಾಣ ಬಂಡವಾಳವನ್ನು ಮಂಜು ತೊಡಗಿಸಲಿದ್ದಾರೆ. ಸದ್ಯ ಇರುವ ಸ್ಟುಡಿಯೊಗಳೇ ಕೆಲಸವಿಲ್ಲದೇ ಖಾಲಿ ಹೊಡೆಯುತ್ತಿರುವಾಗ ಮಂಜು ಅವರಿಗೆ ಈ ಸಾಹಸದ ಕೆಲಸ ಬೇಕಿತ್ತೆ ಅನ್ನುತ್ತಿದ್ದಾರೆ ಗಾಂಧಿನಗರದ ಜನ. ಆದರೆ ಸಾಧಿಸಿ ತೋರಿಸುತ್ತೇನೆ ಎನ್ನುವ ಛಲ ಮಂಜು ಅವರಲ್ಲಿದ್ದು, ಇದುವರೆಗೂ ಮಾಡಿದ್ದೆಲ್ಲದರಲ್ಲೂ ಸಾಕಷ್ಟು ಯಶ ಕಂಡಿದ್ದಾರೆ. ಇಲ್ಲೂ ಅದೇ ಆಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇವರ ಪ್ರಕಾರ, ಈಗಿರುವ ಚಿತ್ರೀಕರಣ ತಾಣ ಸರಿಯಾಗಿ ಬಳಕೆ ಆಗುತ್ತಿಲ್ಲ. ಒಂದು ಸುರಭಿ ಹೌಸ್‌ನಂತಹ ಫಾರಂಗೆ ತೆರಳಲು ಸಂಪೂರ್ಣ ಯುನಿಟ್‌ನೊಂದಿಗೆ ನಗರದಿಂದ 65 ಕಿ.ಮಿ. ದೂರ ತೆರಳಬೇಕು. ಅಲ್ಲಿಯವರೆಗೆ ಹೋಗಲು ವ್ಯಯವಾಗುವ ಹಣದಲ್ಲಿಯೇ ಒಂದಿಷ್ಟು ಚಿತ್ರೀಕರಣವನ್ನೂ ಮಾಡಿಕೊಳ್ಳಬಹುದು. ಹಣ ಉಳಿಸುವ ಆಸೆ ಇರುವವರು ಇಲ್ಲಿ ಬಂದೇ ಬರುತ್ತಾರೆ ಎನ್ನುವ ವಿಶ್ವಾಸ ಇವರದ್ದು. ಸಂಚಾರದ ಸಮಸ್ಯೆಯಲ್ಲಿಯೇ ಮುಳುಗಿರುವ ಕನ್ನಡ ಚಿತ್ರರಂಗಕ್ಕೆ ಒಂದು ಪರಿಹಾರ ರೂಪದಲ್ಲಿ ಈ ಸ್ಟುಡಿಯೊ ನಿರ್ಮಿಸುತ್ತೇನೆ ಎನ್ನುತ್ತಿದ್ದಾರೆ.

ಇರುವ ಸ್ಟುಡಿಯೊಗಳಲ್ಲಿ ಇಲ್ಲದ ಅನೇಕ ಅಂಶವನ್ನು ಗಮನಿಸಿ ತಮ್ಮ ಸ್ಟುಡಿಯೊ ನಿರ್ಮಿಸುತ್ತೇನೆ. ಇಲ್ಲಿ ಅವೆಲ್ಲವನ್ನೂ ಒದಗಿಸುತ್ತೇನೆ. ಉತ್ತಮ ಚಿತ್ರಗಳು ಕನ್ನಡದಲ್ಲಿ ಬರುತ್ತಿದ್ದು, ತಾಂತ್ರಿಕವಾಗಿಯೂ ಇನ್ನಷ್ಟು ಗಟ್ಟಿಯಾಗಲಿ ಎನ್ನುವುದು ಅವರು ಈ ಸ್ಟುಡಿಯೊ ನಿರ್ಮಿಸುತ್ತಿರುವ ಹಿಂದಿರುವ ಸದುದ್ದೇಶವಾಗಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಕೆಮಂಜು, ಕನ್ನಡ ಸಿನೆಮಾ