ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯಶಸ್ಸಿನ ಜೊತೆಗೇ ಕುದುರೆಯನ್ನೂ ಏರಿದ ಅಜಯ್ ರಾವ್ (Ajay Rao | Krishnan Love Story | Taj mahal)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ತಾಜ್‌ಮಹಲ್ ಚಿತ್ರದಲ್ಲಿ ಭಗ್ನ ಪ್ರೇಮಿಯಾಗಿ ನಟಿಸಿ ಒಂದಿಷ್ಟು ಹೆಸರು ಮಾಡಿದ್ದ ಅಜಯ್ ರಾವ್ ಕೃಷ್ಣನ್ ಲವ್ ಸ್ಟೋರಿ ಮೂಲಕ ಮತ್ತೆ ಯಶಸ್ಸು ಕಂಡಿದ್ದಾರೆ. ಆ ಯಶಸ್ಸಿನ ಕುಷಿಯಲ್ಲೇ ಇದೀಗ ಅಜಯ್ ಕುದುರೆ ಏರಲು ಹೊರಟಿದ್ದಾರೆ.

ಹೌದು. ಕೃಷ್ಣನ್ ಲವ್ ಸ್ಟೋರಿ ಹಿಟ್ ಅಗಿದೆ. ಎರಡನೇ ಭಾಗವೂ ಘೋಷಣೆ ಆಗಿ ಅದಕ್ಕೂ ಇವರೇ ನಾಯಕ ಎಂದು ಸಹ ಹೇಳಲಾಗಿದೆ. ಚಿತ್ರದ ಚಿತ್ರೀಕರಣ ಇನ್ನೇನು ಆರಂಭವಾಗಲಿದ್ದು, ಶೇ.75ರಷ್ಟು ನೈಜತೆ ಒಳಗೊಂಡ ಚಿತ್ರದಲ್ಲಿ ನಟಿಸಿ ಇವರೊಬ್ಬ ಮುಕ್ಕಾಲು ಭಾಗ ನೈಜ ಹೀರೋ ಆಗಿ ಹೊರ ಹೊಮ್ಮಿದ್ದಾರೆ. ನಟನಿಗೆ ಇರಬೇಕಾದ ಹಲವು ಅರ್ಹತೆಗಳು ಇವರಿಗೆ ಇದ್ದು, ಉಳಿದಿರುವ ಕೆಲವನ್ನು ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ಮೊದಲ ಸೇರ್ಪಡೆ ಕುದುರೆ ಸವಾರಿ.

ಹೌದು, ಕುದುರೆ ಓಡಿಸುವ ವಿದ್ಯೆಯನ್ನೂ ಕರಗತ ಮಡಿಕೊಳ್ಳಲು ಅಜಯ್ ಮುಂದಾಗಿದ್ದಾರೆ. ಇದಕ್ಕಾಗಿ ನಗರದಲ್ಲಿ 20 ದಿನದ ತರಬೇತಿಗಾಗಿ ಕುದುರೆ ಏರಿ ಸವಾರಿ ಹೊರಟಿದ್ದಾರೆ. ವಿಶೇಷ ಅಂದರೆ ಸದ್ಯ ಯಾವುದೇ ಚಿತ್ರದ ಕೆಲಸ ಇವರ ಬಳಿ ಇಲ್ಲ. ಇನ್ನೊಂದು ತಿಂಗಳು ಫುಲ್ ಫ್ರೀ ಅಂತೆ. ಅದಕ್ಕಾಗಿಯೇ ಚಿತ್ರರಂಗದಿಂದ ಕೊಂಚ ದೂರ ಉಳಿದು 20 ದಿನದಲ್ಲಿ ಕುದುರೆ ಸವಾರಿ ಕಲಿಯುವ ತರಗತಿಗೆ ಸೇರಿಕೊಂಡಿದ್ದಾರೆ.

ಚಿತ್ರದಲ್ಲಿ ಯಶಸ್ಸು ಕಾಣಲು ಇಂದು ಹಲವು ಯುವ ನಟರು ಒಬ್ಬರ ಮೇಲೆ ಒಬ್ಬರು ಸ್ಪರ್ಧೆಗೆ ಬಿದ್ದಂತೆ ಅಭಿನಯಿಸುತ್ತಿದ್ದಾರೆ. ಇವರ ನಡುವೆ ಒಬ್ಬ ಚಾಕೊಲೇಟ್ ಹೀರೋ ಆಗಿ ಉಳಿದುಕೊಳ್ಳಲು ಅಜಯ್ ಹರಸಾಹಸ ನಡೆಸುತ್ತಿದ್ದಾರೆ. ಕೃಷ್ಣನ್ ಲವ್ ಸ್ಟೋರಿ ಗೆಲುವು ಇವರಲ್ಲಿ ಅದಮ್ಯ ಉತ್ಸಾಹ ತುಂಬಿದ್ದು, ಭವಿಷ್ಯದಲ್ಲಿ ಈ ಮಾದರಿಯ ಹಾಗೂ ಇದಕ್ಕಿಂತ ಭಿನ್ನವಾದ ಹತ್ತಾರು ಚಿತ್ರ ಮಾಡುವ ಉತ್ಸಾಹ ಹೊಂದಿದ್ದಾರೆ. ಇದಕ್ಕಾಗಿ ಕುದುರೆ ಓಡಿಸುವುದನ್ನೂ ಕಲಿಯುತ್ತಿದ್ದಾರೆ. ಅಜಯ್‌ಗೆ ಬೆಸ್ಟ್ ಆಫ್ ಲಕ್ ಹೇಳೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಜಯ್ ರಾವ್, ಕೃಷ್ಣನ್ ಲವ್ ಸ್ಟೋರಿ, ಕುದುರೆ