ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಣ್ಣದ ಕೊಡೆಗೆ ನಾಯಕಿಯಾದ ಶರಣ್ಯ (Sharanya | Bannada Kode | Krishna)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಿಮಗೆ ನಟಿ ಶರಣ್ಯ ಗೊತ್ತಿರಬೇಕು. ಅದೇ ಹೇ ಸರಸು, ಮುರಾರಿ, ಇಂದ್ರ, ಸೈ, ಮನಸಿನ ಮಾತು ಸೇರಿದಂತೆ ಹಲವು ಚಿತ್ರದಲ್ಲಿ ತಂಗಿಯ ಪಾತ್ರದಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ. ಇದೀಗ ತಮ್ಮ ನಾಯಕಿಯಾಗುವ ಕನಸನ್ನು ಬಣ್ಣದ ಕೊಡೆ ಮೂಲಕ ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ.

ಇದೊಂದು ಅತ್ಯುತ್ತಮ ಚಿತ್ರವಾಗಿದ್ದು, ಬಹು ಕಾಲದಿಂದ ಬಯಸುತ್ತಿದ್ದ ಉತ್ತಮ ಮಾದರಿಯ ಪಾತ್ರ ಇದೀಗ ಸಿಕ್ಕಿದೆ. ಶಕ್ತಿ ಮೀರಿ ನಟಿಸುತ್ತಿದ್ದೇನೆ. ಇಂಥ ಪಾತ್ರ ಇನ್ನೊಮ್ಮೆ ಸಿಗುತ್ತೆ ಅಂತ ಹೇಳಲಾಗದು. ಹಲವು ನಟಿಯರು ತಮಗೆ ಇಂಥದ್ದೊಂದು ಗುರುತಿಸಿಕೊಳ್ಳುವ ಪಾತ್ರ ಸಿಗಲಿ ಎಂದು ಬಯಸುತ್ತಾರೆ. ಅದೃಷ್ಟ ನನಗೆ ಒಲಿದಿದೆ. ಉಪಯೋಗಿಸಿಕೊಳ್ಳುತ್ತೇನೆ ಎಂದು ಮುಗ್ಧವಾಗಿ ನುಡಿಯುತ್ತಾರೆ ಶರಣ್ಯ.

ಮೈಸೂರು ಮೂಲದ ಈ ಹುಡುಗಿ ಪತ್ರಕರ್ತ ಕೃಷ್ಣ ನಿರ್ದೇಶನದ ಬಣ್ಣದ ಕೊಡೆ ಚಿತ್ರದ ನಾಯಕಿ. ದೂರ ಶಿಕ್ಷಣದಲ್ಲಿ ಪದವಿ ಓದುತ್ತಿರುವ ಇವರ ಕುಟುಂಬದ ಯಾವೊಬ್ಬ ಸದಸ್ಯರೂ ಇಂದು ಚಿತ್ರರಂಗದಲ್ಲಿ ಇಲ್ಲ. ಇವರಿಗೆ ಮಾತ್ರ ಈ ಅವಕಾಶ ಒದಗಿ ಬಂದಿದ್ದು ಇದುವರೆಗೂ ಅದನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.

ಇದೇ ಮೊದಲ ಬಾರಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶರಣ್ಯ, ಉತ್ತಮ ಅಭಿನಯವನ್ನು ಕರಗತ ಮಾಡಿಕೊಂಡಿದ್ದರಿಂದ ಮಾತ್ರ ಇಲ್ಲಿ ಉಳಿದಿದ್ದೇನೆ ಎನ್ನುತ್ತಾರೆ.

ಕಿರುತೆರೆಯಲ್ಲೂ ಮಿಂಚುವ ಆಸೆ ಇವರಿಗೆ ಇದೆಯಂತೆ. ಆದರೆ ಹಿರಿತೆರೆಯಲ್ಲಿ ಒಂದು ಹಂತದಲ್ಲಿ ನೆಲೆ ಕಂಡುಕೊಂಡ ಮೇಲೆ ಅತ್ತ ಮುಖ ಮಾಡುವುದಾಗಿ ಹೇಳುತ್ತಾರೆ. ಬಣ್ಣದ ಕೊಡೆ ಮೇಲೆ ಅಪಾರ ನಿರೀಕ್ಷೆ ಇರಿಸಿಕೊಂಡಿರುವ ಇವರು ಅದರ ಕೀರ್ತಿಯ ಮೂಲಕ ಎಷ್ಟು ಎತ್ತರಕ್ಕೆ ಏರುತ್ತಾರೆ ಅನ್ನುವುದನ್ನು ಕೆಲ ದಿನ ಕಾದು ನೋಡಬೇಕು.

ಇನ್ನಷ್ಟು ಫೋಟೋಗಳಿಗೆ ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶರಣ್ಯ, ಬಣ್ಣದ ಕೊಡೆ, ಕೃಷ್ಣ