ಕೆಲ ತಿಂಗಳ ಹಿಂದೆ ನಟರಾಗುತ್ತಾರೆ ಎನ್ನುವ ಸುದ್ದಿ ಹಬ್ಬಿಸಿಕೊಂಡಿದ್ದ ಪತ್ರಕರ್ತ ಹಾಗೂ ಸುವರ್ಣ ಸುದ್ದಿ ವಾಹಿನಿಯ ರಾಜಕೀಯ ವಿಭಾಗದ ಮುಖ್ಯಸ್ಥ ರಂಗನಾಥ್ ಭಾರದ್ವಾಜ್ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ಮೂಲಕ ಸುದ್ದಿಯಾಗಿದ್ದಾರೆ.
ಹಿಂದೆ ಪ್ರೇಮತನಯ ಶ್ರೀನಿವಾಸ್ ನಿರ್ದೇಶನದಲ್ಲಿ 'ಚೆಲುವಿನ ಗೆಳತಿ' ಚಿತ್ರದಲ್ಲಿ ಇವರು ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಅದರಲ್ಲಿ ಫ್ಲೋರಾ ಸೈನಿ ನಾಯಕಿಯಾಗಿ ನಟಿಸಲಿದ್ದರು. ಆದರೆ ನಂತರ ಏನಾಯಿತೋ ಗೊತ್ತಿಲ್ಲ. ಈಗ ಹೊಸ ಚಿತ್ರವೊಂದರ ಮೂಲಕ ರಂಗನಾಥ್ ಮತ್ತೆ ಸುದ್ದಿಯಾಗಿದ್ದಾರೆ. ಹೊಸ ಚಿತ್ರದ ಫೋಟೋ ಶೂಟ್ ಕೂಡಾ ನಡೆದಿದೆ.
MOKSHA
ಈಗಾಗಲೇ ಟಿವಿ9 ಸುದ್ದಿವಾಹಿನಿಯಲ್ಲಿ ಮಿಂಚಿ ಇದೀಗ ಸುವರ್ಣ ವಾಹಿನಿ ಮೂಲಕ ಟಿವಿ ಮಾದ್ಯಮದಲ್ಲಿ ಹೆಸರು ರಂಗನಾಥ್ ಇದೇ ಆಧಾರದ ಮೇಲೆ ಬೆಳ್ಳಿ ಪರದೆ ಮೇಲೆ ಮಿಂಚಲು ಮುಂದಾಗಿದ್ದಾರೆ. ಇದಕ್ಕೆ ಅವರ ಪಾಲಿಗೆ 'ನನ್ನ ಸೊಸೆ' ಒಲಿದು ಬಂದಿದೆ. ಮ್ಯಾಥ್ಯೂ ರಾಜನ್ ನಿರ್ದೇಶನದ ಈ ಚಿತ್ರದಲ್ಲಿ ಉತ್ತಮ ಪಾತ್ರವನ್ನು ರಂಗನಾಥ್ಗೆ ನೀಡಲಾಗಿದೆಯಂತೆ. ಇವರಿಗೆ ನಾಯಕಿಯಾಗಿ ಅದೇ ಫ್ಲೋರಾ ಸೈನಿ (ಮಯೂರಿ) ಅವರೇ ಆಯ್ಕೆ ಆಗಿದ್ದಾರೆ.
ವಿಶೇಷವೆಂದರೆ, ಅನಂತನಾಗ್ ಕೂಡಾ ಈ ಚಿತ್ರದಲ್ಲಿಯೂ ಅಭಿನಯಿಸಿಸುತ್ತಿದ್ದಾರೆ. ಇವರು ರಂಗನಾಥ್ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅನಂತನಾಗ್ ಅವರಿಗೆ ಜೋಡಿಯಾಗಿ ವಿನಯಾ ಪ್ರಕಾಶ್ ಓಕೆ ಆಗಿದ್ದಾರೆ. ಈ ವರ್ಷಾಂತ್ಯಕ್ಕೆ ಚಿತ್ರ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.