ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎಲ್ಲೆಲ್ಲೂ ನಿರ್ದೇಶಕ ಚಂದ್ರು ಮದುವೆಯ ಸುದ್ದಿ (Taj Mahal | Prem Kahani | R.Chandru)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಿರ್ದೇಶಕ ಚಂದ್ರು ಸದ್ದಿಲ್ಲದೇ ಮದುವೆ ಆಗಿದ್ದಾರೆ. ಅಲ್ಲ ಮದುವೆಯ ಪ್ರತಿ ಹಂತವನ್ನು ಗುಪ್ತವಾಗಿಟ್ಟಿದ್ದ ಇವರು ಮದುವೆಯನ್ನು ಅಂತಿಮ ಕ್ಷಣದಲ್ಲಿ ಘೋಷಿಸಿ ಎಲ್ಲರನ್ನೂ ಅಚ್ಚರಿಯ ಕಡಲಲ್ಲಿ ತೇಲಿಸಿದ್ದಾರೆ.

ಹೌದು. ತಾಜ್ ಮಹಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಆರ್. ಚಂದ್ರು ಸೆಪ್ಟೆಂಬರ್ ನಾಲ್ಕರಂದು ಆರತಕ್ಷತೆ ಹಾಗೂ ಮಾರನೇ ದಿನ ವಿವಾಹವನ್ನೂ ಮಾಡಿಕೊಂಡಿದ್ದಾರೆ. ಯಮುನಾ ಎಂಬಾಕೆಯನ್ನು ವಿವಾಹವಾಗಿರುವ ಚಂದ್ರು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಚಿಕ್ಕಜಾಲ ಸಮೀಪ ಇರುವ ಕೆಎನ್ಎಸ್ ಸಭಾಂಗಣದಲ್ಲಿ ವಿವಾಹವಾಗಿದ್ದಾರೆ.

ವಿವಾಹ ಸಮಾರಂಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪೂಜಾಗಾಂಧಿ, ಅಜಯ್, ತರುಣ್, ಸಂಜನಾ, ನಿರ್ಮಾಪಕ ಕನಕಪುರ ಶ್ರೀನಿವಾಸ, ನಿರ್ದೇಶಕ ಎಂ.ಎಸ್. ರಮೇಶ್, ಮಹೇಶ್ ಬಾಬು, ಯೋಗೀಶ್ ಹುಣಸೂರು, ಗೀತ ಸಾಹಿತಿ ಕವಿರಾಜ್ ಸೇರಿದಂತೆ ಹಲವರು ಆಗಮಿಸಿ ನೂತನ ವಧೂವರರನ್ನು ಹರಸಿದರು. ಒಟ್ಟಾರೆ ಅದ್ದೂರಿ ಮದುವೆ ಮೂಲಕ ಹೆಸರಾಗುತ್ತಿರುವ ಚಿತ್ರರಂಗದ ಕಲಿಗಳು ಈ ರೀತಿಯೂ ವಿವಾಹವಾಗುತ್ತಿರುವುದು ಬಣ್ಣದ ಬದುಕಿನ ಬಗ್ಗೆ ಬಲ್ಲವರಿಗೆ ಅಚ್ಚರಿ ಮೂಡಿಸುತ್ತಿದೆ. ತಾಜ್ ಮಹಲ್ ಗೆದ್ದರೂ ಪ್ರೇಮ್ ಕಹಾನಿ ಚಿತ್ರದಲ್ಲಿ ಸೋತು ಎಡವಿದ ಚಂದ್ರು ಸದ್ಯದಲ್ಲೇ ಶಿವರಾಜ್ ಕುಮಾರ್ ಅಭಿನಯದ ಮೈಲಾರಿ ಚಿತ್ರವನ್ನು ಹೊರತರಲಿದ್ದು, ನಿರೀಕ್ಷೆ ಹೆಚ್ಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾಜ್ ಮಹಲ್, ಪ್ರೇಮ್ ಕಹಾನಿ, ಆರ್ ಚಂದ್ರು