ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿವಣ್ಣರ ಜೋಗಯ್ಯಕ್ಕೆ ಜೊತೆಯಾದ ಪೂಜಾ ಗಾಂಧಿ! (Shivaraj Kumar | Jogayya | Pooja Gandhi | Rakshita | Prem)
ಸುದ್ದಿ/ಗಾಸಿಪ್
Bookmark and Share Feedback Print
 
WD
ಪ್ರೇಮ್ ನಿರ್ದೇಶನದ, ರಕ್ಷಿತಾ ನಿರ್ಮಾಣದ ಹಾಗೂ ಬಹು ಮುಖ್ಯವಾಗಿ ಶಿವಣ್ಣ ಅವರ 100ನೇ ಚಿತ್ರವಾದ ಜೋಗಯ್ಯಕ್ಕೆ ಮಳೆ ಹುಡುಗಿ ಪೂಜಾ ಗಾಂಧಿ ಆಯ್ಕೆಯಾಗಿದ್ದಾರೆ. ಜೋಗಯ್ಯ ಚಿತ್ರದ ನಾಯಕಿಯಾಗಿ ಈಗಾಗಲೇ ಸುಮಿತ್ ಕೌರ್ ಅತ್ವಾಲ್ ಆಯ್ಕೆಯಾಗಿದ್ದಾದರೂ, ವಿಶೇಷವಾಗಿ ಅತಿಥಿ ಕಲಾವಿದೆಯಾಗಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಈ ಚಿತ್ರದಲ್ಲಿ ಶಿವಣ್ಣ ಅವರ ವಕೀಲೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಈ ಸುದ್ದಿಯನ್ನು ಸ್ವತಃ ಪೂಜಾ ಗಾಂಧಿ ಅವರೇ ಒಪ್ಪಿಕೊಂಡಿದ್ದು, ನಾನು ಜೋಗಯ್ಯ ಚಿತ್ರದಲ್ಲಿ ನಟಿಸುತ್ತಿರುವುದು ನಿಜ ಅಂದಿದ್ದಾರೆ. ಅತಿಥಿ ಕಲಾವಿದೆಯಾಗಿ ನಾನು ಚಿತ್ರದಲ್ಲಿ ನಟಿಸಲು ಒಪ್ಪಿದ್ದೇನೆ. ಇದರಲ್ಲಿ ನನಗೆ ಒಂದು ನಿರ್ಣಾಯಕ ಪಾತ್ರವಿದೆ. ಉತ್ತಮ ಪಾತ್ರವಿದು. ಹಾಗಾಗಿ ಒಪ್ಪಿದೆ. ಶಿವಣ್ಣ ಅವರ ವಕೀಲೆಯಾಗಿ ನಿರ್ವಹಿಸುವ ಪಾತ್ರ ನನ್ನದು. ಪ್ರೇಮ್ ಈ ಪಾತ್ರಕ್ಕಾಗಿ ನನಗೆ ಸಂಪರ್ಕಿಸಿದಾಗ ನಾನು ಇದೊಂದು ಗಂಭೀರ ಪಾತ್ರವಾಗಿದ್ದರಿಂದ ಒಪ್ಪಿಕೊಂಡೆ. ಈ ಪಾತ್ರದಲ್ಲಿ ನಟಿಸುವ ಬಗ್ಗೆ ನನಗೆ ಖುಷಿಯಿದೆ ಎಂದರು ಪೂಜಾ.

ಸದ್ಯ ಪೂಜಾ ಗಾಂಧಿ ನಟನೆಯ ಆಪ್ತ ಚಿತ್ರ ಹೊರಬರಲಿದೆ. ಸದ್ಯ ರಾಣಿ ಮಹಾರಾಣಿ ಚಿತ್ರದ ಶೂಟಿಂಗ್ ಕೂಡಾ ಭರದಲ್ಲಿ ಸಾಗಿದೆ. ಮುಂಗಾರು ಮಳೆಯ ನಂತರ ಸದ್ಯ ಪೂಜಾರ ಹಲವು ಚಿತ್ರಗಳು ತೋಪೆದ್ದರೂ, ಹಲವು ಚಿತ್ರಗಳು ಪೂಜಾರ ಕೈಯಲ್ಲಿದೆ. ಫಲಿತಾಂಶಕ್ಕಾಗಿ ಮಾತ್ರ ಕಾಯಬೇಕು.

ಇನ್ನಷ್ಟು ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೂಜಾ ಗಾಂಧಿ, ಶಿವರಾಜ್ ಕುಮಾರ್, ಜೋಗಯ್ಯ, ರಕ್ಷಿತಾ