ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾ ಪ್ರೇಮ್ ಜೋಡಿಯ ಜೊತೆಗಾರ ಮಿಂಚುತ್ತಾನಾ? (Ramya | Prem | Jothegara | Eradane Maduve)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟ ಪ್ರೇಮ್‌ಗೆ ಜೊತೆಗಾರ ಗೆದ್ದೇ ಗೆಲ್ಲುತ್ತದೆ ಎಂಬ ಅದಮ್ಯ ವಿಶ್ವಾಸ ಇದೆಯಂತೆ. ಈ ವಾರ ತೆರೆಕಾಣುತ್ತಿರುವ ಈ ಚಿತ್ರ ಖಂಡಿತವಾಗಿಯೂ ಗೆಲ್ಲುತ್ತದೆ ಅಂತ ಅವರಿಗೆ ಅನ್ನಿಸಿದೆಯಂತೆ.

ಬಹುದಿನದಿಂದ ಒಂದು ಹಿಟ್ ಚಿತ್ರದ ನಿರೀಕ್ಷೆಯಲ್ಲಿರುವ ಇವರನ್ನು ಜೊತೆಗಾರ ಕೈ ಹಿಡಿಯುವನೇ ಅನ್ನುವುದು ಕಾದು ನೋಡಬೇಕಾದ ಸಂಗತಿ. ಹಾಗಂತ ಈ ಚಿತ್ರದ ನಾಯಕಿ ರಮ್ಯಾ ಪಾಲಿಗೂ ಇದು ಒಂದು ನಿರೀಕ್ಷೆಯ ಚಿತ್ರವಾಗಿರುವುದು ಸುಳ್ಳಲ್ಲ. ಆದರೆ ರಮ್ಯಾ ಮಾತ್ರ ಈಗ ಸೆಪ್ಟೆಂಬರ್ ತಿಂಗಳಿಡೀ ಅಕ್ಕ ಸಮ್ಮೇಳನ, ಚಾಂಪಿಯನ್ಸ್ ಲೀಗ್ ಅಂತೆಲ್ಲಾ ಸುತ್ತುತ್ತಿರುವ ಸಂದರ್ಭ ಈ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ರಮ್ಯಾಗೆ ಕೊಂಚ ಬೇಸರವಿದೆ.

ಎರಡನೇ ಮದುವೆ ಚಿತ್ರ ಗೆದ್ದಿದೆ. ಇದರಲ್ಲಿ ಪ್ರೇಮ್ ನಟನೆಯೂ ಕ್ಲಿಕ್ ಆಗಿದೆ. ಇದೇ ಉತ್ಸಾಹದಲ್ಲಿ ಮಾತಿಗಿಳಿದ ಪ್ರೇಮ್ ನನ್ನ ಗೆಲುವಿನ ದಿನಗಳು ಇದೀಗ ಪುನಃಆರಂಭವಾಗಿವೆ ಎನ್ನುತ್ತಾರೆ ಆತ್ಮವಿಶ್ವಾಸದಿಂದ. ಎರಡನೇ ಮದುವೆ ಮೂಲಕ ಅವರ ಅದೃಷ್ಟ ತಿರುಗಿದೆಯಂತೆ. ಇದಕ್ಕಿಂತ ಹೆಚ್ಚಾಗಿ ಜೊತೆಗಾರ ಚಿತ್ರ ಬಿಡುಗಡೆ ಆಗುವುದನ್ನು ಜನ ಕಾಯುತ್ತಿದ್ದಾರಂತೆ. ಕೆಲ ಚಿತ್ರ ಬಿಡುಗಡೆ ತಡವಾದರೆ ಜನ ಅದನ್ನು ತಿರಸ್ಕರಿಸಿ ಬಿಡುತ್ತಾರೆ. ಆದರೆ ಜೊತೆಗಾರನ ವಿಷಯದಲ್ಲಿ ಹಾಗೆ ಆಗುವುದಿಲ್ಲ ಎನ್ನುವ ಗ್ಯಾರೆಂಟಿ ಕೊಡುತ್ತಾರೆ ಅವರು.

ಜೊತೆಗಾರ ಯಾರಿಗೂ ಯಾವ ಕಾರಣಕ್ಕೂ ಮೋಸ ಮಾಡಲಾರ. ಏಕೆಂದರೆ ಚಿತ್ರದ ಮೇಕಿಂಗ್ ಸ್ಟೈಟ್ ಆ ರೀತಿ ಇದೆ. ನಾನು ಹಾಗೂ ರಮ್ಯ ಜೋಡಿಯನ್ನು ಜನ ಒಪ್ಪುತ್ತಾರೆ. ಇದರ ಜತೆ ಕಥೆಯೂ ಉತ್ತಮವಾಗಿದ್ದು ಜೊತೆಗಾರ ಜನರಿಗೆ ಇಷ್ಟವಾಗುತ್ತಾನೆ. ಆಶಿಷ್ ವಿದ್ಯಾರ್ಥಿ ಅಭಿನಯಕ್ಕೆ ಜನ ಮಾರು ಹೋಗದೇ ಇರಲಾರರು ಅನ್ನುತ್ತಿದ್ದಾರೆ. ಎಲ್ಲಕ್ಕೂ ಇನ್ನೇನು ಕಾಲ ಕೂಡಿ ಬಂದಿದೆ. ಚಿತ್ರ ಇದೇ ಶುಕ್ರವಾರ ತೆರೆಕಾಣಲಿದ್ದು ಹೇಗೆ ಪ್ರತಿಕ್ರಿಯೆ ಸಿಗುತ್ತದೆ ಕಾದು ನೋಡಬೇಕಿದೆ.

ಇನ್ನೂ ಹೆಚ್ಚಿನ ಫೋಟೋಗಳಿಗೆ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮ್ಯಾ, ಪ್ರೇಮ್, ಜೊತೆಗಾರ, ಎರಡನೇ ಮದುವೆ