ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ನೆನಪಿರಲಿ' ಪ್ರೇಮ್‌ಗೆ ಇದೊಂಥರಾ ಲವ್... ಮೋಡಿ! (Nenapirali Prem | Edonthara Love Story | Jothegara)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟ ಪ್ರೇಮ್ ಅವರ ಲಕ್ಕು ಕೊನೆಗೂ ಖುಲಾಯಿಸಿದೆ. ಎರಡನೇ ಮದುವೆಯ ಮೂಲಕ ಸುದೀರ್ಘ ಸಮಯದ ನಂತರ ಪ್ರೇಕ್ಷಕರೆದುರು ಬಂದ ಪ್ರೇಮ್ ಈವರೆಗೆ ಕಾರಣಾಂತರಗಳಿಂದ ಡಬ್ಬದಲ್ಲೇ ಕೂತಿದ್ದ ಜೊತೆಗಾರ ಚಿತ್ರವೂ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಪ್ರೇಮ್ ನಾಯಕತ್ವದ ಮತ್ತೊಂದು ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಕೊನೆಗೂ ಪ್ರೇಮ್‌ಗೆ ಆ ಮೂಲಕ ಅದೃಷ್ಟ ಲಕ್ಷ್ಮಿ ಬಾಗಿಲು ತೆರೆದಿದ್ದಾಳೆ.

ಲವ್ಲೀ ಸ್ಟಾರ್ ಎಂಬ ಬಿರುದಾಂಕಿತವನ್ನೇ ಹೊತ್ತಿರುವ ಪ್ರೇಮ್ 'ಇದೊಂಥರಾ ಲವ್ ಸ್ಟೋರಿ' ಅಂತ ಇದೀಗ ನಾಚಿಕೊಳ್ಳುತ್ತಿದ್ದಾರೆ. ಅವರು ಒಪ್ಪಿಕೊಂಡ ಚಿತ್ರದ ಹೆಸರೇ ಹಾಗೆ. ಇದೊಂಥರಾ ಲವ್ ಸ್ಟೋರಿ. ಯಾವ ಥರ ಅಂತ ಕೇಳಬೇಡಿ.

ಹೌದು. ನೆನಪಿರಲಿ ಚಿತ್ರದ ನಂತರ ಇವರು ಅಂಥ ನಿರೀಕ್ಷೆಯ ಚಿತ್ರವನ್ನು ಮಾಡಲೇ ಇಲ್ಲ. ಅಥವಾ ಅವರು ಮಾಡಿದ ಚಿತ್ರಗಳು ಆ ರೀತಿ ಓಡಲೇ ಇಲ್ಲ. ಜೊತೆ ಜೊತೆಯಲಿ ಚಿತ್ರದ ಮೂಲಕ ಪ್ರೇಮ್ ಹೆಸರು ಮಾಡಿದ ನಂತರ ಪಲ್ಲಕ್ಕಿಯಲ್ಲಿ ಅಲ್ಪ ಸ್ವಲ್ಪ ಯಶಸ್ಸು ಸಿಕ್ಕಿತು. ಆದರೆ ಉಳಿದ ಯಾವ ಚಿತ್ರವೂ ಇವರಿಗೆ ಹೆಸರು ತಂದುಕೊಡಲಿಲ್ಲ. ಅವಕಾಶವನ್ನೂ ಸಹ.
MOKSHA


ಇವೆಲ್ಲದರ ನಡುವೆ ಅವರ ಜೊತೆಗಾರ ಚಿತ್ರ ಡಬ್ಬದಿಂದ ಆಚೆ ಬಂದಿದೆ. ಇದನ್ನು ಜನ ಇಷ್ಟ ಪಡುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕು. ಎರಡನೇ ಮದುವೆ ಚಿತ್ರದ ನಂತರ ತಮ್ಮ ಅದೃಷ್ಟ ಬದಲಾಗಿದೆ ಎನ್ನುವ ಪ್ರೇಮ್ ಪಾಲಿಗೆ ಇನ್ನೊಂದು ಚಿತ್ರ ಒಲಿದು ಬಂದಿದ್ದಂತೂ ಸುಳ್ಳಲ್ಲ.

ಅಂದಹಾಗೆ, 'ಇದೊಂಥರಾ ಲವ್ ಸ್ಟೋರಿ' ಚಿತ್ರವನ್ನು ಶೋಭಾ ರಾಜಣ್ಣ ನಿರ್ಮಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ನಾಗೇಂದ್ರ ಅರಸ್ ವಹಿಸಿಕೊಂಡಿದ್ದಾರೆ. ಶೋಭಾ ರಾಜಣ್ಣರ ನಾಲ್ಕನೇ ಚಿತ್ರ ಇದಾಗಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದಾರೆ. ಎರಡನೇ ಮದುವೆಯಲ್ಲಿ ಒಂದಿಷ್ಟು ನಗಿಸಿದ್ದ ಪ್ರೇಮ್ ಅವರೇ ಈ ಚಿತ್ರಕ್ಕೆ ಸೂಕ್ತ ನಾಯಕ ಎಂದು ನಿರ್ಧರಿಸಿದ ಶೋಭಾ ಅವರು ಇವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರವೂ ಹಾಸ್ಯ ಮಿಶ್ರಿತವಾದ ಪ್ರೇಮಕಥೆ ಎನ್ನುವುದರಲ್ಲಿ ಸಂಶಯವಿಲ್ಲ.

ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆದಿದೆ. ಪರಭಾಷಾ ನಟಿಯೊಬ್ಬಳನ್ನು ಕನ್ನಡಕ್ಕೆ ಪರಿಚಯಿಸುವ ಸಾಧ್ಯತೆ ಇದೆ. ಚಿತ್ರದಲ್ಲಿ ದೇವರಾಜ್, ರಂಗಾಯಣ ರಘು ಮತ್ತಿತರ ಪ್ರಮುಖರು ಇದ್ದಾರೆ. ಚಿತ್ರರಂಗದಲ್ಲಿ ಗಾಡ್ ಫಾದರ್ ಇಲ್ಲದ ತನ್ನ ತಟನೆಯ ಬಂಡವಾಳವನ್ನಷ್ಟೇ ಪಣಕ್ಕೊಡ್ಡಿರುವ ಪ್ರೇಮ್‌ಗೆ ಶುಭವಾಗಲಿ ಎಂದು ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೆನಪಿರಲಿ, ಪ್ರೇಮ್, ಇದೊಂಥರಾ ಲವ್ ಸ್ಟೋರಿ, ಜೊತೆಗಾರ