ಮಿಮಿಕ್ರಿ ನಾಟಕ ಮಾಡಿಕೊಂಡು ದಿನ ಕಳೆಯುತ್ತಿರುವ ತಂಡವೊಂದು ಚಿತ್ರ ಮಾಡುವ ಸಾಹಸಕ್ಕೆ ಕೈ ಹಾಕಿದೆ. ಕಡಿಮೆ ಬಜೆಟ್ಟಿನ 40 ಲಕ್ಷ ರೂ. ವೆಚ್ಚದಲ್ಲಿ ಚಿತ್ರದ ಸಂಗೀತ, ಚಿತ್ರಕಥೆ ಎಲ್ಲವನ್ನೂ ಈಗ ಮುಗಿಸಲಾಗಿದೆ. ಚಿತ್ರದ ಚಿತ್ರೀಕರಣ ಮುಹೂರ್ತ ಆಗಿದ್ದು, ಚಿತ್ರಕ್ಕೆ ದ್ರೋಹಿ ಎಂದು ಇರಿಸಲಾಗಿದೆ.
ಚಿತ್ರ ಉತ್ತರ ಕರ್ನಾಟಕ ಭಾಗದಲ್ಲಿಯೇ ಶೂಟಿಂಗ್ ನಡೆಯಲಿದ್ದು, ಅಲ್ಲಿನ ಭಾಷೆ ಬಳಸಿಕೊಂಡು ಚಿತ್ರ ಮಾಡಲಾಗುತ್ತಿದೆ. ಹುಬ್ಬಳ್ಳಿಯ ದೇವಾನಂದ್ ಹಾಗೂ ಗಾಯತ್ರಿ ನಾಯಕ್ ಚಿತ್ರದ ನಾಯಕ, ನಾಯಕಿಯರು. ಈ ಚಿತ್ರದ ಶೂಟಿಂಗ್‌ಗೆ ಹುಬ್ಬಳ್ಳಿಯನ್ನೇ ಕೇಂದ್ರಸ್ಥಾನವಾಗಿಸಲಾಗಿದೆ.
ಚಿತ್ರದಲ್ಲಿ ಐದು ಹಾಡುಗಳು ಇರಲಿವೆ. ಇವು ಸಹ ಉತ್ತರ ಕರ್ನಾಟಕ ಭಾಷೆಯಲ್ಲಿಯೇ ಇರುತ್ತವೆಯೋ ಇಲ್ಲವೋ ಅನ್ನುವುದನ್ನು ಹೇಳಲಾಗಿಲ್ಲ. ಐಹೊಳೆ, ಬಾದಾಮಿ, ಪಟ್ಟದ ಕಲ್ಲಿನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಪ್ರಕಾಶ್ ಕಮ್ಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪರಶುರಾಮ ನಿರ್ಮಾಪಕರು. ಒಂದು ಹಾಡಿನ ಚಿತ್ರೀಕರಣ ಇತ್ತೀಚೆಗೆ ಮುಗಿದಿದ್ದು, ಉಳಿದ ನಾಲ್ಕು ಹಾಡು ಪೂರ್ಣಗೊಳ್ಳಬೇಕಿದೆ.
ಚಿತ್ರದ ಇನ್ನೊಂದು ವಿಶೇಷ ಅಂದರೆ ಇಲ್ಲಿ ಐಟಮ್ ಸಾಂಗ್ ಕೂಡಾ ಇದೆ. ಚಿತ್ರ ರಸಿಕರ ಪಾಲಿಗೆ ಇದರಲ್ಲಿ ಎಲ್ಲವೂ ಇರಲಿದೆ. ಗ್ರಾಮೀಣ ಸಂಪ್ರದಾಯದ ರೀತಿ ನೀತಿಯನ್ನು ತೋರಿಸಲಾಗಿದೆ. ಅವರ ಭಾಷೆ, ಜೀವನ ಶೈಲಿ, ನಡೆನುಡಿಯನ್ನು ತೆರೆಯ ಮೇಲೆ ತರಲಾಗಿದೆ.