ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರಿನ್ಸ್‌ಗೆ ಮತ್ತೆ ಮರಳಿದ್ದಾರಂತೆ ಓಂ ಪ್ರಕಾಶ್ (Prince | Om Prakash | Darshan | Nikitha)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಓಂ ಪ್ರಕಾಶ್ ರಾವ್ ಅಪಘಾತಕ್ಕೀಡಾಗಿ ಗಾಯಗೊಂಡಿದ್ದು ಗೊತ್ತೇ ಇದೆ. ಇದೀಗ ಚೇತರಿಸಿಕೊಂಡು ಮತ್ತೆ ಚಿತ್ರ ನಿರ್ದೇಶನಕ್ಕೆ ಮರಳಿದ್ದಾರೆ. ಸದ್ಯ ಇವರು ದರ್ಶನ್ ಅಭಿನಯದ ಪ್ರಿನ್ಸ್ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ಸಮೀಪ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಇವರು ಒಂದಿಷ್ಟು ದಿನ ವಿಶ್ರಾಂತಿ ಪಡೆದು ಈಗ ಮರಳಿದ್ದಾರೆ. ಸದ್ಯ ಚಿತ್ರತಂಡ ಮೈಸೂರಿನಲ್ಲಿದ್ದು, ಇವರೀಗ ಇಲ್ಲಿ ವಿಪರೀತ ಬ್ಯುಸಿ ಆಗಿ ಕೆಲಸ ಮಾಡುತ್ತಿದ್ದಾರಂತೆ.

ಅಪಘಾತಕ್ಕೆ ಈಡಾಗಿ ಇವರು ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರದ ಶೂಟಿಂಗ್ ನಿಂತಿರಲಿಲ್ಲ. ಎಂ.ಎಸ್. ರಮೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದೆಲ್ಲಾ ಗಾಳಿ ಸುದ್ದಿ ಹಬ್ಬಿತ್ತು. ಆದರೆ ಮರಳಿ ಬಂದು ಶೂಟಿಂಗಿನಲ್ಲಿ ಸಕ್ರಿಯರಾಗಿರುವ ಓಂಪ್ರಕಾಶ್ ರಾವ್ ಇದೆಲ್ಲಾ ಸುಳ್ಳು. ನಾನೇ ಚಿತ್ರ ನಿರ್ದೇಶಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
MOKSHA


ದರ್ಶನ್- ನಿಖಿತಾ ಚಿತ್ರದ ನಾಯಕ ನಟ ನಟಿಯರಾಗಿದ್ದು ಇವರು ಸಹ ಸದ್ಯ ಮೈಸೂರಿನಲ್ಲೇ ಇದ್ದಾರೆ. ಅಲ್ಲಿಯೇ ಚಿತ್ರದ ಅರ್ಧ ಭಾಗ ಶೂಟಿಂಗ್ ಮುಗಿದಿದೆ. ಉಳಿದರ್ಧ ಚಿತ್ರೀಕರಣ ನಡೆಯಬೇಕಿದೆ. ಇದನ್ನು ಮೈಸೂರಿನ ಜತೆಗೆ ರಾಜ್ಯದ ನಾನಾ ಭಾಗದಲ್ಲೂ ಚಿತ್ರೀಕರಿಸುವ ಉದ್ದೇಶ ಹೊಂದಿದ್ದಾರೆ ಓಂಪ್ರಕಾಶ್ ರಾವ್.

MOKSHA
ಓಂ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ನಿಖಿತಾ ನಟಿಸುತ್ತಿರುವ ಎರಡನೇ ಚಿತ್ರ ಇದು. ಮೊದಲು ಯೋಧ ಚಿತ್ರದಲ್ಲಿ ನಟಿಸಿದ್ದರು. ಓಂ ಪ್ರಕಾಶ್ ರಾವ್ ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಸಂಪೂರ್ಣ ಚೇತರಿಸಿಕೊಂಡಿಲ್ಲ. ಇದರಿಂದ ಒಂದು ಸ್ಟಿಕ್ ಆಧಾರದ ಮೇಲೆ ಓಡಾಡುತ್ತಿದ್ದಾರೆ. ಈ ಮೂರು ಕಾಲಿನ ಆಧಾರದ ಮೇಲೆ ನಿಂತು ಅವರು ಪ್ರಿನ್ಸ್‌ನ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ದರ್ಶನ್- ನಿಖಿತಾ ಅವರು ದೇವಸ್ಥಾನದಿಂದ ಆಚೆ ಬರುವ ದೃಶ್ಯವನ್ನು ಇವರೇ ಚಿತ್ರೀಕರಿಸಿಕೊಂಡರು.ಇದನ್ನು ಕಂಡು ಯೂನಿಟ್ಟಿನಲ್ಲಿದ್ದ ಎಲ್ಲರೂ ಅಚ್ಚರಿ ಪಟ್ಟರು. ಓಂ ಪ್ರಕಾಶ್ ರಾವ್ ಪೆಟ್ಟು ತಿಂದರೂ ಹಟ ಬಿಡದ ನಿರ್ದೇಶನ ಅಂತ ತಮ್ಮಲ್ಲೇ ಮಾತನಾಡಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಿನ್ಸ್, ಓಂ ಪ್ರಕಾಶ್, ದರ್ಶನ್, ನಿಖಿತಾ