ಕೃಷ್ಣನ್ ಲವ್ ಸ್ಟೋರಿ ಶತದಿನ ಪೂರೈಸಿದೆ. ಈ ಮೂಲಕ ಚಿತ್ರ ತಂಡ ಒಂದು ಯಶಸ್ವಿ ಚಿತ್ರವನ್ನು ಜನರಿಗೆ ನೀಡಿದ ಕೀರ್ತಿಗೂ ಭಾಜನವಾಗಿದೆ.
ನಿರ್ದೇಶಕ ಶಶಾಂಕ್ ಈ ಗೆಲುವಿನ ಮೂಲಕ ಸತತ ಮೂರನೇ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಇವರು ಹ್ಯಾಟ್ರಿಕ್ ನಿರ್ದೇಶಕ ಎಂಬ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಬಹಳ ದಿನಗಳಿಂದ ಸಿದ್ಧತೆ ನಡೆಸಿ ಕಡಿಮೆ ಚಿತ್ರಗಳನ್ನು ಮಾಡಿದರೂ ಈ ಮಟ್ಟದ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡು ಸಂತಸದ ನಗೆ ಬೀರಿದ್ದಾರೆ. ಇದು ನನ್ನ ಗೆಲುವು ಮಾತ್ರವಲ್ಲ, ಚಿತ್ರಕ್ಕಾಗಿ ದುಡಿದ ಎಲ್ಲರ ಗೆಲುವು ಅನ್ನುತ್ತಾರೆ.
ಚಿತ್ರ ಮೆಜೆಸ್ಟಿಕ್ ಸಮೀಪದ ಕೆ.ಜಿ. ರಸ್ತೆಯಲ್ಲಿರುವ ಸಾಗರ್ ಚಿತ್ರ ಮಂದಿರದಲ್ಲಿ ಶತದಿನ ಪೂರೈಸಿದ್ದು, ನಾಯಕಿ ರಾಧಿಕಾ ಪಾಲಿಗೆ ಇದು ಅತ್ಯಂತ ಸಂತಸ ತಂದುಕೊಟ್ಟ ಸಂಗತಿ ಆಗಿದೆ. ಇವರ ನಾಲ್ಕನೇ ಚಿತ್ರ ಈ ಚಿತ್ರ ಮಂದಿರದಲ್ಲಿ ಬಿಡುಗಡೆ ಭಾಗ್ಯ ಕಂಡಿದ್ದು, ಎಲ್ಲವೂ ಗೆದ್ದಿರುವುದು ಇನ್ನೊಂದು ವಿಶೇಷ. ಇವರ ಮೊದಲ ಚಿತ್ರವೂ ಇಲ್ಲಿಯೇ ಬಿಡುಗಡೆ ಆಗಿತ್ತು. ಇದೀಗ ಇವರು ಕನ್ನಡದ ಯಶಸ್ವಿ ನಟಿಯಾಗಿ ಹೊರಹೊಮ್ಮಿದ್ದಾರೆ ಎನ್ನಬಹುದು.
ಅಜಯ್ ಕೂಡಾ ತಾಜ್ ಮಹಲ್ ಚಿತ್ರದ ನಂತರ ಇದೊಂದು ಯಶಸ್ವಿ ಚಿತ್ರದ ಯೋಗ ಪಡೆದಿದ್ದಾರೆ. ಸೈಲೆಂಟ್ ಬಾಯ್ ಆಗಿ ಇವರು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್. ಪದೇ ಪದೆ ಕೇಳುವಂತಿರುವ ಈ ಹಾಡುಗಳೀಗ ಎಲ್ಲರ ಬಾಯಿಯಲ್ಲೂ ನಲಿದಾಡುತ್ತಿದ್ದು, ಎಲ್ಲವೂ ಈ ಚಿತ್ರದ ಮೂಲಕ ಯಶಸ್ಸಿವ ಸಂಭ್ರಮದಲ್ಲಿದ್ದಾರೆ.