ಜಂಗ್ಲಿ ಜೋಡಿ ಮತ್ತೆ ಒಂದಾಗುತ್ತಿದೆ. ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್... ಎಂಬ ರಾಕಿಂಗ್ ಹಾಡಿಗೆ ಹೆಜ್ಜೆ ಹಾಕಿದ್ದ ಈ ಜೋಡಿಯೀಗ ಮತ್ತೆ ಜೊತೆಯಾಗಿ ಅಭಿನಯಿಸಲು ಹೊರಟಿದ್ದಾರೆ. ಕೃಷ್ಣನ್ ಲವ್ ಸ್ಟೋರಿಯಂತಹ ಯಶಸ್ವೀ ಚಿತ್ರ ನೀಡಿದ ಶಶಾಂಕ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಈ ಇಬ್ಬರು ನಾಯಕ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ ಎನ್ನೋದೇ ವಿಶೇಷ!
ಹೌದು. ಶಶಾಂಕ್ ಮತ್ತೊಂದು ಚಿತ್ರಕ್ಕೆ ಅಣಿಯಾಗಿದ್ದಾರೆ. ಚಿತ್ರದ ನಾಯಕ ಮತ್ಯಾರೂ ಅಲ್ಲ ದುನಿಯಾ ವಿಜಯ್. ವಿಜಯ್‌ಗೆ ಜೋಡಿಯಾಗಿ ಐಂದ್ರಿತಾ ಎಂಬ ಚಿಗರೆ ಕಂಗಳ ಸುಂದರಿ ಆಯ್ಕೆಯಾಗುವ ಎಲ್ಲ ಲಕ್ಷಣಗಳೂ ಇವೆ. ಈಗಾಗಲೇ ವಿಜಯ್ ಜೊತೆಗೆ ಶಶಾಂಕ್ ಮಾತುಕತೆ ನಡೆಸಿದ್ದು, ನಟಿಯ ಜೊತೆಗೆ ಮಾತುಕತೆ ಇನ್ನೂ ಅಂತಿಮವಾಗಿಲ್ಲ ಎನ್ನುತ್ತವೆ ಮೂಲಗಳು. ಲವ್ ಸ್ಟೋರಿ ಮಾಡಿ ಜನಪ್ರಿಯರಾದ ಹಿನ್ನೆಲೆಯಲ್ಲಿಯೇ ಏಕ್ದಂ ಆಕ್ಷನ್ ಧಮಾಕಾಗೆ ಇಳಿದಿದ್ದು ಇನ್ನೊಂದು ಅಚ್ಚರಿಯ ಸಂಗತಿ. ಆದರೂ ಇದು ಸತ್ಯ. ಕನ್ನಡದ ಚಿತ್ರ ಪ್ರೇಮಿಗಳು ಎಲ್ಲಾ ವಿಧದ ಚಿತ್ರವನ್ನೂ ಬಯಸುತ್ತಾರೆ. ಅದನ್ನು ನೀಡುವುದು ನಮ್ಮ ಕರ್ತವ್ಯ ಎನ್ನುತ್ತಾರೆ ಶಶಾಂಕ್.
MOKSHA
ಸುದೀಪ್ ಜತೆಯೂ ಒಂದು ಚಿತ್ರ ಮಾಡುವ ಹಂಬಲ ಶಶಾಂಕ್‌ಗೆ ಇದೆಯಂತೆ. ಅದು ಯಾವಾಗ ಸಾಕಾರ ಆಗುತ್ತೋ ಗೊತ್ತಿಲ್ಲ. ಆ ಬಗ್ಗೆ ಸುದೀಪ್ ಜೊತೆಗೆ ಮಾತುಕತೆಯೂ ನಡೆದಿದೆಯಾದರೂ, ಸುದೀಪ್ ಈಗ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಕಾರಣ ಈ ಚಿತ್ರದ ನಂತರದ ಚಿತ್ರದಲ್ಲಿ ಸುದೀಪ್ ಅವರನ್ನು ಹಾಕಿಕೊಳ್ಳುವ ಸಂಭವವಿದೆ.
ಒಟ್ಟಾರೆ ಕನ್ನಡದ ಪಾಲಿಗೆ ಉತ್ತಮ ಚಿತ್ರಗಳನ್ನು ನೀಡಿರುವ ಶಶಾಂಕ್‌ಗೆ ಸಧ್ಯದ ಒಬ್ಬ ಭರವಸೆಯ ಹಾಗೂ ಯಶಸ್ವೀ ನಿರ್ದೇಶಕ ಎನ್ನುವ್ಲಲಿ ಯಾುದೇ ಸಂಶಯವಿಲ್ಲ.