ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಐ ಲವ್ ಯೂ ಅಂದ ನಮಿತಾರಿಂದ ಸಕತ್ 'ಯೋಗ' (Namitha | Sexy | Ravichandran | Namitha I Love You)
ಸುದ್ದಿ/ಗಾಸಿಪ್
Bookmark and Share Feedback Print
 
WD
ದುಂಡು ದುಂಡನೆಯ ಚೆಲುವೆ ನಮಿತಾ ಈಗ ಫುಲ್ ಲವ್ವಲ್ಲಿ ಬಿದ್ದಿದ್ದಾರೆ. ಎರ್ರಾ ಬಿರ್ರಿ ಪ್ರೀತಿಗೆ ಬಿದ್ದು ತೊಳಲಾಡುತ್ತಿದ್ದಾರೆ. ಹಾಗಾಗಿಯೋ ಏನೋ, ಕೊಂಚ ಕೊಬ್ಬು ಕರಗಿಸಿ ತೆಳ್ಳಗೂ ಆಗಿದ್ದಾರೆ.

ಛೇ, ನಮಿತಾ ಲವ್ವಲ್ಲಿ ಬಿದ್ದಿದ್ದಾರಾ? ಇನ್ನು ನಮ್ಮ ಗತಿಯೇನು ಅಂತ ಯೋಚಿಸುತ್ತಿದ್ದೀರಾ? ಚಿಂತಿಸಬೇಡಿ. ಇದು ಬೇಸರದ ಸುದ್ದಿಯಲ್ಲ ನಿಮಗೆ ಖುಷಿಯ ಸುದ್ದಿ. ಯಾಕೆಂದರೆ ನಮಿತಾ ಹೂವಾಗಿ ಅರಳಿದ ಮೇಲೆ ಇದೀಗ ಮತ್ತೆ ಕನ್ನಡದತ್ತ ಮುಖ ಮಾಡಿದ್ದಾರೆ. ಅದು ಒಂದಲ್ಲ, ಎರಡು. ಈಗಾಗಲೇ ಭಗವಂತ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈಗ ಇನ್ನೊಂದು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅದು 'ನಮಿತಾ, ಐ ಲವ್ ಯೂ'!

ಹೌದು. ಈ ಹೂ ಚೆಲುವೆ ನಮಿತಾ ರವಿಚಂದ್ರನ್ ಜತೆ ನಟಿಸಿದ್ದರು. ನೀಲಕಂಠ ಎಂಬ ಇವರದ್ದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಜೊತೆಗೆ ರವಿಮಾಮನ ಹೂ ಚಿತ್ರದಲ್ಲೂ ಇತ್ತೀಚೆಗೆ ಮೋಡಿ ಮಾಡಿದ್ದರು. ಅಂದೊಮ್ಮೆ ದರ್ಶನ್ ಜೊತೆಗೆ ಇಂದ್ರ ಚಿತ್ರದಲ್ಲಿ ಬಣ್ಣ ಹಚ್ಚಿದ ಮೇಲೆ ನಮಿತಾ, 'ನಾನಿನ್ನು ಕೇವಲ ರವಿಚಂದ್ರನ್ ಅವರ ಚಿತ್ರದಲ್ಲಿ ಮಾತ್ರ ನಟಿಸ್ತೀನಿ, ಅವರು ನಟಿಯರನ್ನು ತುಂಬ ಚೆನ್ನಾಗಿ ನೋಡಿಕೊಳ್ತಾರೆ, ಅಷ್ಟೇ ಚೆನ್ನಾಗಿ ತೆರೆಯ ಮೇಲೂ ತೋರಿಸ್ತಾರೆ' ಅಂದಿದ್ದರು. ಆದರೆ, ಅಂದು ಅಂದಿದ್ದ ಮಾತನ್ನೀಗ ನಮಿತಾ ಮುರಿದಿದ್ದಾರೆ. ಮೂಲಕ ರವಿಚಂದ್ರನ್ ಅವರಿಲ್ಲದ ಎರಡು ಚಿತ್ರದಲ್ಲಿ ನಮಿತಾ ನಟಿಸುತ್ತಿದ್ದಾರೆ.

ಅಂದ ಹಾಗೆ ಈ ಚಿತ್ರಕ್ಕೆ ಹಿಂದೆ ಲವ್ ಕಾಲೇಜ್ ಎಂದು ಹೆಸರಿಸಲಾಗಿತ್ತು. ಈಗ ಇದನ್ನು ಬದಲಿಸಿ 'ನಮಿತಾ ಐ ಲವ್ ಯೂ' ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಈ ನಮಿತಾ ಯೋಗ ಶಿಕ್ಷಕಿಯಾಗಿ ಆಕ್ಷನ್ ಕ್ವೀನ್ ಆಗಿ ಗೋಚರಿಸಲಿದ್ದಾರೆ. ಸಿಕ್ಕಾಪಟ್ಟೆ ಫೈಟಿಂಗ್ ಕೂಡಾ ಮಾಡಲಿದ್ದಾರಂತೆ.

ಬೆಂಗಳೂರು ನಗರದ ಸಂಭ್ರಮ್ ಕಾಲೇಜಿನಲ್ಲಿ ಚಿತ್ರದ ಶೂಟಿಂಗ್ ಇತ್ತೀಚೆಗೆ ಆರಂಭವಾಗಿದೆ. ಆದರೆ ಈ ಸಂದರ್ಭದಲ್ಲಿ ನಮಿತಾ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಅಲ್ಲಿ ಶೂಟಿಂಗ್ ನಡೆದ ಸಂದರ್ಭದಲ್ಲಿ ಒಂದಿಷ್ಟು ಹುಡುಗರು ಗಾಂಜಾ ಹೊಡೆಯುವುದನ್ನು ಚಿತ್ರಿಸಿಕೊಳ್ಳಲಾಯಿತು.

ಈ ಚಿತ್ರದ ಇನ್ನೊಂದು ವಿಶೇಷ ಅಂದರೆ ಕೊಂಚ ಸಣ್ಣಗಾಗಿ ನಮಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಚಿತ್ರಕ್ಕಾಗಿಯೇ ಅವರು ದೇಹದ ತೂಕ ಇಳಿಸಿಕೊಂಡಿದ್ದಾರಂತೆ. ಚಿತ್ರವನ್ನು ತೆಲುಗು ಮೂಲದ ಜೈಸಿಂಗ್ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಒಟ್ಟಾರೆ ನಮಿತಾ ಯೋಗ ಮಾಡುವ ಭಂಗಿಯನ್ನು ನೋಡಲು ಪಡ್ಡೆ ಹೈಕಳು ಕಾತುರರಾಗಿದ್ದಾರೆ ಎಂದು ವಿವರಿಸಿ ಹೇಳಬೇಕಿಲ್ಲ ಅಲ್ಲವೇ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಮಿತಾ, ಸೆಕ್ಸೀ ಕ್ವೀನ್, ರವಿಚಂದ್ರನ್, ನಮಿತಾ ಐ ಲವ್ ಯೂ