ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಿಗಂತ್ ಅಭಿನಯದ ತಾರೆ ಶೀಘ್ರದಲ್ಲೇ ಬಿಡುಗಡೆ (Diganth | Thaare | Anushka | Pancharangi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಶಿವರಾಜ್ ಹೊಸಕೆರೆ ನಿರ್ದೇಶನದ ತಾರೆ ಚಿತ್ರ ತೆರೆಗೆ ಬರಲು ರೆಡಿ ಅಗಿದೆಯಂತೆ. ಇದು ನಿರ್ದೇಶಕರ ಎರಡನೇ ಚಿತ್ರವಾಗಿದ್ದು, ಬಹಳ ಕುತೂಹಲ ಉಳಿಸಿಕೊಂಡಿದೆ. ಪಂಚರಂಗಿ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ದೂದ್ ಪೇಡಾ ದಿಗಂತ್ ಈ ಚಿತ್ರದ ನಾಯಕ. ಚಿತ್ರ ಶುರುವಾಗಿ ಈಗಾಗಲೇ ಎರಡೂವರೆ ವರ್ಷ ಸಂದು ಹೋಗಿದೆ!

ಚಿತ್ರ ತಡವಾಗಿ ಬಂದರೂ ಆಧುನಿಕತೆಯ ವಿಷಯದಲ್ಲಿ ಹಿಂದೆ ಬಿದ್ದಿಲ್ಲವಂತೆ. ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆಯಂತೆ. ಚಿತ್ರಕ್ಕೆ ಇಬ್ಬರು ನಾಯಕಿಯರು. ಒಬ್ಬರು ಅನುಷ್ಕಾ. ಬಾಬಿ ಚಿತ್ರದ ಸಂಗೀತ ನಿರ್ದೇಶಕಿ.

ಹಳ್ಳಿ ಹುಡುಗನಾಗಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಹಳ್ಳಿಯಿಂದ ಪೇಟೆಗೆ ಬಂದು, ಇಲ್ಲಿನ ಜೀವನಕ್ಕೆ ಒಗ್ಗಿಕೊಂಡು ಬದುಕುವ ಪಾತ್ರ ಇವರದ್ದು. ಚಿತ್ರ ಹೆಸರಿಗೆ ತಕ್ಕಂತೆ ಪ್ರೀತಿಗೆ ಸಂಬಂಧಿಸಿದ್ದಾಗಿದೆ. ತಾರೆ ಎನ್ನುವ ಹೆಸರಿಡಲು ಕಾರಣ ಏನೆಂದರೆ ಇದೊಂದು ಕನಸಿಗೆ ಸಂಬಂಧಿಸಿದ ಚಿತ್ರ ಕೂಡಾ ಹೌದಂತೆ. ಚಿತ್ರದ ರೀರೆಕಾರ್ಡಿಂಗ್ ಮಾತ್ರ ಬಾಕಿ ಇದೆ. ಇದೊಂದು ಪೂರ್ತಿ ಕುಟುಂಬ ಒಟ್ಟಾಗಿ ಕೂತು ನೋಡುವ ಚಿತ್ರವಂತೆ. ಕಾಮೆಡಿ ಟಚ್ ಜತೆ ಪ್ರೇಮಕ್ಕೆ ಕೊರತೆಯೇ ಇಲ್ಲವಂತೆ. ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ.

ಇನ್ನಷ್ಟು ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿಗಂತ್, ತಾರೆ, ಅನುಷ್ಕಾ, ಪಂಚರಂಗಿ