ಮಕ್ಕಳ ಮನಸ್ಸು ಕದಿಯಲು ಬಂದ ಅಪ್ಪು ಪಪ್ಪು ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆಯಂತೆ. ಈಗಾಗಲೇ 30ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅಪ್ಪು ಪಪ್ಪು ನೋಡಲು ಜನ ಮುಗಿಬೀಳುತ್ತಿದ್ದಾರಂತೆ. ಹಾಗಂತ ಸ್ವತಃ ನಿರ್ಮಾಪಕ ಸೌಂದರ್ಯ ಜಗದೀಶ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸೌಂದರ್ಯ ಜಗದೀಶ್ ಸಂತೋಷದಲ್ಲಿದ್ದರು. ಈ ಸಂತೋಷಕ್ಕಾಗಿಯೇ ಅವರೊಂದು ಸಣ್ಣ ಸಂತೋಷ ಕೂಟ ಹಮ್ಮಿಕೊಂಡು ಪತ್ರಕರ್ತರೊಂದಿಗೆ ತಮ್ಮ ಖುಷಿ ಹಂಚಿಕೊಂಡರು. ಕಾರಣ ತಮ್ಮ ಮಗ ಮಾಸ್ಟರ್ ಸ್ನೇಹಿತ್ನನ್ನೇ ಕೇಂದ್ರೀಕರಿಸಿಕೊಂಡು ಡಿಫರೆಂಟ್ ಚಿತ್ರ ಮಾಡಿದ್ದಾರೆ. ಒರಾಂಗುಟನ್ ಎಂಬ ಚಿಂಪಾಜಿಯ ಚೇಷ್ಟೆಯೂ ಚಿತ್ರದಲ್ಲಿರುವುದರಿಂದ ಇದು ರಾಜ್ಯಾದ್ಯಂತ ಜನರ ಗಮನ ಮೊದಲೇ ಸೆಳೆದಿದ್ದು ಸುಳ್ಳಲ್ಲ. ಇದೀಗ ಬಿಡುಗಡೆಯ ನಂತರವೂ ಸೆಳೆಯುತ್ತಲೇ ಇದೆಯಂತೆ. ಸಾಕಷ್ಟು ಶಾಲಾ ಮಕ್ಕಳು, ಅಪ್ಪ ಅಮ್ಮಂದಿರು, ಕಾಲೇಜು ಮಕ್ಕಳು ಈ ಚಿತ್ರ ನೋಡಿ ನಕ್ಕು ಹಗುರಾಗಿ ಮನಸಾರೆ ಶ್ಲಾಘಿಸಿದ್ದಾರೆ.
ಮಾಸ್ಟರ್ ಸ್ನೇಹಿತ್ಗೂ ಸಿಕ್ಕಾಪಟ್ಟೆ ಖುಷಿಯಾಗಿದೆ. ಕಾರ್ಯಕ್ರಮದಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ಸ್ನೇಹಿತ್ ಮತ್ತಷ್ಟು ಜನರು ಈ ಚಿತ್ರ ನೋಡಿ ಪ್ರೋತ್ಸಾಹಿಸಬೇಕೆಂದರು.