ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎಂದಿರನ್ ಕಮಾಲ್: 2 ವಾರಗಳ ಟಿಕೆಟ್ ಸೋಲ್ಡ್ ಔಟ್ (Endiran | Rajanikanth | Aishwarya Rai | Shankar)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಈಗ ಎಲ್ಲೆಲ್ಲಿಯೂ ರಜನಿ- ಐಶ್ ತಾರಾಗಣದ ಎಂದಿರನ್ ಸುದ್ದಿ. ರಾಷ್ಟ್ರಾದ್ಯಂತ ಸಂಚಲನವನ್ನೇ ಮೂಡಿಸಿರುವ ಈ ಎಂದಿರನ್ ಈ ವಾರ ಅಂದರೆ ಅಕ್ಟೋಬರ್ 1ರಂದು ಬಿಡುಗಡೆಯಾಗುತ್ತಿರುವು ಜನಜನಿತ. ಈಗಲೇ ಜನರು ತಮ್ಮ ಆರಾಧ್ಯ ದೈವ ರಜನಿಯನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಿಸಿ ಬೆಂಗಳೂರಿಗೂ ತಟ್ಟಿದೆ.

ಹೇಳಿ ಕೇಳಿ ರಜನಿಕಾಂತ್ ಚಿತ್ರ ತೆರೆಗೆ ಬರುತ್ತಿದೆ ಎಂದರೆ ಪ್ರೇಕ್ಷಕ ಪ್ರಭುವೇನು ಸುಮ್ಮನೆ ಕೂರುತ್ತಾನಾ? ಈಗಾಗಲೇ ಬೆಂಗಳೂರಿನಲ್ಲಿ ಕಾಳ ಸಂತೆಯಲ್ಲಿ ಟಿಕೆಟ್‌ಳು ಬಿಕರಿಯಾಗುತ್ತಿವೆ. ಈಗಾಗಲೇ ಎರಡು ವಾರಗಳ ಟಿಕೆಟ್‌ಗಳು ಮುಂಗಡ ಬುಕ್ಕಿಂಗ್ ಆಗಿದ್ದು, ಜನರು ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ. ಅಯೋಧ್ಯೆಯ ತೀರ್ಪು ಬರಲಿದ್ದರೂ, ಜನರ ಚಿತ್ರ ನೋಡುವ ಆಸಕ್ತಿ ಮಾತ್ರ ಕುಗ್ಗಿಲ್ಲ.
IFM


ಪಿವಿಆರ್ ಗೋಲ್ಡ್ ಕ್ಲಾಸ್ ಟಿಕೆಟ್ ಬೆಲೆ 500 ರೂ. ಆದರೆ ಎಂದಿರನ್ ಭರಾಟೆಗೆ ಈ ಟಿಕೆಟ್ 5000 ರೂಪಾಯಿ ಕೊಟ್ಟರೂ ಸಿಗುತ್ತಿಲ್ಲವಂತೆ. ಸಾಮಾನ್ಯ 75 ರೂಪಾಯಿಯ ಟಿಕೆಟ್‌ಗಳು 200 ರೂಪಾಯಿಗೂ ಹೆಚ್ಚು ಬೆಲೆಯಲ್ಲಿ ಮಾರಾಟವಾಗುತ್ತಿದೆ!

IFM
ಈಗಾಗಲೇ ಕರ್ನಾಟಕದಲ್ಲಿ 8.5 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಇದರ ವಿತರಕರು ಇನ್ನು 1.5 ಕೋಟಿ ರೂ ಕೊಟ್ಟರೆ ಅವರಿಗೆ ಎಂದಿರನ್‌ನ ಹಿಂದಿ ಅವತರಣಿಕೆ ರೋಬೋಟ್ ಹಕ್ಕು ಕೂಡಾ ದೊರೆಯಲಿದೆ.

ಪರ ಭಾಷಾ ಚಿತ್ರಗಳ ಪಾಲಿಗೆ ಬಿಸಿ ತುಪ್ಪವಾಗಿರುವ ಕೆಎಫ್‌ಸಿಸಿ ಎಂದಿರನ್ ಪಾಲಿಗೂ ರಪ್ ಎಂಡ್ ಟಫ್ ಆಗಿಯೇ ಇದೆ ಎನ್ನಲಾಗುತ್ತಿದೆ. ಈಗಾಗಲೇ ಎಂದಿರನ್ ಚಿತ್ರವನ್ನು ಕರ್ನಾಟಕದಲ್ಲಿ 24ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲು ಮನವಿ ಬರುತ್ತಿದ್ದರೂ, ಕೆಎಫ್‌ಸಿಸಿ ಮಾತ್ರ ಇದಕ್ಕೆ ಜಪ್ಪಯ್ಯ ಎಂದಿಲ್ಲ ಎನ್ನಲಾಗುತ್ತಿದೆ. ಆದರೆ ಇವೆಲ್ಲವಕ್ಕೂ ಚಿತ್ರ ಬಿಡುಗಡೆಯ ಸಂದರ್ಭವಷ್ಟೇ ಉತ್ತರ ಸಿಗಬೇಕು.

ಎಂದಿರನ್ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಂದಿರನ್, ರಜನೀಕಾಂತ್, ಐಶ್ವರ್ಯಾ ರೈ, ಶಂಕರ್