ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಿರಿಯ ನಟ ದ್ವಾರಕೀಶ್‌ಗೆ 'ಅಭಿಮಾನಿ ಸಂಘ' (Dwarkish | Kannada Cinema | Abhimani sangha | Actor)
ಸುದ್ದಿ/ಗಾಸಿಪ್
Bookmark and Share Feedback Print
 
NRB
ದಿನಕ್ಕೂಂದು ನಟರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಂತೆಯೇ ತಮ್ಮ ಹೆಸರಿನ ಅಭಿಮಾನಿ ಸಂಘವೂ ಹುಟ್ಟಿಕೊಳ್ಳುತ್ತಿರುವುದು ಹೊಸದೇನಲ್ಲ. ನಟರ ಜನಪ್ರಿಯತೆ ಆಧರಿಸಿ ಸಂಘದ ಸಂಖ್ಯೆಯೂ ಹೆಚ್ಚಾಗುತ್ತಿರುತ್ತದೆ. ಇದೇ ರೀತಿ ಈಗ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ದ್ವಾರಕೀಶ್ ಅವರ ಹೆಸರಿನಲ್ಲಿಯೂ ಒಂದು ಅಭಿಮಾನಿ ಸಂಘ ಅಸ್ತಿತ್ವಕ್ಕೆ ಬರಲಿದೆ.

ಹಿರಿಯ ಹಾಸ್ಯ ನಟರಾದ ದ್ವಾರಕೀಶ್ ಕೇವಲ ನಟರಾಗಿ ಮಾತ್ರವಲ್ಲ, ಉತ್ತಮ ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ. ಇಂದು ಸಾಕಷ್ಟು ಹೊಸ ನಿರ್ದೇಶಕರನ್ನೂ ಹುಟ್ಟು ಹಾಕಿದ್ದಾರೆ. ಚಲನಚಿತ್ರರಂಗದಲ್ಲಿ ಇವರೊಂದು ಅಜರಾಮರ ವ್ಯಕ್ತಿ. ಸದಾ ಜನರ ಮನಸ್ಸಿನಲ್ಲಿ ನೆಲೆಸಿರುವ ಈ ಕುಳ್ಳನಿಗೆ ಇದೀಗ ಒಂದು ಅಭಿಮಾನಿ ಸಂಘ ಹುಟ್ಟಿಕೊಳ್ಳಲು ಸಜ್ಜಾಗಿದೆ.

ಹೌದು, ಕನ್ನಡ ಚಿತ್ರರಂಗದ ದಿಗ್ಗಜರಾದ ದ್ವಾರಕೀಶ್ ಹೆಸರಿನ ಗೆಳೆಯರ ಗುಂಪು ಅಕ್ಟೋಬರ್ ಎರಡರಂದು ಸಂಘವೊಂದನ್ನು ಸ್ಥಾಪಿಸಲು ಮುಂದಾಗಿದೆ. ಇದುವರೆಗೂ ನಾಯಕ ಹಾಗೂ ನಾಯಕಿಯರ ಹೆಸರಿನಲ್ಲಿ ಮಾತ್ರ ಹುಟ್ಟಿಕೊಳ್ಳುತ್ತಿದ್ದ ಅಭಿಮಾನಿ ಸಂಘ ಕೊನೆಗೂ ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕರಿಗೂ ಒಲಿದಿರುವುದು ವಿಶೇಷ.

ಸಂಘದ ರೂಪುರೇಷೆ, ಕಾರ್ಯ ವೈಖರಿ ಹಾಗೂ ವೈಶಿಷ್ಠ್ಯ ಬಿಡುಗಡೆ ದಿನವೇ ಬಹಿರಂಗವಾಗಲಿದೆಯಂತೆ. ಸಂಘದಲ್ಲಿ ಟೆಕ್ಕಿ ಮಧುಸೂಧನ್, ವಕೀಲ ವೀರಭದ್ರಪ್ಪ, ನಿರ್ಮಾಪಕ ಸಂಜೀವ್ ಕುಮಾರ್, ಬರಹಗಾರ ಸ್ನೇಹಪ್ರಿಯ ನಾಗರಾಜ್ ಸೇರಿದಂತೆ ಹಲವಾರು ಮಂದಿ ಇದ್ದಾರೆ.

ಸಂಘ ನನ್ನ ಹೆಸರಲ್ಲಿ ಆರಂಭವಾಗಿದ್ದು ಸಂತಸ. ಇದು ಚಿತ್ರರಂಗದಲ್ಲಿ ಒಂದಿಷ್ಟು ಬದಲಾವಣೆ ತರುವ ಕೆಲಸ ಮಾಡಲಿ. ನನಗಾಗಿ ಏನೂ ಮಾಡುವುದು ಬೇಡ. ಕನ್ನಡ ಹಾಗೂ ಕನ್ನಡ ಚಿತ್ರರಂಗಕ್ಕಾಗಿ ಒಂದಿಷ್ಟು ಕೆಲಸ ಮಾಡಲಿ, ಅದರಿಂದ ನನ್ನ ಹೆಸರಿಗೂ ಕೀರ್ತಿ ತಂದಂತೆ ಅಗುತ್ತದೆ ಎಂಬ ಆಶಯ ದ್ವಾರಕೀಶ್ ಅವರದ್ದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದ್ವಾರಕೀಶ್, ಕನ್ನಡ ಸಿನಿಮಾ, ಅಭಿಮಾನಿ ಸಂಘ, ಬೆಂಗಳೂರು, ನಟ