ಅಂಕಿತಾ ಅನ್ನುವ ನಟಿ ಬಿಸಿನೆಸ್ ಜತೆ ಸಿನಿಮಾ ಅವಕಾಶ ಹುಡುಕಿಕೊಂಡು ಚೆನ್ನೈ ಅತ್ತ ಪ್ರಯಾಣ ಬೆಳೆಸಿದ್ದಾರೆ.
ಕನ್ನಡದಲ್ಲಿ ಅವಕಾಶ ಕಡಿಮೆ ಅಗಿತ್ತು. ತಮಿಳಿನಲ್ಲಿ ಒಂದು ಅವಕಾಶ ಸಿಕ್ಕಿತು. ಇದೀಗ ಅದು ಫಲಕೊಟ್ಟು ಎರಡನೇ ಅವಕಾಶ ಸಿಕ್ಕಿದೆ. ಜತೆಗೆ ಬಿಸಿನೆಸ್ ಸಹ ಅಲ್ಲೇ ಚೆನ್ನಾಗಿ ಸಿಗ್ತಾ ಇದೆ. ಅದ್ಕೆ ಅಲ್ಲೇ ಸೆಟಲ್ ಆಗ್ತೀನಿ ಅಂತಿದ್ದಾರೆ. ಹಾಗ್ರಾದೆ ಕನ್ನಡ ಚಿತ್ರ ಎಂದರೆ? ನೋಡೋಣ ಒಳ್ಳೆ ಅವಕಾಶ ಸಿಕ್ಕರೆ ಮುದ್ದಾಂ ಬರ್ತಿನಿ ಅಂತಾರೆ.
ಕನ್ನಡದಲ್ಲಿ ಇವರು ಎರಡು ಚಿತ್ರ ಮಾಡಿದ್ದಾರೆ ಟ್ಯಾಕ್ಸಿ ನಂ.1 ಹಾಗೂ ಮೇಘವೇ ಮೇಘವೇ. ಇವೆರಡನ್ನು ಬಿಟ್ಟರೆ ಕಳೆದ ವಾರ ಇವರು ನಟಿಸಿದ ತಮಿಳು ಚಿತ್ರವೊಂದು ತೆರೆಕಂಡಿದೆ. ಅದರ ಜತೆಗೆ ಅದೇ ತಂಡದ ಇನ್ನೊಂದು ಚಿತ್ರಕ್ಕೂ ಇವರು ಆಯ್ಕೆಯಾಗಿದ್ದಾರೆ. ಇದರಿಂದ ತಮ್ಮ ನೆಲೆಯನ್ನು ಇಲ್ಲಿಂದ ಚೆನ್ನೈಗೆ ಶಿಫ್ಟ್ ಮಾಡಿಕೊಂಡಿದ್ದಾರೆ ಅಂಕಿತಾ.
'ಪ್ಲೇಸ್ಮೆಂಟ್ ಕನ್ಸಲ್ಟೆನ್ಸಿ' ತರಬೇತಿಯಲ್ಲಿ ಪರಿಣಿತಿ ಸಾಧಿಸಿ ಮಾಡೆಲಿಂಗ್ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ಅಂಕಿತಾ. ಹಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಎಚ್ಪಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಮಾಡೆಲಿಂಗ್ ಆಸಕ್ತಿಯಿಂದ ಕೆಲಸ ತ್ಯಜಿಸಿ ಚಿತ್ರ ಬದುಕಿಗೆ ಬಂದರು.
ದಕ್ಷಿಣ ಭಾರತದಲ್ಲೆಲ್ಲ ನನ್ನ ಬಿಸಿನೆಸ್ ಇದೆ. ಅದರ ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನೆ. ಚಿತ್ರ ಬದುಕು ಸಹ ಹಾಗೆಯೇ ಸಾಗುತ್ತಿರುತ್ತದೆ. ಕೊಂಚ ದಪ್ಪಗಾಗಿದ್ದೇನೆ. ಅದಕ್ಕೆ ಡಯಟ್ ಬಿಟ್ಟದ್ದು ಕಾರಣ. ಡಯಟ್ ಆರಂಭಿಸಿದರೆ ಮೊದಲಿನಂತೆ ಆಗ್ತೇನೆ ಅಂತ ವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಒಟ್ಟಾರೆ ಅಪ್ಪಟ ಕನ್ನಡತಿ ತಮಿಳು ಚಿತ್ರರಂಗಕ್ಕೆ ಜಿಗಿದದ್ದು ಹೆಚ್ಚು ಸುದ್ದಿಯೇ ಅಗಿಲ್ಲ.