ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೀತಿ ಇಲ್ಲದೆ ಜೋಗುಳ ಹಾಡಿದ ವಿನು ಬಳಂಜರಿಂದ 'ಗೆಜ್ಜೆಪೂಜೆ' (Vinu Balanja | Jogula | Gejjepooje | Karnataka)
ಸುದ್ದಿ/ಗಾಸಿಪ್
Bookmark and Share Feedback Print
 
ಕಿರುತೆರೆಯ ಯಶಸ್ವಿ ನಿರ್ದೇಶಕರ ಇತ್ತೀಚಿನ ಪಟ್ಟಿಯಲ್ಲಿ ಸಿಗುವ ಮೊದಲ ಹೆಸರು ವಿನು ಬಳಂಜ. ಹೌದು, ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಯಶಸ್ವಿ ಧಾರಾವಾಹಿ ಜೋಗುಳದ ನಿರ್ದೇಶಕರಾಗಿ ಹೆಸರು ಮಾಡಿರುವ ಇವರೀಗ ಗೆಜ್ಜೆಪೂಜೆಗೆ ಸಜ್ಜಾಗಿದ್ದಾರೆ.

ಈ ಟಿವಿಯಲ್ಲಿ ಪ್ರಸಾರವಾದ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ಮೂಲಕ ನಿರ್ದೇಶನಕ್ಕೆ ಕಾಲಿರಿಸಿದ ಇವರು ಕಿರುತೆರೆಯಲ್ಲಿ ಇಂದು ಅತ್ಯಂತ ಪ್ರಭಾವಿ ಹಾಗೂ ಯಶಸ್ವಿ ನಿರ್ದೇಶಕ. ನಂತರ ಮಾಡಿದ್ದು ಜೋಗುಳ. ಸದ್ಯ 500 ಕಂತು ದಾಟಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಧಾರಾವಾಹಿಯ ಯಶಸ್ಸಿನಲ್ಲಿ ಇವರ ಪಾತ್ರವೂ ಪ್ರಮುಖವಾಗಿದೆ.

ಧಾರಾವಾಹಿಯನ್ನು ತಾಂತ್ರಿಕವಾಗಿ ಉತ್ತಮವಾಗಿಸಿರುವ ಇವರು ಅಭಿನಯದ ವಿಷಯದಲ್ಲಿ ಯಾರಿಗೂ ರಾಜಿ ಅಗುವುದಿಲ್ಲ. ತಮ್ಮ ನಿರೀಕ್ಷೆಗೆ ತಕ್ಕ ಅಭಿನಯ ಬರದಿದ್ದರೆ, ಬರುವವರೆಗೂ ಯತ್ನಿಸುವ ಮನೋಭಾವ ಹೊಂದಿದ್ದಾರೆ.

ಇದೀಗ ಇವರ ಹೆಗಲಿಗೆ 'ಗೆಜ್ಜೆಪೂಜೆ'ಯೂ ಏರಿದೆ. ದೇವದಾಸಿಯರ ಬದುಕಿನ ವೃತ್ತಾಂತ ಬಿಂಬಿಸುವ ಈ ಧಾರಾವಾಹಿ ರಾಜ್ಯದ ಒಂದು ಮೂಲೆಯ ಹಳ್ಳಿಯಾದ ಚಂದ್ರಗಿರಿಯದ್ದಾಗಿದೆ. ಇಲ್ಲಿನ ಕೆಲ ಕುಟುಂಬದ ಹುಡುಗಿಯರು ಮೈನೆರೆದಾಗ ಅವರನ್ನು ದೇವರಿಗೆ ವಿವಾಹ ಮಾಡಿಕೊಡುವುದು ವಾಡಿಕೆ. ಆ ನಂತರ ಅವರು ದೇವಸ್ಥಾನದ ದೇವದಾಸಿಯರಾಗಿ ಕಾರ್ಯ ನಿರ್ವಹಿಸಬೇಕು. ನರ್ತನ ಮಾಡಿಕೊಂಡು ದೇಶ ಸೇವೆ ಮಾಡಬೇಕೆಂದು ನಿಯಮ ಇದ್ದರೂ ಅವರನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುವ ಊರ ಶ್ರೀಮಂತರು ಇದೇ ಸಂಪ್ರದಾಯ ಎನ್ನುವಂತೆ ಎಲ್ಲರಲ್ಲೂ ಬಿಂಬಿಸುತ್ತಾರೆ.

21ನೇ ಶತಮಾನದಲ್ಲೂ ಇಂತದ್ದೊಂದು ಅನಿಷ್ಠ ಪದ್ಧತಿ ಹೋಗಲಾಡಿಸುವುದು ಈ ಧಾರಾವಾಹಿಯ ಅಸಲಿ ಯೋಚನೆ. ಇದೇ ತಿಂಗಳ ನಾಲ್ಕರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರವರೆಗೆ ರಾತ್ರಿ 8ರಿಂದ 8.30ರವರೆಗೆ ಪ್ರಸಾರವಾಗಲಿದೆ. ಇದನ್ನು ಸವಾಲಾಗಿ ಸ್ವೀಕರಿಸಿರುವ ಬಳಂಜ ಮತ್ತೊಂದು ಯಶಸ್ಸಿನ ಓಟಕ್ಕೆ ಸಜ್ಜಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನಿಮಾ, ಕರ್ನಾಟಕ, ವಿನು ಬಳಂಜ, ಜೋಗುಳ, ಗೆಜ್ಜೆಪೂಜೆ