ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇಬ್ಬರು ನಾಯಕಿಯರ ಪ್ರಜ್ವಲ್ 'ಕೋಟೆ' ಹುಬ್ಬಳ್ಳಿಯಲ್ಲಿ (Kote | Prajwal Devraj | Dimple Chopda | Gayatri)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕೋಟೆ ಚಿತ್ರದ ಶೂಟಿಂಗ್ ಹುಬ್ಬಳ್ಳಿಯಲ್ಲಿ ಜೋರಾಗಿ ನಡೆಯುತ್ತಿದೆ. ಲೈಟ್ ಬೆಳಕಲ್ಲಿ ಕ್ಯಾಮರಾ ಕರಾಮತ್ತು ಇಲ್ಲಿ ಸಾಗಿದ್ದು, ಕ್ಯಾಂಡಲ್ ಬೆಳಕಲ್ಲಿ ಬೆಳಗಿ ಕಿತ್ತೂರು ಚೆನ್ನಮ್ಮ ವೃತ್ತ, ಈದ್ಗಾ ಮೈದಾನ ಎಲ್ಲಾ ರಂಗು ರಂಗಾಗಿ ಕಾಣಿಸಿದವು.

ಇದೆಲ್ಲಾ ಹಾಡಿನ ಚಿತ್ರೀಕರಣಕ್ಕಾಗಿ ಮಾಡಿದ ಸಿದ್ಧತೆಯಾಗಿತ್ತು. ಪ್ರಜ್ವಲ್ ಚಿತ್ರದ ನಾಯಕನಾಗಿದ್ದು ಡಿಂಪಲ್ ಚೋಪ್ಡಾ ಹಾಗೂ ಗಾಯತ್ರಿ ನಾಯಕಿಯರು. ಇವರೂ ಈ ಹಾಡಿನಲ್ಲಿ ಪಾಲ್ಗೊಂಡಿದ್ದರು. ನಿಜಕ್ಕೂ ಹಾಡಿನ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರದಲ್ಲಿ ಇದರ ಬಳಕೆ ವಿಭಿನ್ನ ರೀತಿಯಲ್ಲಿ ಆಗಲಿದೆ ಎನ್ನಲಾಗುತ್ತಿದೆ.

ಪ್ರಜ್ವಲ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ತಂದೆಯ ಲುಕ್ ಇವರಿಗೂ ಈಗ ಬಂದಂತಿದೆ. ಕಡಕ್ ಪೊಲೀಸ್ ಅಧಿಕಾರಿ ಧಿರಿಸಿನಲ್ಲಿ ಇವರು ತಂದೆಯಂತೆ ಕಾಣುತ್ತಿದ್ದುದು ವಿಶೇಷವಾಗಿತ್ತು.

ಡಿಂಪಲ್ ಈಗಾಗಲೇ ಸಿಹಿಮುತ್ತು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಇದು ಎರಡನೇ ಚಿತ್ರ. ಪ್ರಜ್ವಲ್ ಸೋದರತ್ತೆ ಮಗಳಾಗಿ ಗಾಯತ್ರಿ ನಟಿಸಿದ್ದಾರೆ. ಪ್ರದೀಪ್ ಕೋರಿಯೋಗ್ರಾಫರ್. ಈ ಕಾರ್ಯದಲ್ಲಿ ಇವರು ನೀಯತ್ತಾಗಿ ಕಾರ್ಯ ನಿರ್ವಹಿಸಿ ಚಿತ್ರಕ್ಕೆ ಇನ್ನಷ್ಟು ಶ್ರೀಮಂತಿಕೆ ತಂದು ಕೊಟ್ಟಿದ್ದಾರೆ. ಶ್ರೀನಿವಾಸರಾಜು ನಿರ್ದೇಶನ ಚಿತ್ರಕ್ಕಿದೆ.

ರಘು ದೀಕ್ಷಿತ್ ಸಂಗೀತ ಅತ್ಯಂತ ಮಧುರವಾಗಿದ್ದು, ಉತ್ತಮ ಚಿತ್ರಕ್ಕೆ ಇದು ಸಾಕಷ್ಟು ಸಾಥ್ ನೀಡುವಲ್ಲಿ ಸಂಶಯವಿಲ್ಲ. ಈ ಚಿತ್ರ ಪಕ್ಕಾ ಆಕ್ಷನ್ ಮಾದರಿಯದ್ದು ಆಗಿದೆ. ಲವ್‌ಗೂ ಈ ಚಿತ್ರದಲ್ಲಿ ಸಾಕಷ್ಟು ಪ್ರಾಧಾನ್ಯ ಲಭಿಸಿದ್ದು ಚಿತ್ರದ ಯಶಸ್ಸಿನಲ್ಲಿ ಆಕ್ಷನ್ ಹಾಗೂ ಲವ್ ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೋಟೆ, ಪ್ರಜ್ವಲ್ ದೇವರಾಜ್, ಡಿಂಪಲ್ ಚೋಪ್ಡಾ, ಗಾಯತ್ರಿ