ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎಂದೆಂದೂ ನಿನ್ನನು ಮರೆತು.., ಹಾಡೇ ಈಗ ಚಿತ್ರಶೀರ್ಷಿಕೆ (Endendu Ninnanu Marethu | Naga Kiran | Eradu Kanasu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಹಾಡುಗಳ ಸಾಲೀಗ ಚಿತ್ರವಾಗುವುದು ಹೊಸತೇನಲ್ಲ. ಹೃದಯದಲಿ ಇದೇನಿದು, ಏನೋ ಒಂಥರಾ, ಒಲವೇ ವಿಸ್ಮಯ, ಗಾನಾ ಬಜಾನಾ... ಹೀಗೆ ಇಂಥ ಚಿತ್ರಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಸಾಗಿದೆ. ಈಗ ಈ ಸಾಲಿಗೆ ಸೇರ್ಪಡೆಯಾಗಿದೆ ಎಂದೆಂದೂ ನಿನ್ನನು ಮರೆತು!

ಹೌದು. ಎಂದೆಂದೂ ನಿನ್ನನು ಮರೆತು... ಎಂಬ ಚಿತ್ರವೊಂದು ಸೆಟ್ಟೇರಲಿದೆ. ಚಾಕೊಲೆಟ್ ಹೀರೊ ನಾಗಕಿರಣ್ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಡಾ. ರಾಜ್ ಅಭಿನಯದ ಎರಡು ಕನಸು ಚಿತ್ರದ ಈ ಹಾಡಿನ ಸಾಲನ್ನು ಬಳಸಿಕೊಳ್ಳಲಾಗಿದೆ. ಪಿ.ಬಿ. ಶ್ರೀನಿವಾಸ್ ಹಾಗೂ ವಾಣಿ ಜಯರಾಂ ಕಂಠದಲ್ಲಿ ಮೂಡಿಬಂದ ಈ ಹಾಡಿನ ಜನಪ್ರಿಯತೆಯನ್ನೇ ಬಳಸಿಕೊಂಡು ಚಿತ್ರ ಸಿದ್ಧಪಡಿಸಲಾಗುತ್ತಿದೆ. ಚಿತ್ರವನ್ನು ಶ್ರೀಹರ್ಷ ನಿರ್ದೇಶಿಸುತ್ತಿದ್ದಾರೆ. ಇವರ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ಇವರು ಈ ಹಿಂದೆ ಕೈವಾರ ತಾತಯ್ಯ, ಗ್ಯಾಂಗ್ ಲೀಟರ್, ದೇವನಹಳ್ಳಿ ಮುಂತಾದ ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಚಿತ್ರರಂಗದಲ್ಲಿ ಗೀತ ರಚನೆಕಾರರಾಗಿ ಗುರುತಿಸಿಕೊಂಡಿದ್ದು ಹೆಚ್ಚು. ಹೀಗಾಗಿ ಈ ಚಿತ್ರಕ್ಕೆ ನಿರ್ದೇಶನದ ಜತೆ ಸಾಹಿತ್ಯವೂ ಅವರದ್ದೇ. ಈ ಎರಡು ಜವಾಬ್ದಾರಿಯ ಜೊತೆ ಇವರು ಕಥೆ, ಚಿತ್ರಕಥೆ, ಸಂಭಾಷಣೆಯ ಹೊಣೆಯನ್ನೂ ಹೊತ್ತಿದ್ದಾರೆ.

ಚಿತ್ರ ಜಯಣ್ಣ ಕಂಬೈನ್ಸ್ ಅಡಿ ಮೂಡಿ ಬರುತ್ತಿದ್ದು, ಸುರೇಶ್ ನಿರ್ಮಾಪಕರು. ಸಂಗೀತ ಪ್ರಧಾನ ಚಿತ್ರವಾಗಿ ಇದು ಮೂಡಿ ಬರುತ್ತಿದೆ. ಚಿತ್ರದ ನಾಯಕನನ್ನು ಗಾಯಕನಾಗಿ ಇಲ್ಲಿ ಪರಿಚಯಿಸಲಾಗುತ್ತಿದೆಯಂತೆ. ಒಟ್ಟಾರೆ ಚಿತ್ರವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿ ನೀಡುವತ್ತ ಶ್ರೀಹರ್ಷ ಗಮನ ಹರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಂದೆಂದೂ ನಿನ್ನನು ಮರೆತು, ನಾಗಕಿರಣ್, ಎರಡು ಕನಸು