ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಿರೆಕಾರ್ಡಿಂಗ್‌ಗೆ ಲಂಡನ್‌ಗೆ ಹಾರಿದ ಮೈಲಾರಿ (Mylari | R.Chandru | Sada | Shivaraj Kumar)
ಸುದ್ದಿ/ಗಾಸಿಪ್
Bookmark and Share Feedback Print
 
PR
ಶಿವಣ್ಣ, ಸದಾ ಅಭಿನಯದ ಮೈಲಾರಿ ಸದ್ಯ ಲಂಡನ್‌ಗೆ ತೆರಳಿದ್ದಾನೆ. ಹಾಗಂತ ಇದೊಂದು ಹಾಡಿನ ಚಿತ್ರೀಕರಣಕ್ಕಿರಬಹುದು ಅಂತ ನೀವು ಲೆಕ್ಕಾಚಾರ ಹಾಕಿದರೆ ಅದು ಶುದ್ಧ ತಪ್ಪು. ಯಾಕೆಂದರೆ ಮೈಲಾರಿ ಶೂಟಿಂಗ್ ವಿಚಾರಕ್ಕಲ್ಲ ಲಂಡನ್ ವಿಮಾನ ಹತ್ತುತ್ತಿರುವುದು. ರಿರೆಕಾರ್ಡಿಂಗ್‌ಗೆ!

ಆರ್. ಚಂದ್ರು ಅವರ ಮಹತ್ವಾಕಾಂಕ್ಷೆಯ ಚಿತ್ರ ಇದಾಗಿದ್ದು, ಸಾಕಷ್ಟು ಕಾಳಜಿ ವಹಿಸಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಒಂದಿಷ್ಟು ಹೈಟೆಕ್ ಟಚ್ ನೀಡಲು ಲಂಡನ್‌ಗೆ ತೆರಳಲಾಗಿದೆಯಂತೆ. ಅಲ್ಲಿ ಇದೀಗ ನಡೆಯುತ್ತಿರುವುದು ಚಿತ್ರಕ್ಕೆ ಹೈಟೆಕ್ ಟಚ್. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರದ ರೀರೆಕಾರ್ಡಿಂಗ್ ಕಾರ್ಯ ಮಾಡಲಾಗುತ್ತಿದೆಯಂತೆ. ಚಿತ್ರದ ಅತ್ಯುತ್ತಮ ಗುಣಮಟ್ಟಕ್ಕೆ ಇದು ಮುಖ್ಯ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಮೂಲಕ ಲಂಡನ್‌ನಲ್ಲಿ ರಿರೆಕಾರ್ಡಿಂಗ್ ಭಾಗ್ಯ ಪಡೆಯುವ ಮೊದಲ ಕನ್ನಡ ಚಿತ್ರ ಇದಾಗಲಿದೆ.

ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು, ಇವರ ಹಿನ್ನೆಲೆ ಹಾಡು ಇನ್ನಷ್ಟು ಗುಣಮಟ್ಟ ಹಾಗೂ ಉತ್ತಮ ರೀತಿಯಲ್ಲಿ ಕೇಳಿ ಬರಲಿ ಅಂತ ಈ ಯತ್ನ ಮಾಡಲಾಗುತ್ತಿದೆಯಂತೆ. ಏಕೆಂದರೆ ಚಿತ್ರಕ್ಕೆ ಹಿನ್ನೆಲೆ ಸಂಗೀತವೂ ಅತಿ ಪ್ರಮುಖ. ಒಟ್ಟಾರೆ ವಿದೇಶಿ ತಂತ್ರಜ್ಞಾನ ಬಳಸುವ ಮೂಲಕ ಕನ್ನಡ ಚಿತ್ರದ ಹಾಡು ಹಾಗೂ ಹಿನ್ನೆಲೆ ಸಂಗೀತಕ್ಕೆ ಹೈಟೆಕ್ ಟಚ್ ನೀಡಲಾಗುತ್ತಿದೆ.

ಎಲ್ಲಾ ಆಗಿ ನಮ್ಮ ಶಿವಣ್ಣನ ಚಿತ್ರ ಒಂದು ವಿಭಿನ್ನ ರೀತಿಯಲ್ಲಿ ಬಿಡುಗಡೆ ಆಗುವುದು ಸುಳ್ಳಲ್ಲ. ಎಲ್ಲರೂ ಕಾತರ, ನಿರೀಕ್ಷೆಯಿಂದ ಕಾಯುತ್ತಿರುವ ಮೈಲಾರಿ ಆಧುನಿಕ ತಂತ್ರಜ್ಞಾನದ ಸಂಪರ್ಕ ಪಡೆದು ಇನ್ಯಾವ ಸಾಧನೆ ಮಾಡುವುದೋ ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೈಲಾರಿ, ಆರ್ಚಂದ್ರು, ಸದಾ, ಶಿವರಾಜ್ ಕುಮಾರ್