ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರು ಒಂದಾಗಿ ಸೇರಿ ನಿರ್ಮಿಸಿರುವ ಚಿತ್ರ ಕಾರ್ತಿಕ್. ಈ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ಡಬ್ಬಿಂಗ್ ಕಾರ್ಯವನ್ನೂ ಪೂರೈಸಿಕೊಂಡಿದೆ.
ಹೌದು. ಯುವ ನಾಯಕ ಕಾರ್ತಿಕ್ ಶೆಟ್ಟಿ ಹಾಗೂ ಅರ್ಚನಾ ಗುಪ್ತಾ ನಾಯಕ ನಾಯಕಿಯಾಗಿ ನಟಿಸಿರುವ ಈ ಚಿತ್ರ ಸದ್ಯ ಸಾಕಷ್ಟು ಸುದ್ದಿ ಮಾಡುತ್ತಿದೆ. ತೆರೆ ಕಾಣುವ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವುದು ಜನರಲ್ಲಿ ಕಾತರ ಹಾಗೂ ಕುತೂಹಲ ಮೂಡಿಸಿದೆ.
ಇದೊಂಥರಾ ಚಿತ್ರರಂಗದ ಗಿಮಿಕ್ ಅಂದರೂ ಅಡ್ಡಿ ಇಲ್ಲ. ಚಿತ್ರ ಹೇಗಿರುತ್ತೋ ಬಿಡುತ್ತೋ ಗೊತ್ತಿಲ್ಲ. ಮೊದಲೇ ಒಂದಿಷ್ಟು ಬಿಲ್ಡಪ್ ಕೊಟ್ಟು ಬಿಡುತ್ತಾರೆ. ಈ ಚಿತ್ರದ ವಿಷಯದಲ್ಲೂ ಹಾಗೇ ಅಗದಿದ್ದರೆ ಸಾಕು. ಒಂದು ಉತ್ತಮ ಚಿತ್ರದ ಅದರಲ್ಲೂ ಪ್ರೇಮಕಥೆಯನ್ನು ಒಳಗೊಂಡ ಚಿತ್ರದ ನಿರೀಕ್ಷೆಯಲಿರುವ ಜನರಿಗೆ ಇದು ಮೋಸ ಮಾಡಲಿಕ್ಕಿಲ್ಲ ಎಂಬ ಅಭಿಲಾಷೆ ಎಲ್ಲರದ್ದು.
ಸತೀಶ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸುಧಾ ಬೆಳವಾಡಿ, ಅವಿನಾಶ್, ಕುರಿ ಸುನೀಲ್ ಮುಂತಾದವರು ಇದ್ದಾರೆ. ಚಿತ್ರದ ಡಬ್ಬಿಂಗ್ ಮುಗಿದಿದ್ದು, ನವೆಂಬರ್ ಕೊನೆಯ ವಾರದಲ್ಲಿ ತೆರೆ ಕಾಣಲಿದೆಯಂತೆ. ಚಿತ್ರದ ವಿಶೇಷ ಅಂದರೆ ನಾಯಕ ಕಾರ್ತಿಕ್ ಶೆಟ್ಟಿ ಚಿತ್ರದಲ್ಲಿ ಬರುವ ಎಲ್ಲಾ ಸನ್ನಿವೇಶದಲ್ಲೂ ನಟಿಸಿದ್ದಾರೆ. ಎಲ್ಲಿಯೂ ಡ್ಯೂಪ್ ಬಳಸಿಲ್ಲವಂತೆ.