ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್‌ರ ಜೋಗಯ್ಯದೊಳಗೆ ಅಪಸ್ವರ (Prem | Rakshitha | Jogayya | Shivarajkumar)
ಸುದ್ದಿ/ಗಾಸಿಪ್
Bookmark and Share Feedback Print
 
PR
ನಿರ್ದೇಶಕ ಪ್ರೇಮ್ ಅವರ ಜೋಗಿ ಚಿತ್ರದಷ್ಟು ಸಲೀಸಾಗಿ ಜೋಗಯ್ಯ ಬರುವ ರೀತಿ ಕಾಣುತ್ತಿಲ್ಲ. ಚಿತ್ರಕ್ಕೆ ಒಂದೊಂದೇ ವಿಘ್ನ ಎದುರಾಗುತ್ತಿದೆ ಇದೆ. ಅರಮನೆ ಮೈದಾನದಲ್ಲಿ ತೆಲುಗು, ತಮಿಳು ನಟರನ್ನೆಲ್ಲಾ ಕರೆಸಿ ಅದ್ದೂರಿ ಮುಹೂರ್ತದ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಅದಾದ ನಂತರ ನಟಿಯರ ಆಯ್ಕೆ ನಡೆದು ಇದೀಗ ಚಿತ್ರೀಕರಣ ಆರಂಭವಾಗಿದೆ. ಆದರೆ, ಛಿತ್ರೀಕರಣ ಸಂದರ್ಭ ಮಾತ್ರ ಅಪಸ್ವರ ಕೇಳಿ ಬರುತ್ತಿದೆ.

ಇದು ಪ್ರೇಮ್ ರಕ್ಷಿತಾ ಹೋಂ ಬ್ಯಾನರ್ ಚಿತ್ರ. ಚಿತ್ರ ನಿರ್ಮಾಣದ ಹೊಣೆಯನ್ನು ದಶಾವರ ಚಂದ್ರು ವಹಿಸಿಕೊಂಡಿರುವುದು ಗೊತ್ತಿರುವ ವಿಚಾರ. ಆದರೆ ಇವರು ಕೆಲಸ ಮಾಡಿದ ತಂತ್ರಜ್ಞರಿಗೆ ಸೂಕ್ತ ವೇತನ ಕೊಡದೇ ಮೂಗಿನ ತುದಿಗೆ ತುಪ್ಪ ಸವರುತ್ತಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ. ಕೆಲಸವನ್ನು ಚೆನ್ನಾಗಿಯೇ ತೆಗೆಸಿಕೊಳ್ಳುತ್ತಿರುವ ಚಂದ್ರು ಹಣ ಮಾತ್ರ ನೀಡುವುದೇ ಇಲ್ಲ. ತೀರಾ ಗಲಾಟೆ ಮಾಡಿದರೆ ಕಿತ್ತು ಹಾಕುತ್ತೇನೆ ಎನ್ನುತ್ತಾರೆ. ಒತ್ತಾಯಿಸಿದಾಗ ಒಂದಿಷ್ಟು ಹಣ ಕೊಟ್ಟು ಹೊರಡಿ ಎಂದು ಬಿಡುತ್ತಾರೆ. ಸೂಕ್ತ ವೇತನ ನಮಗೆ ಸಿಗುತ್ತಿಲ್ಲ ಎಂದು ಚಿತ್ರದ ತಂತ್ರಜ್ಞರು ಅಲವತ್ತುಕೊಂಡಿದ್ದಾರೆ.

ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ 20 ದಿನ ನಡೆದಿದೆ. ಅಲ್ಲಿ ಶಿವರಾಜ್ ಕುಮಾರ್, ಪೂಜಾಗಾಂಧಿ ಪಾಲ್ಗೊಳ್ಳುವ ದೃಶ್ಯಗಳನ್ನು ಶೂಟ್ ಮಾಡಲಾಗಿದೆ. ಇಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ಈಗ ನೊಂದು ಮಾತನಾಡುತ್ತಿದ್ದಾರೆ.

ರಕ್ಷಿತಾ, ಪ್ರೇಮ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ದೊಡ್ಡ ಮೊತ್ತದ್ದು ಎಂದು ಹೇಳಲಾಗುತ್ತಿದೆ. ಇಷ್ಟು ಹಣ ಖರ್ಚುಮಾಡುತ್ತಿರುವ ನಿರ್ಮಾಪಕರು ಕೆಳ ಹಂತದ ಕಾರ್ಮಿಕರಿಗೆ ತಂತ್ರಜ್ಞರಿಗೆ ಏಕೆ ವಂಚಿಸುತ್ತಿದ್ದಾರೆ ಎನ್ನುವುದು ನೂರು ಡಾಲರ್ ಪ್ರಶ್ನೆಯಾಗಿದೆ. ಪ್ರೇಮ್ ಚಿತ್ರ ತಂಡದಲ್ಲಿ ಇದುವರೆಗೂ ಕಾಡದ ಹೊಸದೊಂದು ಸಮಸ್ಯೆ ಇದೀಗ ಕಾಡಿದೆ. ಇದಕ್ಕೆಲ್ಲಾ ಪರಿಹಾರ ನೀಡುವವರು ಯಾರು ಎಂಬುದೇ ಈಗಿರುವ ಯಕ್ಷ ಪ್ರಶ್ನೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮ್, ರಕ್ಷಿತಾ, ಜೋಗಯ್ಯ, ಜೋಗಿ, ಶಿವರಾಜ್ ಕುಮಾರ್