ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತಮಿಳಿನ 'ಕಲಾಮಣಿ'ಯೀಗ ಕನ್ನಡದ 'ಕಿರಾತಕ' (Kalamani | Kirathaka | Oviya | Yash)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಬೇರೆ ಭಾಷೆಯ ಯಾವುದೇ ಹಿಟ್ ಚಿತ್ರ ಇರಲಿ ಅದು ಕನ್ನಡಕ್ಕೆ ರಿಮೇಕ್ ಆಗುವುದು ಸಾಮಾನ್ಯ. ಇಲ್ಲಿನ ಮೂಲ ಚಿತ್ರಗಳಿಗೆ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಆಸಕ್ತಿ ತೋರುತ್ತಿಲ್ಲ. ಎಷ್ಟೇ ಕಡೆ ಹಿರಿಯ ನಿರ್ಮಾಪಕರು, ನಿರ್ದೇಶಕರು ಸ್ವಮೇಕ್ ಚಿತ್ರದ ಬಗ್ಗೆ ಮಾತನಾಡಿಕೊಂಡರೂ, ಕೊನೆಗೆ ಕನ್ನಡದಲ್ಲಿ ಆಗುತ್ತಿರುವುದು ಹೆಚ್ಚಾಗಿ ರಿಮೇಕ್ ಚಿತ್ರಗಳೇ. ಆ ವಿಚಾರ ಹೋಗಲಿ ಬಿಡಿ, ಈಗ ವಿಷಯಕ್ಕೆ ಬರೋಣ.

ಈಗ ತಮಿಳಿನ ಜನಪ್ರಿಯ ಚಿತ್ರ ಕಲಾಮಣಿ ಕನ್ನಡಕ್ಕೆ ರಿಮೇಕ್ ಅಗುತ್ತಿದೆ. ಚಿತ್ರಕ್ಕೆ ಸದ್ಯ ಕಿರಾತಕ ಎನ್ನುವ ತಾತ್ಕಾಲಿಕ ಹೆಸರು ಇಡಲಾಗಿದೆ. ನಾಯಕರಾಗಿ ಯಶ್ ಆಯ್ಕೆಯಾಗಿದ್ದಾರೆ. ನಾಯಕಿಯಾಗಿ ಮೂಲ ಚಿತ್ರದ ನಾಯಕಿ ಓವಿಯಾ ಬರಲಿದ್ದಾರೆ. ನಿಜಕ್ಕೂ ಇದೊಂದು ರಿಮೇಕ್ ಚಿತ್ರವಾದರೂ, ಇಲ್ಲಿನ ಸ್ಥಳೀಯತೆಗೆ ಅಗತ್ಯ ಇರುವ ಬದಲಾವಣೆ ಮಾಡಿಕೊಂಡು ನಿರ್ಮಿಸಲಾಗುತ್ತಿದೆ ಎನ್ನುವ ಮಾತುಗಳು ಎಂದಿನಂತೆ ಕೇಳಿ ಬರುತ್ತಿದೆ.

ಈ ಚಿತ್ರದಲ್ಲಿ ನಾಯಕಿಯ ಹೆಸರು ಬದಲಿಸಲಾಗಿದೆ. ಓವಿಯಾ ಬದಲು ಚಿತ್ರಲೇಖಾ ಆಗಲಿದ್ದಾರೆ. ಇನ್ನು ನಾಯಕ ಯಶ್ ಪಾಲಿಗೆ ಇದು ಮಹತ್ವದ ಚಿತ್ರ. ಶೀಘ್ರವೇ ತೆರೆಕಾಣುವ ರಾಜಧಾನಿ ಹಾಗೂ ಮೊದಲಾ ಸಲ ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿ ಯಶ್ ಈಗ ಗೆಲುವಿಗಾಗಿ ಕಾತರಿಸಿದ್ದಾರೆ.

ಕಿರಾತಕನನ್ನು ಶರವಣಮೂರ್ತಿ ನಿರ್ಮಿಸುತ್ತಿದ್ದಾರೆ. ಪ್ರದೀಪ್ ರಾಜ್ ನಿರ್ದೇಶಕ. ಇದು ಇವರಿಬ್ಬರ ಪಾಲಿಗೆ ಚೊಚ್ಚಲ ಚಿತ್ರ. ಗ್ರಾಮೀಣ ಸೊಗಡಿನ ಚಿತ್ರ ಇದಾಗಿದ್ದು, ಮತ್ತೊಮ್ಮೆ ಜನುಮದ ಜೋಡಿ ಚಿತ್ರವನ್ನು ನೆನಪಿಸಲಿದೆ ಎನ್ನುತ್ತಾರೆ ನಿರ್ದೇಶಕರು. ತಾರಾ ಹಾಗೂ ಟಿ.ಎಸ್. ನಾಗಾಭರಣ ಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸುತ್ತಿದ್ದಾರಂತೆ. ವಿ. ಮನೋಹರ್ ಸಂಗೀತ, ಆರ್. ಸೆಲ್ವಂ ಛಾಯಾಗ್ರಹಣ ಇದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಲಾಮಣಿ, ಕಿರಾತಕ, ಓವಿಯಾ, ಯಶ್