ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೋಟೆಯೊಳಗೆ ಮಸ್ತಾಗಿ ಕುಣಿದ ಐಟಂ ಗರ್ಲ್ ರಚನಾ ಮೌರ್ಯ (Kote | Rachana Mourya | Item Girl | Sexy | Gubbi)
ಸುದ್ದಿ/ಗಾಸಿಪ್
Bookmark and Share Feedback Print
 
WD
ಇತ್ತೀಚೆಗೆ ಬಿಡುಗಡೆ ಆದ ಗುಬ್ಬಿ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತು. ಈ ಚಿತ್ರದಲ್ಲಿ ರಚನಾ ಮೌರ್ಯ ಅವರ ಐಟಮ್ ಸಾಂಗ್ ಸಹ ನೀವು ನೋಡಿ ಆನಂದಿಸಿರುತ್ತೀರಿ. ಇದೀಗ ಅದೇ ರಚನಾ ಮೌರ್ಯ ಮತ್ತೆ ಕನ್ನಡದಲ್ಲಿ ಇನ್ನೊಂದು ಐಟಂ ಹಾಡಿಗೆ ಹೆಜ್ಜೆ ಹಾಕಲು ಬಂದಿದ್ದಾರೆ.

ಹೌದು, ಭರದಿಂದ ಹುಬ್ಬಳ್ಳಿಯಲ್ಲಿ ಶೂಟಿಂಗ್ ಕಾರ್ಯ ನಡೆಸುತ್ತಿರುವ ಕೋಟೆ ಚಿತ್ರ ತಂಡ ನೀಡಿರುವ ವಿವರ ಇದು. ಈ ಚಿತ್ರದಲ್ಲಿ ಒಂದು ಐಟಂ ಸಾಗ್ ಇದ್ದು, ಅದರಲ್ಲಿ ರಚನಾ ಮೌರ್ಯ ನಟಿಸುತ್ತಿದ್ದಾರಂತೆ.

ಮೊನ್ನೆ ಮೊನ್ನೆ ಗುಬ್ಬಿ ಚಿತ್ರದಲ್ಲಿ 'ನೀರ ಮೇಲೆ ಅಲೆಯ ಉಂಗುರ...' ಹಳೆಯ ಹಾಡಿನ ರಿಮಿಕ್ಸ್‌ಗೆ ಯರ್ರಾಬಿರ್ರಿ ಹೆಜ್ಜೆ ಹಾಕಿದ್ದ ರಚನಾ ಮೌರ್ಯರನ್ನು ಮರೆಯಲಾಗದೇ ನಮ್ಮ ಪಡ್ಡೆ ಹುಡುಗರು ರಾತ್ರಿ ನಿದ್ದೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅವರು ಇನ್ನೊಂದು ಚಿತ್ರದಲ್ಲಿ ಬಂದು ಬಿಟ್ಟರೆ ಇವರ ಕಥೆ ಏನಾಗಬೇಡ ಹೇಳಿ?

ಇವರು ಈಗಾಗಲೇ ಕನ್ನಡದ ಹಲವಾರು ಚಿತ್ರದಲ್ಲಿ ನೃತ್ಯ ಮಾಡಿ ಹೋಗಿದ್ದಾರೆ. ಇನ್ನೂ ಸಾಕಷ್ಟು ಚಿತ್ರಕ್ಕೆ ಒಪ್ಪಿಗೆ ಕೂಡ ಕೊಟ್ಟಿದ್ದಾರೆ. ಐಟಂ ಸಾಂಗ್ ಅನ್ನುವ ಕಾನ್ಸೆಪ್ಟ್ ಬಂದ ನಂತರ ಸಾಕಷ್ಟು ನಟಿಯರು ಬಂದು ಹೋದರು. ಸದ್ಯಕ್ಕೀಗ ಕನ್ನಡದಲ್ಲಿ ಬೇಡಿಕೆಯಿರುವ ಐಟಂ ಗರ್ಲ್ ಈ ರಚನಾ ಮೌರ್ಯ ಮಾತ್ರ.

ಇವರು ಕೋಟೆ ಚಿತ್ರದ 'ನಾನು ನೀನೇನಾ ಇಲ್ಲಿ...' ಹಾಡಿಗೆ ಹೆಜ್ಜೆ ಹಾಕಿದರು. ಸವದತ್ತಿ ಬಳಿಯ ತಲ್ಲೂರು ವಾಡೆಯಲ್ಲಿ ಚಿತ್ರದ ಚಿತ್ರೀಕರಣ ನಡೆಯಿತು. ಚಿತ್ರದಲ್ಲಿ ಇದನ್ನು ಜನ ಎಷ್ಟು ಒಪ್ಪಿಕೊಳ್ಳುತ್ತಾರೆ ಅನ್ನುವುದನ್ನು ಕಾದು ನೋಡಬೇಕಿದೆ.

ರಚನಾ ಮೌರ್ಯರ ಇನ್ನಷ್ಟು ಫೋಟೋಗಳಿಗೆ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೋಟೆ, ರಚನಾ ಮೌರ್ಯ, ಐಟಂ ಗರ್ಲ್, ಸೆಕ್ಸೀ, ಗುಬ್ಬಿ