ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೀರೋ ಆಯ್ತು, ಇನ್ನು ವಿಲನ್ ಆಗಲಿದ್ದಾರೆ ನೆನಪಿರಲಿ ಪ್ರೇಮ್ (Nenapirali | Prem | Jothegara | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಾಯಕ ನಟರಾಗಿ ಅಷ್ಟಾಗಿ ಕೀರ್ತಿ ಸಂಪಾದಿಸಲಾಗದ ನಟ ನೆನಪಿರಲಿ ಪ್ರೇಮ್ ಇದೀಗ ವಿಲನ್ ಅಗಲು ಹೊರಟಿದ್ದಾರಂತೆ. ಇದೇನು ಹೀಗಾಯಿತು ಅಂದುಕೊಂಡಿರಾ? ಹೌದು ನಾಯಕರಾಗಿ ಸಾಕಷ್ಟು ನಟಿಸಿ ಆಗಿದೆ. ವಿಲನ್ ಆಗಿ ಒಂದು ಕೈ ನೋಡೋಣ ಅಂತ ಅಂದುಕೊಂಡಿದ್ದಾರೆ ಪ್ರೇಮ್.

ಅಲ್ಲದೇ ಇತ್ತೀಚೆಗೆ ಅಷ್ಟಾಗಿ ನಾಯಕನ ಪಾತ್ರ ಸಿಗುತ್ತಿಲ್ಲ. ಸಿಕ್ಕ ಚಿತ್ರವೂ ಗೆಲ್ಲುತ್ತಿಲ್ಲ. ಹೀಗಿರುವಾಗ ಒಂದು ಬದಲಾವಣೆ ಏಕೆ ಬೇಡ ಅಂದುಕೊಂಡಿದ್ದಾರೆ. ಸ್ವಂತ ನಿರ್ಮಾಣ ಸಂಸ್ಥೆ ಕಟ್ಟುವ ಕನಸನ್ನು ಸಹ ಹೊತ್ತಿರುವ ಇವರು, ಎರಡು ದೋಣಿಯ ಮೇಲೆ ಹೇಗೆ ಚಲಿಸುವರೋ ಗೊತ್ತಿಲ್ಲ. ಆದರೆ ಇದೇಕೆ ವಿಲನ್ ಆಗುತ್ತಿದ್ದೀರಿ ಎಂದು ಕೇಳಿದಾಗ ಅವರು ನೀಡಿದ ಉತ್ತರ ಮಾರ್ಮಿಕವಾಗಿತ್ತು. 'ಕಲಾವಿದ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಬೇಕು. ಅದು ಅವನ ಕರ್ತವ್ಯ. ನಿಜವಾದ ಕಲಾವಿದನ ಸಾಮರ್ಥ್ಯ ಇರುವುದು ಪಾತ್ರಕ್ಕೆ ಜೀವ ತುಂಬುವುದು. ಹೀಗಿರುವಾಗ ಪಾತ್ರ ನಾಯಕನಾದರೇನು? ಖಳನಾಯಕನಾದರೇನು?' ಎನ್ನುತ್ತಾರೆ.

ಕಲಾವಿದ ಎಲ್ಲಾ ಪಾತ್ರಗಳನ್ನೂ ಸಮರ್ಥವಾಗಿ ನಿಭಾಯಿಸಿದರೆ ಮಾತ್ರ ಪ್ರೇಕ್ಷಕ ಒಪ್ಪಿಕೊಳ್ಳುತ್ತಾನೆ. ಅವನೇ ಪರಿಪೂರ್ಣ ನಟ ಎನಿಸಿಕೊಳ್ಳುತ್ತಾನೆ. ನನಗೆ ಆ ರೀತಿಯ ನಟನಾಗುವ ಅಸೆ ಇದೆ. ಹೀಗಾಗಿ ಇನ್ನು ಮುಂದೆ ವಿಲನ್ ಹಾಗೂ ಹಾಸ್ಯನಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನನ್ನನ್ನು ನಾನು ನಟನೆಂದು ರುಜುವಾತುಪಡಿಸಿಕೊಳ್ಳಲು ಇದು ಅವಶ್ಯ ಎನಿಸಿದೆ ಎನ್ನುತ್ತಾರೆ.

ಓರ್ವ ಕಲಾವಿದನಾಗಿ ನಿಲ್ಲು ಎಂದು ಜನ ನನ್ನನ್ನು ಆಶೀರ್ವಹಿಸಿದ್ದಾರೆ. ನೆಚ್ಚಿನ ಅಭಿಮಾನಿಗಳಿಗೆ ನಾನು ಏನನ್ನಾದರೂ ನೀಡಬೇಕು. ಈ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು ಅಭಿಮಾನಿಗಳನ್ನು ಮೆಚ್ಚಿಸಲು ಏನಾದರೂ ಹೊಸದನ್ನು ಮಾಡುತ್ತಿರಬೇಕು ಎನ್ನುವುದು ನನ್ನ ಆಶಯ. ಅದಕ್ಕಾಗಿ ಸದ್ಯವೇ ವಿಲನ್ ಆಗಲಿದ್ದೇನೆ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೆನಪಿರಲಿ, ಪ್ರೇಮ್, ಜೊತೆಗಾರ, ಕನ್ನಡ ಸಿನೆಮಾ