ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಂದೇಶ ನಾಗರಾಜ್ ಕೈಯಲ್ಲಿ ಮೂರ್ನಾಲ್ಕು ಚಿತ್ರಗಳು (Sandesh Nagaraj | Prince | Veerabahu | Huduga Hudugi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟರು ನಾಲ್ಕಾರು ಚಿತ್ರದಲ್ಲಿ ಬ್ಯುಸಿ ಆಗಿರುವುದನ್ನು ಕೇಳಿದ್ದೇವೆ, ಕಂಡಿದ್ದೇವೆ. ಆದರೆ ಮೂರು ನಾಲ್ಕು ಚಿತ್ರದಲ್ಲಿ ಏಕಕಾಲಕ್ಕೆ ತೊಡಗಿಕೊಂಡಿರುವ ನಿರ್ಮಾಪಕರ ಬಗ್ಗೆ ಕೇಳಿರಲಿಕ್ಕಿಲ್ಲ. ಆದರೆ ಇಲ್ಲೊಬ್ಬರು ಅಂಥವರಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿರುವ ಸಂದೇಶ್ ನಾಗರಾಜ್ ಅವರೇ ಇವರು. ಇವರು ತಮ್ಮ ಸಂದೇಶ್ ಕಂಬೈನ್ಸ್ ಅಡಿ ಹತ್ತಾರು ಚಿತ್ರಗಳನ್ನು ನೀಡಿದ್ದು, ಸದ್ಯ ಏಕಕಾಲಕ್ಕೆ ಮೂವರು ಸ್ಟಾರ್ ನಟರ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ 'ಪ್ರಿನ್ಸ್' ಇವರ ನಿರ್ಮಾಣದ ಚಿತ್ರದಲ್ಲಿ ಒಂದು. ಈ ಚಿತ್ರದ ಚಿತ್ರೀಕರಣ ಮುಗಿದಿದೆ. ಎನ್. ಓಂಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಇದೆ. ಈ ಚಿತ್ರ ಶೀಘ್ರವೇ ತೆರೆಗೆ ಬರಲು ಸಜ್ಜಾಗಿದ್ದು, ಸಾಕಷ್ಟು ಕುತೂಹಲವನ್ನು ಪ್ರೇಕ್ಷಕರ ವರ್ಗದಲ್ಲಿ ಮೂಡಿಸಿದೆ.

ಇನ್ನು ದುನಿಯಾ ವಿಜಯ್ ಹಾಗೂ ಪಂಚರಂಗಿ ಖ್ಯಾತಿಯ ನಿಧಿ ಸುಬ್ಬಯ್ಯ ಅಭಿನಯದ ಇನ್ನೊಂದು ಚಿತ್ರ ವೀರಬಾಹು. ಸಾಕಷ್ಟು ಸುದ್ದಿಯಾಗಿ ಇದೀಗ ಕೆಲ ಕಾಲ ವಿಶ್ರಾಂತಿ ಪಡೆದು ನಿರ್ದೇಶನಕ್ಕೆ ಮರಳಿರುವ ಎಸ್. ಮಹೇಂದರ್ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ. ಈ ಚಿತ್ರಕ್ಕೂ ವಿ. ಹರಿಕೃಷ್ಣ ಸಂಗೀತ ಇರುವುದು ವಿಶೇಷ. ಈ ಚಿತ್ರ ಸದ್ಯ ಮಾತಿನ ಮನೆಯಲ್ಲಿ ಇದೆ.

ಇನ್ನು ಮೊನ್ನೆತಾನೆ ಆಡಿಯೊ ಬಿಡುಗಡೆ ಆಗಿರುವ, ಫ್ಯಾಷನ್ ಶೋ ಮೂಲಕ ಜನಪ್ರಿಯವಾಗಿರುವ ಹಾಗೂ ಮೈಸೂರಿನ ಪ್ರತಿ ಕಾಲೇಜಿನಲ್ಲೂ ಕ್ಯಾಂಪೇನ್ ನಡೆಸುತ್ತಿರುವ ಹುಡುಗ ಹುಡುಗಿ ಚಿತ್ರವೂ ಇವರ ಗರಡಿಯಲ್ಲೇ ಸಜ್ಜಾಗುತ್ತಿರುವ ಚಿತ್ರ. ಜೋಶ್ವಾ ಶ್ರೀಧರ್ ಸಂಗೀತ ನೀಡಿರುವ ಈ ಚಿತ್ರವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದಾರೆ. ಒಟ್ಟಾರೆ ಸದ್ಯ ಅತ್ಯಂತ ಸುದ್ದಿಯಲ್ಲಿರುವ ಸಂದೇಶ್ ನಾಗರಾಜ್ ಅದ್ಹೇಗೆ ಏಕಕಾಲಕ್ಕೆ ಇವನ್ನೆಲ್ಲಾ ನಿಭಾಯಿಸುತ್ತಾರೋ ಗೊತ್ತಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂದೇಶ್ ನಾಗರಾಜ್, ಪ್ರಿನ್ಸ್, ವೀರಬಾಹು, ಹುಡುಗ ಹುಡುಗಿ