ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬ್ಯುಸಿ ನಟ ಕೋಮಲ್‌‌ಗೀಗ ಅವಕಾಶಗಳ ಸುರಿಮಳೆ (Komal | Jaggesh | Maryade Ramanna | Warewah | Kalmanja)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟ ಕೋಮಲ್‌ರಷ್ಟು ಬ್ಯುಸಿ ನಟ ಇನ್ನೊಬ್ಬರಿಲ್ಲ ಅನ್ನಬಹುದು. ಏಕಕಾಲಕ್ಕೆ ಮೂರು ಚಿತ್ರದಲ್ಲಿ ನಾಯಕರಾಗಿ ಇವರೀಗ ನಟಿಸುತ್ತಿದ್ದಾರೆ. ಬಹು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟರಾಗಿ ಮಣ್ಣು ಹೊತ್ತಿರುವ ಇವರ ಶ್ರಮಕ್ಕೆ ಹಾಗೂ ತಾಳ್ಮೆಗೆ ಕೊನೆಗೂ ಬೆಲೆ ಸಿಕ್ಕಿದೆ. ಇತ್ತೀಚೆಗೆ ಹಾಸ್ಯ ಚಿತ್ರಗಳು ಥಿಯೇಟರ್‌ಗಳಲ್ಲಿ ಕೆಲ ದಿನ ಠಿಕಾಯಿಸುತ್ತಿದ್ದು, ಇದರಿಂದ ಇವರಿಗೆ ಭಾರೀ ಬೇಡಿಕೆ ಕುದುರಿದೆ.

ಇದರಿಂದ ಕೋಮಲ್ ಕುಮಾರ್ ಈಗ ಏಕಕಾಲಕ್ಕೆ ವಾರೆವ್ಹಾ, ಕಳ್ ಮಂಜ ಹಾಗೂ ಮರ್ಯಾದೆ ರಾಮಣ್ಣ ಮೂರು ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯಕ್ಕಂತೂ ಕಳ್ ಮಂಜ ಹಾಗೂ ವಾರೆವ್ಹಾ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಮರ್ಯಾದೆ ರಾಮಣ್ಣ ಕೂಡಾ ಶೀಘ್ರವೇ ಚಾಲನೆ ಪಡೆಯಲಿದೆ.

ಜೆ.ಜೆ. ಪ್ರೊಡಕ್ಷನ್ ಅಡಿ ಎನ್. ಶಿವಪ್ರಸಾದ್ ಅರ್ಪಿಸಿರುವ ವಾರೆವ್ಹಾ ಚಿತ್ರವನ್ನು ಜೈಜಗದೀಶ್ ನಿರ್ಮಿಸುತ್ತಿದ್ದಾರೆ. ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಆಡಿಯೊ ಬಿಡುಗಡೆ ಶೀಘ್ರವೇ ಆಗಲಿದೆ ಎನ್ನುವುದು ಚಿತ್ರದ ಕುರಿತ ಲೇಟೆಸ್ಟ್ ನ್ಯೂಸ್.

ಇನ್ನು ಸೌಂದರ್ಯ ಲಹರಿ ಕಂಬೈನ್ಸ್ ಅಡಿ ಅನಸೂಯಾ ಕೋಮಲ್ ಕುಮಾರ್ ನಿರ್ಮಾಣದ ಚಿತ್ರ ಕಳ್ಮಂಜ. ಇದನ್ನು ಟಿ. ರಮೇಶ್ ಪ್ರಭಾಕರನ್ ನಿರ್ದೇಶಿಸುತ್ತಿದ್ದಾರೆ. ಎಮಿಲ್ ಅವರ ಸಂಗೀತ ಹಾಗೂ ಟಿ. ಕವಿಯರಸು ಅವರ ಛಾಯಾಗ್ರಹಣ ಇದೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಇನ್ನು ಮರ್ಯಾದೆ ರಾಮಣ್ಣ ಇತ್ತೀಚೆಗೆ ಸುದ್ದಿಯಾದ ಚಿತ್ರ. ಇದರಲ್ಲಿ ಕೋಮಲ್ ಒಂದು ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ತಮ್ಮಯ್ಯ ಕುಮರೇಶ್ ಬಾಬು ಚಿತ್ರದ ನಿರ್ಮಾಪಕರು. ಪತ್ತಿ. ವಿ.ಎಸ್. ಗುರು ಪ್ರಸಾದ್ ನಿರ್ದೇಶಕರು. ಚಿತ್ರದ ಚಿತ್ರೀರಣ ಶೀಘ್ರವೇ ಆರಂಭವಾಗಲಿದೆ ಎನ್ನುವುದು ಸದ್ಯದ ಸುದ್ದಿ. ಒಟ್ಟಾರೆ ಒಂದರ ಹಿಂದೆ ಒಂದು ಚಿತ್ರದಲ್ಲಿ ನಾಯಕರಾಗುತ್ತಿರುವ ಕೋಮಲ್‌ಗೆ ಆಲ್ ದಿ ಬೆಸ್ಟ್ ಅನ್ನೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೋಮಲ್, ಜಗ್ಗೇಶ್, ಮರ್ಯಾದೆ ರಾಮಣ್ಣ, ವಾರೆವ್ಹಾ, ಕಳ್ಮಂಜ