ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೃಷ್ಣನ್ ಲವ್ವಿಗೂ ಮ್ಯಾರೇಜಿಗೂ ಸಂಬಂಧವಿಲ್ಲ! (Krishnan Love Story | Krishnan Marriage Story | Nuthan | Shashank | Ajay Rao)
ಕೃಷ್ಣನ್ ಲವ್ ಸ್ಟೋರಿ ನೋಡಿ ಸಂತಸ ಪಟ್ಟವರಿಗೆ ಇದೀಗ ಕೃಷ್ಣನ್ ಮ್ಯಾರೇಜ್ ಸ್ಟೋರಿ ಸಹ ಬರುತ್ತಿರುವುದು ಸಂತಸ ಮೂಡಿಸಿದೆ. ಆದರೆ ಇದು ಲವ್ ಸ್ಟೋರಿಯ ಮುಂದುವರಿದ ಭಾಗ ಅಲ್ಲ. ಟೈಟಲ್‌ನ ಜನಪ್ರಿಯತೆ ಹಾಗೂ ಹೊಸ ಚಿತ್ರಕ್ಕೆ ಸೂಟ್ ಆಗುವ ರೀತಿ ಇದ್ದುದರಿಂದ ಮಾತ್ರ ಬಳಸಿಕೊಳ್ಳಲಾಗಿದೆಯಂತೆ.
ಇದನ್ನು ಚಿತ್ರದ ನಿರ್ದೇಶಕ ನೂತನ್ ಅವರೇ ಬಹಿರಂಗಪಡಿಸಿದ್ದಾರೆ. ಅದೇನೆಂದರೆ ಇದೊಂದು ಸಕ್ಸಸ್ ಸ್ಟೋರಿಯ ಮುಂದುವರಿದ ಭಾಗ ಅಲ್ಲ. ಒಂದು ಚಿತ್ರ ಗೆದ್ದ ಮಾತ್ರಕ್ಕೆ ಅದೇ ಮಾದರಿಯ, ರೂಪದ ಹಾಗೂ ನಟನೆಯ ಚಿತ್ರಗಳು ಬರುವುದು ಸಾಮಾನ್ಯ. ಆದರೆ ಇದು ಎಲ್ಲಕ್ಕಿಂತ ಭಿನ್ನವಾಗಿ ನಿಲ್ಲುವ ಚಿತ್ರವಾಗಿದೆ ಎನ್ನುವುದು ನಿರ್ದೇಶಕರ ಅಭಿಪ್ರಾಯ.
ಈಗಾಗಲೇ ಸಾಕಷ್ಟು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ನೂತನ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೊರ ಹೊಮ್ಮಲಿದ್ದಾರೆ. ಇವರ ಮೇಲೆ ನಂಬಿಕೆ ಇಟ್ಟು ನಿರ್ಮಾಪಕ ವಿಜಯ್ ಕುಮಾರ್ ಹಣ ಹೂಡಿದ್ದಾರೆ. ರಿಯಲ್ ಎಸ್ಟೇಟ್ ಹಿನ್ನೆಲೆಯಿಂದ ಬಂದಿರುವ ನಿರ್ಮಾಪಕರು ಚಿತ್ರದ ಮೇಲೆ ಸಾಕಷ್ಟು ವಿಶ್ವಾಸ ಹೊಂದಿದ್ದಾರೆ.
ಲವ್ ಸ್ಟೋರಿಯಲ್ಲಿ ನಾನು ಹುಡುಗಿಯ ಹಿಂದೆ ಬಿದ್ದಿದ್ದೆ. ಆದರೆ ಇಲ್ಲಿ ಹುಡುಗಿಯರ ದಂಡು ನನ್ನ ಹಿಂದೆ ಬೀಳುತ್ತದೆ. ಅಲ್ಲಿ ನನ್ನ ಆಯ್ಕೆಗೆ ಹುಡುಗಿ ಮನಸ್ಸು ಮಾಡಬೇಕಿತ್ತು. ಇಲ್ಲಿ ಹುಡುಗಿಯರ ಆಯ್ಕೆಯನ್ನು ನಾನು ಮಾಡಿಕೊಳ್ಳಬೇಕಾಗಿದೆ. ಇದು ಎರಡೂ ಚಿತ್ರದ ನಡುವೆ ಇರುವ ವಿಭಿನ್ನತೆ ಎನ್ನುತ್ತಾರೆ ನಾಯಕ ಅಜಯ್.
ಈ ಚಿತ್ರದಲ್ಲಿ ನಾನು ಸಾಫ್ಟ್‌ವೇರ್ ಉದ್ಯೋಗಿ. ಇದರಿಂದ ನನ್ನ ಗೆಟಪ್ ಕೂಡಾ ಬದಲಾಗಿದೆ. ಇದುವರೆಗೂ ಕೆಳ ಮಧ್ಯಮ ಹಾಗೂ ಸ್ಲಂ ಹುಡುಗನ ರೀತಿಯ ಪಾತ್ರ ಮಾಡುತ್ತಿದ್ದೆ. ಇದೊಂದು ಭಿನ್ನ ಅವಕಾಶ ಸಿಕ್ಕಿದೆ. ಗೆಟಪ್ ಕೂಡಾ ಚೇಂಜ್ ಆಗಿದೆ. ಒಂದು ವಿಶಿಷ್ಟ ಅವಕಾಶ ಸಿಕ್ಕಿದ್ದು ಇದರಲ್ಲಿ ಗೆಲ್ಲುವ ವಿಶ್ವಾಸ ಇದೆ ಎನ್ನುತ್ತಾರೆ. ಕೃಷ್ಣನ ಮ್ಯಾರೇಜ್ ಈ ಬಾರಿಯಾದರೂ ಸುಗಮವಾಗಿ ಆಗಲಿ ಎಂದು ಹಾರೈಸೋಣ.