ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಶಿಷ್ಟ ರೀತಿಯಲ್ಲಿ ಧ್ವನಿ ಸುರುಳಿ ಬಿಡುಗಡೆಗೊಳಿಸಿದ 5 ಈಡಿಯಟ್ಸ್ (5 Idiots | Master Anand | Kannada Cinema | Comedy)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
5 ಈಡಿಯಟ್ಸ್ ಚಿತ್ರದ ಧ್ವನಿಸುರುಳಿಯನ್ನು ಇತ್ತೀಚೆಗೆ ಬಿಡುಗಡೆಗೊಂಡಿದೆ. 'ಮಾಸ್ಟರ್' ಆನಂದ್ ಅವರ ಸಾಕಷ್ಟು ಶ್ರಮ ಈ ಚಿತ್ರದ ಹಿಂದೆ ಇದ್ದು, ಇದರ ಫಲ ನೀಡುವ ದಿನ ಸನಿಹವಾಗುತ್ತಿದ್ದು, ಆಡಿಯೊ ಬಿಡುಗಡೆ ಒಂದು ಮಹತ್ವದ ಘಟ್ಟವಾಗಿ ಮುಗಿದಿದೆ.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಕ್ಕೆ ತೆರಳಿ ಅಲ್ಲೊಂದು ಸಣ್ಣ ಸಮಾರಂಭ ಹಮ್ಮಿಕೊಂಡು ಧ್ವನಿ ಸುರುಳಿ ಬಿಡುಗಡೆ ಮಾಡುವ ವಿಶಿಷ್ಟ ಸಂಪ್ರದಾಯಕ್ಕೆ ಆನಂದ್ ಚಾಲನೆ ನೀಡಿದ್ದಾರೆ. ರಿಂಗ್ ರಿಂಗ್ ಹಾಡು ವಿಭಿನ್ನವಾಗಿದ್ದು, ಇದಕ್ಕೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ತೆಲುಗು ಮೂಲದ ಈ ಹಾಡಿಗೆ ಕನ್ನಡದ ಟಚ್ ನೀಡಲಾಗಿದೆ.

ಕರೋಡ್ ಪತಿ ಎಂಬ ತೆಲುಗು ಚಿತ್ರದಲ್ಲಿ ಕೇಳಿದ್ದ 'ಸುವರ್ಣ, ಸುವರ್ಣ' ಎಂಬ ಗೀತೆಯನ್ನು ಇಲ್ಲಿ ಮರು ಬಳಕೆ ಮಾಡಲಾಗಿದೆ. ಈ ಹಾಡಿಗೆ ಗಾಯಕ ಹೇಮಂತ್ ವಿಶಿಷ್ಟ ಸಂಗೀತ ನೀಡಿದ್ದಾರೆ. ಇದುವರೆಗೂ ಸಾಕಷ್ಟು ಸಮಾರಂಭದಲ್ಲಿ, ಟಿವಿ ವಾಹಿನಿಯಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಡ್ರಂ ಬಾರಿಸುತ್ತಿದ್ದ ದೇವಾ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ.

ನವೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಅಲ್ಲಿಯವರೆಗೆ ಆಡಿಯೋ ಮೂಲಕ ಚಿತ್ರದ ಜನಪ್ರಿಯತೆ ಹೆಚ್ಚಿಸುವ ಕಾರ್ಯ ಆಗಲಿದೆಯಂತೆ. ಒಟ್ಟಾರೆ ಐವರು ಈಡಿಯಟ್‌ಗಳು ಕನ್ನಡದಲ್ಲಿ ಜನರನ್ನು ರಂಜಿಸಲು ಬರುತ್ತಿದ್ದು, ಸಾಕಷ್ಟು ಹಾಸ್ಯ ಚಿತ್ರಗಳ ನಡುವೆ ಇದೂ ಒಂದಾಗುತ್ತದೆಯೋ, ಅಥವಾ ಗೆಲ್ಲುತ್ತದೆಯೋ ಕಾದು ನೋಡಬೇಕು. ಹಾಂ, ಅಂದಹಾಗೆ, ಈ ಚಿತ್ರಕ್ಕೂ ಹಿಂದಿಯ ಅಮೀರ್ ಖಾನ್ ಅವರ 3 ಈಡಿಯಟ್ಸ್‌ಗೂ ಯಾವುದೇ ಸಂಬಂಧವಿಲ್ಲ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 5 ಈಡಿಯಟ್ಸ್, ಮಾಸ್ಟರ್ ಆನಂದ್, ಕನ್ನಡ ಸಿನೆಮಾ, ಹಾಸ್ಯ