ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾ- ಅಜಯ್ ರಾವ್ ಮ್ಯಾರೇಜ್ ಸ್ಟೋರಿ! (Ramya | Ajay Rao | Krishnan Marriage Story)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ರಮ್ಯಾ- ಅಜಯ್ ರಾವ್! ಹೇಗಿದೆ ಜೋಡಿ. ಮಸ್ತಾಗಿದೆ ಅಂತೀರಲ್ಲಾ..? ಅಂದೊಮ್ಮೆ ಎಕ್ಸ್‌ಕ್ಯೂಸ್ ಮಿ ಚಿತ್ರದಲ್ಲಿ ಇನ್ನೂ ಮೀಸೆ ಚಿಗುರದ ಅಜಯ್ ಜೊತೆಗೆ ರಮ್ಯಾ ಜೋಡಿಯಾಗಿ ಮಿಂಚಿದ್ದರು. ಚಿತ್ರ ಭರ್ಜರಿ ಹಿಟ್ ಆಗಿತ್ತು. ಈಗ ಅದೇ ರಮ್ಯಾ ಹಾಗೂ ಅಜಯ್ ಮ್ಯಾರೇಜ್ ಆಗಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಮೂಲೆಯಿಂದ ಕೇಳಿ ಬರುತ್ತಿದೆ.

ಅರೆರೆ, ರಮ್ಯಾಗೂ, ಅಜಯ್‌ಗೂ...! ಅಂತೆಲ್ಲಾ ಲೆಕ್ಕಾಚಾರಕ್ಕೆ ಹೋಗಬೇಡಿ. ವಿಷಯ ಹಾಗೇನೂ ಗಂಭೀರ ಅಲ್ಲ ಬಿಡಿ. ಮತ್ತೆ ಈ ಹಳೇ ಜೋಡಿ ಜೊತೆಯಾಗುತ್ತಿದ್ದಾರೆ. ಅದು ಕೃಷ್ಣನ್ ಮ್ಯಾರೇಜ್ ಸ್ಟೋರಿಯಲ್ಲಿ ಎಂಬ ಸುದ್ದಿಯೀಗ ಕೇಳಿ ಬರುತ್ತಿದೆ.

ಅಜಯ್ ರಾವ್- ರಾಧಿಕಾ ಪಂಡಿತ್ ಅಭಿನಯದ ಕೃಷ್ಣನ್ ಲವ್ ಸ್ಟೋರಿ ಹಿಟ್ ಆಗಿದ್ದೇ ತಡ ಇದೀಗ ಅಜಯ್ ರಾವ್ ಅವರನ್ನೇ ಹಾಕಿಕೊಂಡು ಕೃಷ್ಣನ ಮ್ಯಾರೇಜ್ ಸ್ಟೋರಿ ಎಂಬ ಹೊಸ ಚಿತ್ರವೊಂದು ಬರುತ್ತಿರುವುದು ಈಗ ಹೊಸ ಸುದ್ದಿಯೇನಲ್ಲ ಎಂಬುದು ನಿಮಗೂ ಗೊತ್ತು. ಆದರೆ ಅದಕ್ಕೆ ನಾಯಕಿ ಯಾರು ಎಂಬ ಸುದ್ದಿಗೆ ಈವರೆಗೆ ಉತ್ತರ ದೊರೆತಿರಲಿಲ್ಲ. ಮೊನ್ನೆ ಮುಹೂರ್ತದ ದಿನವೂ ನಾಯಕಿಯ ಮುಖ ಕಂಡಿರಲಿಲ್ಲ. ಆದರೆ ಈಗ ಅಜಯ್‌ಗೆ ರಮ್ಯಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಆರ್. ವಿಜಯ್ ಕುಮಾರ್ ನಿರ್ಮಿಸುತ್ತಿರುವ ಹಾಗೂ ನೂತನ್ ಉಮೇಶ್ ನಿರ್ದೇಶಿಸುತ್ತಿರುವ ಈ ಕೃಷ್ಣನ್ ಮ್ಯಾರೇಜ್ ಸ್ಟೋರಿ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ಅಜಯ್ ಈ ಚಿತ್ರದ ನಾಯಕ ಎಂದು ಚಿತ್ರ ತಂಡ ಹೇಳಿಕೊಂಡಿದ್ದರೂ, ನಾಯಕಿ ಯಾರು ಎಂದು ಈವರೆಗೆ ಹೇಳಿಲ್ಲ. ಹಾಗಾಗಿ ಈ ವಿಚಾರ ಇನ್ನೂ ಅಧಿಕೃತವಾಗಿ ಹೊರಬಂದಿಲ್ಲ. ಅಧಿಕೃತ ಮಾಹಿತಿಗೆ ಇನ್ನೂ ಕಾಯಬೇಕು ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮ್ಯಾ, ಅಜಯ್ ರಾವ್, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಎಕ್ಸ್ಕ್ಯೂಸ್ ಮಿ